HomeBusinessಎಲ್ಲಾ ಗ್ರಾಹಕರಿಗೆ ಭಾಗಶಃ ವಿದ್ಯುತ್ ಬಿಲ್ ಪಾವತಿಸಲು ಅವಕಾಶ

ಎಲ್ಲಾ ಗ್ರಾಹಕರಿಗೆ ಭಾಗಶಃ ವಿದ್ಯುತ್ ಬಿಲ್ ಪಾವತಿಸಲು ಅವಕಾಶ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆ ಮಾಡಿರುವುದರಿಂದ ಎರಡು ತಿಂಗಳ ವಿದ್ಯುತ್ ಬಿಲ್ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ಎಲ್ಲಾ ಬಗೆಯ ಗ್ರಾಹಕರಿಗೆ ವಿದ್ಯುತ್ ಬಿಲ್ ಭಾಗಶಃ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ವಿದ್ಯುಚ್ಛಕ್ತಿ ಕಾಯ್ದೆ 2003 ರ 56 ನೇ ಸೆಕ್ಷನ್ ಅಡಿ ಭಾಗಶಃ ಬಿಲ್ ಪಾವತಿಸಬಹುದು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಸಿಕ ಬಿಲ್ ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಿಲ್ ಬಂದಲ್ಲಿ ಗ್ರಾಹಕರಿಗೆ ಕಂತಿನಲ್ಲಿ ಬಿಲ್ ಪಾವತಿಸಲು ಅವಕಾಶವಿದ್ದು, ಕೈಗಾರಿಕೆ ಹೊರತುಪಡಿಸಿ ಬೇರೆ ಗ್ರಾಹಕರು ಇದನ್ನು ಬಳಸಿಕೊಂಡಿಲ್ಲ. ಎಲ್ಲ ಗೃಹಬಳಕೆ ಗ್ರಾಹಕರು ಕೂಡ ಲಿಖಿತ ಮನವಿ ಮಾಡಿಕೊಂಡಲ್ಲಿ ಭಾಗಶಃ ಬಿಲ್ ಪಾವತಿಗೆ ಅವಕಾಶ ಕಲ್ಪಿಸಲಾಗುತ್ತದೆ. ದುಪ್ಪಟ್ಟು ಬಿಲ್ ಬಂದಿರುವುದರಿಂದ ಗ್ರಾಹಕರು ಆಕ್ಷೇಪಣೆ ಸಲ್ಲಿಸಿ ಅರ್ಧದಷ್ಟು ಮೊತ್ತವನ್ನು ಮಾತ್ರ ಪಾವತಿಸಬಹುದು.

ಎಸ್ಕಾಂ ನೀಡುವ ಮಾಸಿಕ ಬಿಲ್ ನಲ್ಲಿ ಹಿಂದಿಗಿಂತ ಹೆಚ್ಚಿನ ಮೊತ್ತ ನಮೂದಾಗಿದ್ದರೆ ಆರು ತಿಂಗಳ ಬಿಲ್ ಸರಾಸರಿ ಮೊತ್ತವನ್ನು ಮಾತ್ರ ಹಾಲಿ ತಿಂಗಳಲ್ಲಿ ಪಾವತಿಸಬಹುದು. ವಿದ್ಯುತ್ ಉಪ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಲಿಖಿತವಾಗಿ ಮನವಿ ಸಲ್ಲಿಸಿ ಪುರಸ್ಕೃತವಾದ ಮನವಿಯ ನಕಲು ಪ್ರತಿಯನ್ನು ಬಿಲ್ ಕೌಂಟರ್ ನಲ್ಲಿ ನೀಡಿ ಅರ್ಧದಷ್ಟು ಬಿಲ್ ಪಾವತಿಸಬಹುದು. ಈ ತಿಂಗಳಿಗೆ ಆರ್ಥಿಕ ಹೊರೆ ಕೊಂಚ ಕಡಿಮೆ ಮಾಡಿಕೊಂಡು ಉಳಿದ ಮೊತ್ತವನ್ನು ನಂತರ ಪಾವತಿಸಬೇಕಿದೆ ಎನ್ನಲಾಗಿದ್ದು, ಎಲ್ಲಾ ಗ್ರಾಹಕರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular