HomeLatest Newsಶುಗರ್ ಮತ್ತು ಹಾರ್ಟ್ ಪ್ರಾಬ್ಲಂ ಇದ್ದವರಿಗೆ ಬೆಂಡೆಕಾಯಿ ಒಂದು ವರ ನಿಮಗೊತ್ತಿಲ್ಲದ ಬೆಂಡೆಕಾಯಿಯ 5 ಅದ್ಭುತ...

ಶುಗರ್ ಮತ್ತು ಹಾರ್ಟ್ ಪ್ರಾಬ್ಲಂ ಇದ್ದವರಿಗೆ ಬೆಂಡೆಕಾಯಿ ಒಂದು ವರ ನಿಮಗೊತ್ತಿಲ್ಲದ ಬೆಂಡೆಕಾಯಿಯ 5 ಅದ್ಭುತ ರಹಸ್ಯಗಳು ಇಲ್ಲಿವೆ

ಬೆಂಗಳೂರು: ಮಳೆಗಾಲ ಶುರುವಾಯಿತೆಂದರೆ ಸಾಕು, ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ (Immunity) ಕುಂಠಿತಗೊಳ್ಳುತ್ತದೆ ಮತ್ತು ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ಈ ಋತುವಿನಲ್ಲಿ ಯಾವ ತರಕಾರಿ ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬ ದೊಡ್ಡ ಗೊಂದಲ ಎಲ್ಲರನ್ನೂ ಕಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಬೆಂಡೆಕಾಯಿ (Lady’s Finger) ತಿನ್ನಬಾರದು, ತಿಂದರೆ ಶೀತವಾಗುತ್ತದೆ ಅಥವಾ ಹೊಟ್ಟೆಗೆ ಒಳ್ಳೆಯದಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅಸಲಿಯತ್ತೇನು? ಪೌಷ್ಟಿಕ ತಜ್ಞರು (Nutritionists) ಈ ಬಗ್ಗೆ ಏನು ಹೇಳುತ್ತಾರೆ?

ಮಳೆಗಾಲದಲ್ಲಿ ಬೆಂಡೆಕಾಯಿ ಸೇವಿಸುವುದು ಸುರಕ್ಷಿತವೇ?

ಪೌಷ್ಟಿಕ ತಜ್ಞರ ಪ್ರಕಾರ, ಮಳೆಗಾಲದಲ್ಲಿ ಬೆಂಡೆಕಾಯಿ ತಿನ್ನುವುದು ದೇಹದ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತ ಮತ್ತು ಪ್ರಯೋಜನಕಾರಿ.ಬೆಂಡೆಕಾಯಿ ಮೂಲತಃ ಬೇಸಿಗೆಯಲ್ಲಿ ಹೆಚ್ಚು ಬೆಳೆಯುವ ತರಕಾರಿ. ಹೀಗಾಗಿ ಮಳೆಗಾಲದಲ್ಲಿ ಮಾರ್ಕೆಟ್‌ಗೆ ಬರುವ ಬೆಂಡೆಕಾಯಿಗಳು ಅಷ್ಟೊಂದು ಫ್ರೆಶ್ ಆಗಿ ಕಾಣಿಸದೇ ಇರಬಹುದು ಮತ್ತು ಗುಣಮಟ್ಟ ಕೊಂಚ ಏರುಪೇರಾಗಬಹುದು. ಆದ್ದರಿಂದ ಮಳೆಗಾಲದಲ್ಲಿ ಬೆಂಡೆಕಾಯಿಯನ್ನು ತಂದಾಗ ಅದನ್ನು ಚೆನ್ನಾಗಿ ತೊಳೆದು, ಶುಚಿಗೊಳಿಸಿ, ಸರಿಯಾದ ಕ್ರಮದಲ್ಲಿ ಬೇಯಿಸಿ ಸೇವಿಸುವುದು ಅತ್ಯಗತ್ಯ.

ಬೆಂಡೆಕಾಯಿ ಉಷ್ಣವೇ ಅಥವಾ ಶೀತವೇ?

ಬೆಂಡೆಕಾಯಿ ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ (Cooling Effect) ಗುಣವನ್ನು ಹೊಂದಿದೆ. ವಿಶೇಷವಾಗಿ ಹಸಿ ಬೆಂಡೆಕಾಯಿ ಬೇಸಿಗೆಗೆ ತುಂಬಾ ಒಳ್ಳೆಯದು. ಆದರೆ, ಇದನ್ನೇ ಮಳೆಗಾಲದಲ್ಲಿ ವಿವಿಧ ಮಸಾಲೆ ಪದಾರ್ಥಗಳ ಜೊತೆ ಸೇರಿಸಿ ಚೆನ್ನಾಗಿ ಬೇಯಿಸಿ ಸಾರೋ ಅಥವಾ ಪಲ್ಯವೋ ಮಾಡಿ ತಿಂದಾಗ ಇದು ದೇಹಕ್ಕೆ ಸಮತೋಲಿತ ಉಷ್ಣತೆಯನ್ನು ನೀಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳ ಖಜಾನೆ:

ಬೆಂಡೆಕಾಯಿಯಲ್ಲಿ ಕೊಲೆಸ್ಟ್ರಾಲ್ ಅಂಶವೇ ಇರುವುದಿಲ್ಲ ಕೇವಲ ಅರ್ಧ ಕಪ್ ಬೇಯಿಸಿದ ಬೆಂಡೆಕಾಯಿಯಲ್ಲಿ ಏನೆಲ್ಲಾ ಇರುತ್ತದೆ ನೋಡಿ:

ಕ್ಯಾಲೋರಿಗಳು: 6 ಫೈಬರ್ (ನಾರಿನಂಶ): 2 ಗ್ರಾಂ ಪ್ರೋಟೀನ್: 5 ಗ್ರಾಂ

ಕಾರ್ಬೋಹೈಡ್ರೇಟ್ಸ್: 6 ಗ್ರಾಂ ಸೋಡಿಯಂ: 8 ಮಿಗ್ರಾಂ

ವಿಟಮಿನ್ಸ್: ವಿಟಮಿನ್ ಸಿ (13 ಮಿಗ್ರಾಂ), ವಿಟಮಿನ್ ಕೆ (32 ಎಂಸಿಜಿ), ಫೋಲೇಟ್/ಬಿ9 (8 ಎಂಸಿಜಿ), ಹಾಗೂ ವಿಟಮಿನ್ ಎ.

ಖನಿಜಗಳು: ಕ್ಯಾಲ್ಸಿಯಂ (6 ಮಿಗ್ರಾಂ), ಮೆಗ್ನೀಸಿಯಮ್ (8 ಮಿಗ್ರಾಂ) ಮತ್ತು ಮ್ಯಾಂಗನೀಸ್ (2 ಮಿಗ್ರಾಂ).

ಬೆಂಡೆಕಾಯಿ ತಿನ್ನುವುದರಿಂದ ಸಿಗುವ 5 ಬಿಗ್ ಹೆಲ್ತ್ ಬೆನಿಫಿಟ್ಸ್:

ಹೃದಯದ ಆರೋಗ್ಯಕ್ಕೆ ರಾಮಬಾಣ: ದಿನನಿತ್ಯ ಬೆಂಡೆಕಾಯಿ ಸೇವಿಸುವವರಲ್ಲಿ ಟ್ರೈಗ್ಲಿಸರೈಡ್‌ಗಳು, ಒಟ್ಟು ಕೊಲೆಸ್ಟ್ರಾಲ್ ಮತ್ತು ಎಲ್‌ಡಿಎಲ್ (LDL – ಕೆಟ್ಟ ಕೊಬ್ಬು) ಮಟ್ಟ ತೀರಾ ಕಡಿಮೆಯಾಗಿ, ಎಚ್‌ಡಿಎಲ್ (HDL – ಉತ್ತಮ ಕೊಬ್ಬು) ಮಟ್ಟ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಹಾರ್ಟ್ ಅಟ್ಯಾಕ್ ಅಪಾಯವನ್ನು ತಪ್ಪಿಸುತ್ತದೆ.

ಶಕ್ತಿಯುತ ಜೀರ್ಣಕ್ರಿಯೆ ಮತ್ತು ಲಿಕ್ವಿಡ್ ಜೆಲ್ ಮಹಿಮೆ: ಬೆಂಡೆಕಾಯಿಯಲ್ಲಿರುವ ಜಿಗುಟಾದ ನೈಸರ್ಗಿಕ ಜೆಲ್ (ಲೋಳೆ) ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಹಾಗೂ ಮಲಬದ್ಧತೆ (Constipation) ಸಮಸ್ಯೆಯನ್ನು ಜಟಾಯು ವೇಗದಲ್ಲಿ ಓಡಿಸುತ್ತದೆ.

ಶುಗರ್ ಕಂಟ್ರೋಲ್ (Diabetes Control): ಇದರಲ್ಲಿರುವ ಹೈ ಫೈಬರ್ ಅಂಶವು ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ರಕ್ತದಲ್ಲಿ ಗ್ಲೂಕೋಸ್ ಮಟ್ಟ ದಿಢೀರ್ ಏರಿಕೆಯಾಗದೆ ನಿಯಂತ್ರಣದಲ್ಲಿರುತ್ತದೆ.

ಕ್ಯಾನ್ಸರ್ ಮತ್ತು ಬಿಪಿ ನಿಯಂತ್ರಣ: ಬೆಂಡೆಕಾಯಿಯಲ್ಲಿರುವ ಫೈಟೊಕೆಮಿಕಲ್‌ಗಳು ದೇಹದಲ್ಲಿನ ಉರಿಯೂತವನ್ನು (Inflammation) ಕಡಿಮೆ ಮಾಡಿ, ಕೊಲೊನ್ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತವೆ. ಜೊತೆಗೆ ರಕ್ತದೊತ್ತಡವನ್ನು (BP) ನಾರ್ಮಲ್ ಆಗಿಡುತ್ತದೆ.

ಚರ್ಮ ಮತ್ತು ಕಣ್ಣಿನ ಆರೈಕೆ: ಮಳೆಗಾಲದಲ್ಲಿ ತೇವಾಂಶದ ಕಾರಣ ಚರ್ಮದ ಅಲರ್ಜಿಗಳು ಕಾಡುವುದು ಹೆಚ್ಚು. ಬೆಂಡೆಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಎ ಅಂಶಗಳು ಚರ್ಮದ ಕಾಂತಿ ಹೆಚ್ಚಿಸುವುದಲ್ಲದೆ, ಕಣ್ಣಿನ ದೃಷ್ಟಿ ದೋಷ ನಿವಾರಣೆಗೂ ಅತ್ಯುತ್ತಮ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular