HomeKarnatakaBREAKING: ಪಿಜಿ ಮುಂದೆ ಡ್ರಿಂಕ್ಸ್ ಮಾಡಬೇಡಿ ಎಂದಿದ್ದಕ್ಕೆ ಮಾಲೀಕನನ್ನೇ ಹತ್ಯೆಗೈದ ದುರುಳರು

BREAKING: ಪಿಜಿ ಮುಂದೆ ಡ್ರಿಂಕ್ಸ್ ಮಾಡಬೇಡಿ ಎಂದಿದ್ದಕ್ಕೆ ಮಾಲೀಕನನ್ನೇ ಹತ್ಯೆಗೈದ ದುರುಳರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ ನಡೆದಿದೆ. ಪಿಜಿ ಮಾಲಿಕನನ್ನೇ ಬ್ಯಾಟ್ ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಮೂರ್ತಿನಗರದ ಒಎಂಬಿಆರ್ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಪಿಜಿ ಮಾಲೀಕ ಮಾಧವ (41) ಕೊಲೆಯಾದ ದುರ್ದೈವಿ. ಪಿಜಿ ಮುಂದೆ ಡ್ರಿಂಕ್ಸ್ ಮಾದಬೇಡಿ ಎಂದು ಯುವಕರಿಗೆ ಬುದ್ಧಿ ಹೇಳಿದ್ದಕ್ಕೆ ಬ್ಯಾಟ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.

ಸಿಎಂಆರ್ ಕಾಲೇಜು ಮುಂಭಾಗ ಮಾಧವ ಅವರು ಪಿಜಿ ನಡೆಸುತ್ತಿದ್ದರು. ನಿನ್ನೆ ರಾತ್ರಿ ಪಿಜಿ ಮುಂದೆ ಡ್ರಿಂಕ್ಸ್ ಮಾಡುತ್ತಾ ಇಬ್ಬರು ಯುವಕರು ಕುಳಿತಿದ್ದರು. ಇದನ್ನು ಕಂಡ ಮಾಧವ, ಇಲ್ಲಿ ಡ್ರಿಂಕ್ಸ್ ಮಾಡಬೇಡಿ, ಹೋಗಿ ಎಂದು ಹೇಳಿದ್ದರು. ಇಷ್ಟಕ್ಕೆ ಗಲಾಟೆ ಆರಂಭವಾಗಿದೆ. ಯುವಕರಿಬ್ಬರು ಮಾಧವ ಅವರ ತಲೆಗೆ ಬ್ಯಾಟ್ ನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಾಧವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಜಿ ಮಾಲೀಕನ ಹತ್ಯೆ ಕೇಸ್ ನಲ್ಲಿ ರಾಮಮೂರ್ತಿನಗರ ಠಾಣೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಕಮ್ಮನಹಳ್ಳಿಯ ಡಾನ್ ಬ್ರೈಟ್ಸ್, ಜೀವನಹಳ್ಳಿಯ ರಾಕೇಶ್ ಬಂಧಿತರು ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular