HomeAgricultureಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮುಗಿಲು ಮುಟ್ಟಿದ ಹಣ್ಣು - ತರಕಾರಿ ಬೆಲೆ

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಮುಗಿಲು ಮುಟ್ಟಿದ ಹಣ್ಣು – ತರಕಾರಿ ಬೆಲೆ

ಪೆಟ್ರೋಲ್ – ಡೀಸೆಲ್ ದರ ಮುಗಿಲು ಮುಟ್ಟಿರುವುದರಿಂದ ಈಗಾಗಲೇ ಹಲವು ದೈನಂದಿನ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಇದೀಗ ಚಂಡಮಾರುತ ಹಾಗೂ ಮುಂಗಾರು ಮಳೆಯ ವಿಳಂಬದ ಕಾರಣಕ್ಕೆ ಹಣ್ಣು ತರಕಾರಿಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇವಲ ಒಂದು ವಾರದ ಅವಧಿಯಲ್ಲಿ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗಿದ್ದು, ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗುವ ಗ್ರಾಹಕರು ಜೇಬಿನ ತುಂಬಾ ಹಣ ತೆಗೆದುಕೊಂಡು ಹೋಗುವಂತಾಗಿದೆ. ಹಣ್ಣುಗಳ ಬೆಲೆಯಲ್ಲೂ ಸಹ ಏರಿಕೆಯಾಗಿದ್ದು, ತಿನ್ನಲು ಹಿಂದೆ ಮುಂದೆ ನೋಡುವಂತಾಗಿದೆ.

ಕೆಜಿಗೆ 80 ರೂಪಾಯಿಗಳಿದ್ದ ಬೀನ್ಸ್ ದರ ಈಗ 120 ರೂಪಾಯಿ ಆಸುಪಾಸಿನಲ್ಲಿದ್ದು, 40 ರೂಪಾಯಿಗಳಿದ್ದ ಕ್ಯಾರೆಟ್ ಈಗ 80 ರೂ. ತಲುಪಿದೆ. ಇನ್ನು 30 ರೂಪಾಯಿ ಇದ್ದ ಟೊಮೊಟೊ 60 ರೂಪಾಯಿ ತಲುಪಿದ್ದು, 50 ರೂಪಾಯಿ ಇದ್ದ ಮೆಣಸಿನ ಕಾಯಿ 80 ರೂಪಾಯಿ ಮುಟ್ಟಿದೆ. ಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದ್ದು ಕೆಜಿಗೆ 180 ರೂ. ಇದ್ದ ಸೇಬಿನ ದರ ಈಗ 220 ರಿಂದ 260 ರೂ. ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular