HomeInternationalಬರೋಬ್ಬರಿ 34 ಸಾವಿರ ಬಿಯರ್ ಕ್ಯಾನ್ ಎಗರಿಸಿದ ಖದೀಮರು ; ಕಳ್ಳರಿಗೇ ಕಂಪನಿಯಿಂದ ಬಂಪರ್ ಆಫರ್...

ಬರೋಬ್ಬರಿ 34 ಸಾವಿರ ಬಿಯರ್ ಕ್ಯಾನ್ ಎಗರಿಸಿದ ಖದೀಮರು ; ಕಳ್ಳರಿಗೇ ಕಂಪನಿಯಿಂದ ಬಂಪರ್ ಆಫರ್ !

ಅಮೆರಿಕದಲ್ಲಿ ಸಿನೆಮಾ ಶೈಲಿಯ ಬೃಹತ್ ಕಳ್ಳತನವೊಂದು ನಡೆದಿದ್ದು, ಖದೀಮರ ಗ್ಯಾಂಗ್ ಒಂದು ಬರೋಬ್ಬರಿ 40,000 ಪೌಂಡ್ (ಸುಮಾರು 18,000 ಕೆ.ಜಿ.) ತೂಕದ ಬೀರ್ ಕ್ಯಾನ್‌ಗಳನ್ನು ಲಪಟಾಯಿಸಿದೆ. ಈ ಭಾರಿ ಕಳ್ಳತನದ ಬೆನ್ನಲ್ಲೇ ಸಂತ್ರಸ್ತ ಬೀರ್ ತಯಾರಿಕಾ ಕಂಪನಿ ‘ಪ್ಯಾಬ್ಸ್ಟ್ ಬ್ಲೂ ರಿಬ್ಬನ್’ (PBR), ಕಳ್ಳರಿಗೆ ಇನ್‌ಸ್ಟಾಗ್ರಾಮ್ ಮೂಲಕ ವಿಶಿಷ್ಟ ಅಲ್ಟಿಮೇಟಂ ಹಾಗೂ ನಗದು ಬಹುಮಾನದ ಆಫರ್ ನೀಡಿ ಎಲ್ಲರ ಹುಬ್ಬೇರಿಸಿದೆ.

ನಕಲಿ ದಾಖಲೆ ತೋರಿಸಿ ಬೀರ್ ಲೂಟಿ : ಕ್ಯಾಲಿಫೋರ್ನಿಯಾದ ಮಾಂಟ್‌ಕ್ಲೇರ್‌ನಲ್ಲಿರುವ ಅನ್‌ಹ್ಯೂಸರ್-ಬುಷ್ ವಿತರಣಾ ಕೇಂದ್ರದಿಂದ ಈ ಕಳ್ಳತನ ನಡೆದಿದೆ. ನಕಲಿ ಉಪಗುತ್ತಿಗೆ (Subcontracting) ಕಂಪನಿಯ ದಾಖಲೆಗಳನ್ನು ಸೃಷ್ಟಿಸಿ ಬಂದ ಖದೀಮರು, ಸಿಬ್ಬಂದಿಯನ್ನೇ ಯಾಮಾರಿಸಿ ಎರಡು ಲೋಡ್ ಬೀರ್ ಹೊತ್ತೊಯ್ದಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ಅರಿಝೋನಾಗೆ ತೆರಳಬೇಕಿದ್ದ ಸುಮಾರು 45,000 ಡಾಲರ್ (ಅಂದಾಜು ₹37 ಲಕ್ಷ) ಮೌಲ್ಯದ ಮೊದಲ ಲೋಡ್ ಮಾಯವಾಯಿತು. ಒಂದು ಗಂಟೆಯ ನಂತರ ಮತ್ತೊಂದು ಟ್ರಕ್‌ನಲ್ಲಿದ್ದ 25,000 ಡಾಲರ್ (ಅಂದಾಜು ₹21 ಲಕ್ಷ) ಮೌಲ್ಯದ ಎರಡನೇ ಲೋಡ್ ನಾಪತ್ತೆಯಾಯಿತು. ಒಟ್ಟಾರೆಯಾಗಿ 1,602 ಬಾಕ್ಸ್‌ಗಳಲ್ಲಿದ್ದ ಬರೋಬ್ಬರಿ 33,984 ಬೀರ್ ಕ್ಯಾನ್‌ಗಳನ್ನು ಕಳ್ಳರು ಲಪಟಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್‌ಸ್ಟಾಗ್ರಾಮ್‌ನಲ್ಲಿ ಕೌಂಟ್‌ಡೌನ್: ಕಳ್ಳತನದ ನಂತರ ಪ್ಯಾಬ್ಸ್ಟ್ ಕಂಪನಿಯು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಕಳ್ಳರನ್ನು ನೇರವಾಗಿ ಉದ್ದೇಶಿಸಿ ತಮಾಷೆಯ ಧಾಟಿಯಲ್ಲಿ ಗಂಭೀರ ಎಚ್ಚರಿಕೆ ನೀಡಿದೆ.

“ನಿಮ್ಮ ಬಳಿ ಇಷ್ಟೊಂದು ಪ್ಯಾಬ್ಸ್ಟ್ ಬೀರ್ ಸಂಗ್ರಹವಿದೆ ಎಂದು ಸ್ನೇಹಿತರ ಮುಂದೆ ಬೀಗುವುದನ್ನು ನಾವು ತಪ್ಪೆಂದು ಭಾವಿಸುವುದಿಲ್ಲ. ಆದರೆ ನೀವು ಅದನ್ನು ಗೌರವಯುತ ಮಾರ್ಗದಲ್ಲಿ ಪಡೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ನಮ್ಮ ಬೀರ್ ಅನ್ನು ಯಾವುದೇ ಪ್ರಶ್ನೆ ಕೇಳದೆ ವಾಪಸ್ ನೀಡಲು ನಿಮಗೆ ಸರಿಯಾಗಿ 18 ದಿನ 44 ನಿಮಿಷಗಳ ಗಡುವು ನೀಡುತ್ತಿದ್ದೇವೆ. ಸರಕನ್ನು ಸುರಕ್ಷಿತವಾಗಿ ಮರಳಿಸಿದರೆ ಅದರ ಒಟ್ಟು ಮೌಲ್ಯದ ಅರ್ಧದಷ್ಟು ಮೊತ್ತವನ್ನು ನಿಮಗೆ ಬಹುಮಾನವಾಗಿ ನೀಡಲಾಗುವುದು. ಇದು ತಮಾಷೆಯಲ್ಲ, ನಾವು ಗಂಭೀರವಾಗಿದ್ದೇವೆ.” ಎಂದು ಹೇಳಿದೆ.

ಕಂಪನಿಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಜಾಗತಿಕ ಖ್ಯಾತಿಯ ಕಿಟ್‌ಕ್ಯಾಟ್ (KitKat) ಕಂಪನಿ ಇದಕ್ಕೆ ಪ್ರತಿಕ್ರಿಯಿಸಿ, “ನಮಗೂ ಇಂಥ ಕಹಿ ಅನುಭವ ಚೆನ್ನಾಗಿ ಗೊತ್ತು” ಎಂದು ಕಮೆಂಟ್ ಮಾಡಿದೆ. ಇಟಲಿಯಿಂದ ಪೋಲೆಂಡ್‌ಗೆ ತೆರಳುತ್ದ್ದ ನೆಸ್ಲೆ ಕಂಪನಿಯ 12 ಟನ್ ಕಿಟ್‌ಕ್ಯಾಟ್ ಚಾಕೊಲೇಟ್‌ಗಳಿದ್ದ (4 ಲಕ್ಷಕ್ಕೂ ಹೆಚ್ಚು ಚಾಕೊಲೇಟ್‌) ಟ್ರಕ್ ಕೂಡ ಇತ್ತೀಚೆಗೆ ಇದೇ ರೀತಿ ಕಳ್ಳತನವಾಗಿತ್ತು.

ಪೊಲೀಸ್ ತನಿಖೆ ಚುರುಕು: ಯಾವುದೇ ಟ್ರಕ್ ಕಳ್ಳತನವಾಗಿಲ್ಲ, ಕೇವಲ ಬೀರ್ ತುಂಬಿದ್ದ ಸರಕನ್ನು ಮಾತ್ರ ನಕಲಿ ದಾಖಲೆ ಮೂಲಕ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದಲ್ಲಿ, ವಿಶೇಷವಾಗಿ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ಪಾನೀಯಗಳ ಕಳ್ಳಸಾಗಣೆ ಅಪರಾಧಗಳು ಗಣನೀಯವಾಗಿ ಹೆಚ್ಚಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular