HomeLatest Newsಕ್ರೋಸೆಂಟ್ ಜೊತೆ ಗುಲಾಬ್ ಜಾಮೂನ್ ಜುಗಲ್‌ಬಂದಿ ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಿರೋ ಈ ಸ್ವೀಟ್ ಹಾರ್ಟ್ ಅಟ್ಯಾಕ್...

ಕ್ರೋಸೆಂಟ್ ಜೊತೆ ಗುಲಾಬ್ ಜಾಮೂನ್ ಜುಗಲ್‌ಬಂದಿ ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಿರೋ ಈ ಸ್ವೀಟ್ ಹಾರ್ಟ್ ಅಟ್ಯಾಕ್ ಬಗ್ಗೆ ನೆಟ್ಟಿಗರು ಏನಂತಾರೆ?

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವಿಚಿತ್ರ ಆಹಾರ ಪ್ರಯೋಗಗಳು (Food Fusion) ವೈರಲ್ ಆಗುತ್ತಿರುತ್ತವೆ. ಈಗ ಅಂತಹದ್ದೇ ಒಂದು ಹೊಸ ಸಿಹಿತಿಂಡಿ ಸುದ್ದಿಯಲ್ಲಿದೆ, ಅದೇ ಕ್ರೋಮನ್ (Cromun). ಫ್ರಾನ್ಸ್‌ನ ಪ್ರಸಿದ್ಧ ಕ್ರೋಸೆಂಟ್ (Croissant) ಮತ್ತು ಭಾರತದ ಹೆಮ್ಮೆಯ ಗುಲಾಬ್ ಜಾಮೂನ್ ಸೇರಿಸಿ ಮಾಡಿರುವ ಈ ತಿಂಡಿ ಈಗ ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.

ಬೆಣ್ಣೆಯುಕ್ತವಾಗಿ ಪದರ ಪದರವಾಗಿರುವ ಕ್ರೋಸೆಂಟ್ ಒಳಗಡೆ ಸಕ್ಕರೆ ಪಾಕದಲ್ಲಿ ಅದ್ದಿದ ಗುಲಾಬ್ ಜಾಮೂನ್ ಇರಿಸಿ ತಯಾರಿಸಲಾದ ಈ ತಿಂಡಿಯ ಫೋಟೋಗಳು ಈಗ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಏನಿದು ಕ್ರೋಮನ್ ವಿಶೇಷತೆ?

ಈ ವಿಚಿತ್ರ ತಿಂಡಿಯ ಫೋಟೋ ಎಕ್ಸ್ (X) ನಲ್ಲಿ ವೈರಲ್ ಆಗಿದ್ದು, ಅದನ್ನು ಸವಿದ ವ್ಯಕ್ತಿಯೊಬ್ಬರು ನನ್ನ ಮನೆಯ ಹತ್ತಿರದ ಬೇಕರಿಯಲ್ಲಿ ಗುಲಾಬ್ ಜಾಮೂನ್ ಸ್ಟಫ್ ಮಾಡಿದ ಕ್ರೋಸೆಂಟ್ ಸಿಗುತ್ತಿದೆ ಎಂದು ಆಶ್ಚರ್ಯ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಯಾರಿಕೆ: ಗರಿಗರಿಯಾದ ಬೆಣ್ಣೆಯುಕ್ತ ಕ್ರೋಸೆಂಟ್ ಪೇಸ್ಟ್ರಿಯ ಒಳಗೆ ಸಕ್ಕರೆ ಪಾಕವಿರುವ ಗುಲಾಬ್ ಜಾಮೂನ್ ಅನ್ನು ಇರಿಸಲಾಗುತ್ತದೆ.

ರುಚಿ: ಇದನ್ನು ಸವಿದವರ ಪ್ರಕಾರ, ಇದು ತುಂಬಾ ಸಿಹಿಯಾಗಿದೆ, ಆದರೆ ಅಪ್ಪಟ ಗುಲಾಬ್ ಜಾಮೂನ್ ಅಥವಾ ಅಪ್ಪಟ ಕ್ರೋಸೆಂಟ್ ಎರಡೂ ಅಲ್ಲದ ಹೊಸ ಅನುಭವ ನೀಡುತ್ತದೆ” ಎಂದಿದ್ದಾರೆ.

ಕ್ಯಾಲೋರಿಗಳ ಲೆಕ್ಕಾಚಾರ: ಎಚ್ಚರ ಅಗತ್ಯ

ರುಚಿಯ ಮಾತು ಹಾಗಿರಲಿ, ಈ ಕ್ರೋಮನ್ ತಿನ್ನುವ ಮುನ್ನ ಅದರ ಕ್ಯಾಲೋರಿಗಳ ಬಗ್ಗೆ ತಿಳಿದರೆ ನೀವು ಬೆಚ್ಚಿಬೀಳುತ್ತೀರಿ:

ಕ್ರೋಸೆಂಟ್: ಸಾಮಾನ್ಯವಾಗಿ ಒಂದು ಕ್ರೋಸೆಂಟ್‌ನಲ್ಲಿ 230 ರಿಂದ 270 ಕ್ಯಾಲೋರಿ ಇರುತ್ತದೆ.ಈ ಒಂದು ‘ಕ್ರೋಮನ್’ ಬೆಲೆ ₹165.

ಗುಲಾಬ್ ಜಾಮೂನ್: ಪಾಕದಲ್ಲಿ ಅದ್ದಿದ ಒಂದು ಜಾಮೂನ್ ಸುಮಾರು 150 ರಿಂದ 200 ಕ್ಯಾಲೋರಿ ಹೊಂದಿರುತ್ತದೆ.

ಒಟ್ಟು ಕ್ಯಾಲೋರಿ: ನೀವು ಕೇವಲ ಒಂದು ಕ್ರೋಮನ್ ತಿಂದರೆ ಸಾಕು, ನಿಮ್ಮ ದೇಹಕ್ಕೆ ಬರೋಬ್ಬರಿ 400 ರಿಂದ 500ಕ್ಕೂ ಅಧಿಕ ಕ್ಯಾಲೋರಿ ಸೇರುತ್ತದೆ ಇದು ದಿನದ ಒಟ್ಟು ಕ್ಯಾಲೋರಿ ಮಿತಿಯ ಮೇಲೆ ಭಾರಿ ಪರಿಣಾಮ ಬೀರಬಲ್ಲದು.

ನೆಟ್ಟಿಗರ ರಿಯಾಕ್ಷನ್ ಹೇಗಿದೆ?

ಪವಿತ್ರ ತಿಂಡಿಗಳ ಅಪಮಾನ”: “ಕೆಲವು ತಿಂಡಿಗಳನ್ನು ಹಾಗೆಯೇ ಬಿಡುವುದು ಲೇಸು. ಗುಲಾಬ್ ಜಾಮೂನ್ ಮತ್ತು ಕ್ರೋಸೆಂಟ್ ಎರಡೂ ತನ್ನದೇ ಆದ ವಿಶಿಷ್ಟ ರುಚಿ ಹೊಂದಿವೆ. ಇವೆರಡನ್ನೂ ಬೆರೆಸಿ ಕೆಡಿಸಬೇಡಿ” ಎಂದು ಅನೇಕರು ಕಿಡಿಕಾರಿದ್ದಾರೆ.

“ಡಯಾಬಿಟಿಸ್ ಬಾಂಬ್”: ಇನ್ನು ಕೆಲವು ನೆಟ್ಟಿಗರು, “ಇದನ್ನು ತಿಂದರೆ ಒಂದೇ ಸಲಕ್ಕೆ ಶುಗರ್ ಲೆವೆಲ್ ಎಲ್ಲಿಗೋ ಹೋಗುತ್ತದೆ, ಇದೊಂದು ಸಕ್ಕರೆ ಕಾಯಿಲೆಗೆ ನೀಡುವ ಆಹ್ವಾನ” ಎಂದು ವ್ಯಂಗ್ಯವಾಡಿದ್ದಾರೆ.

ಫ್ಯೂಷನ್ ಹಾವಳಿ: “ಇತ್ತೀಚೆಗೆ ಮ್ಯಾಗಿ ಜೊತೆ ಐಸ್‌ಕ್ರೀಮ್, ಚಾಕಲೇಟ್ ದೋಸೆ ಆಯ್ತು, ಈಗ ಇದು ಬಾಕಿ ಇತ್ತು” ಎಂದು ಫುಡ್ ಫ್ಯೂಷನ್ ಹೆಸರಿನಲ್ಲಿ ನಡೆಯುವ ವಿಚಿತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular