ಬೆಂಗಳೂರು ವಿಭಾಗದ ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವೆ ಲೆವೆಲ್ ಕ್ರಾಸಿಂಗ್ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಚಿಕ್ಕಮಗಳೂರು -ಯಶವಂತಪುರ -ಚಿಕ್ಕಮಗಳೂರು ದೈನಂದಿನ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಏಪ್ರಿಲ್ 8 ಮತ್ತು 15 ರಂದು ರದ್ದುಗೊಳಿಸಲಾಗಿದೆ.
ಏಪ್ರಿಲ್ 8, 11, 12 ಮತ್ತು 15 ರಂದು ತಾಳಗುಪ್ಪ –ಕೆ,ಎಸ್,ಆರ್, ಬೆಂಗಳೂರು ಎಕ್ಸ್ ಪ್ರೆಸ್ ರೈಲು ಅರಸೀಕೆರೆ ಮತ್ತು ಬೆಂಗಳೂರು ನಡುವೆ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ಸಂಚಾರ ಮುಕ್ತಾಯಗೊಳಿಸಲಿದೆ.
ಏಪ್ರಿಲ್ 8, 11, 12 ಮತ್ತು 15 ರಂದು ಕೆ,ಎಸ್,ಆರ್, ಬೆಂಗಳೂರು -ಧಾರವಾಡ ಸಿದ್ದಗಂಗಾ ಎಕ್ಸ್ ಪ್ರೆಸ್ ರೈಲು ಬೆಂಗಳೂರು ಮತ್ತು ಅರಸೀಕೆರೆ ನಡುವೆ ರದ್ದಾಗಲಿದೆ. ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಏಪ್ರಿಲ್ 8 ಮತ್ತು 15 ರಂದು ಹೊರಡುವ ಯಶವಂತಪುರ -ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ಚಿಕ್ಕಬಾಣಾವರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗದ ಮೂಲಕ ಸಂಚರಿಸಲಿದೆ. ಹೀಗಾಗಿ ತುಮಕೂರು ಮತ್ತು ತಿಪಟೂರು ಸಂಚಾರ ಇರುವುದಿಲ್ಲ.
ಏಪ್ರಿಲ್ 11 ಮತ್ತು 12 ರಂದು ಯಶವಂತಪುರ -ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ಮಾರ್ಗ ಮಧ್ಯೆ 60 ನಿಮಿಷ ನಿಯಂತ್ರಣವಾಗಲಿದೆ.

