HomeLatest Newsಪಾರ್ಕಿನ್ಸನ್ ಕಾಯಿಲೆ: ವಯಸ್ಸಿನ ಸಹಜ ಲಕ್ಷಣವೋ ಅಥವಾ ಗಂಭೀರ ಆರೋಗ್ಯ ಎಚ್ಚರಿಕೆಯೋ?

ಪಾರ್ಕಿನ್ಸನ್ ಕಾಯಿಲೆ: ವಯಸ್ಸಿನ ಸಹಜ ಲಕ್ಷಣವೋ ಅಥವಾ ಗಂಭೀರ ಆರೋಗ್ಯ ಎಚ್ಚರಿಕೆಯೋ?

ಸಾಮಾನ್ಯವಾಗಿ ವಯಸ್ಸಾದಂತೆ ಮೈಕೈ ಬಿಗಿಯಾಗುವುದು (stiffness), ನಡಿಗೆ ನಿಧಾನಗೊಳ್ಳುವುದು ಅಥವಾ ಸಮತೋಲನ ತಪ್ಪುವುದು ಸಹಜವೆಂದು ನಾವು ನಿರ್ಲಕ್ಷಿಸುತ್ತೇವೆ. ಆದರೆ ನರರೋಗ ತಜ್ಞರ (Neurologists) ಎಚ್ಚರಿಕೆಯ ಪ್ರಕಾರ, ಇಡೀ ದೇಹದಲ್ಲಿ ಕಾಣಿಸುವ ಬಿಗಿತ ಹಾಗೂ ಚಲನೆಯಲ್ಲಿ ನಿಧಾನತೆ ಕೇವಲ ವಯಸ್ಸಿನ ಪರಿಣಾಮವಲ್ಲ. ಇವು ನರಮಂಡಲದ ಮೇಲೆ ಪರಿಣಾಮ ಬೀರುವ ಪ್ರಗತಿಶೀಲ ಅಸ್ವಸ್ಥತೆಯಾದ ಪಾರ್ಕಿನ್ಸನ್ ಕಾಯಿಲೆಯ (Parkinson’s disease) ಆರಂಭಿಕ ಸೂಚನೆಗಳಾಗಿರಬಹುದು. ಈ ಕಾಯಿಲೆಯನ್ನು ಮೊದಲ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಆರಂಭಿಸಿದರೆ ಉತ್ತಮ ಆರೋಗ್ಯ ಫಲಿತಾಂಶಗಳನ್ನು ಪಡೆಯಲು ಸಾಧ್ಯ.

ಏನಿದು ಪಾರ್ಕಿನ್ಸನ್ ಕಾಯಿಲೆ?

ನಮ್ಮ ಮಿದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕವಿರುತ್ತದೆ. ಇದು ನಮ್ಮ ದೇಹದ ಚಲನೆಯನ್ನು ಸರಾಗವಾಗಿಡುವಂತೆ ಮಾಡುತ್ತದೆ. ಮಿದುಳಿನ ಸಬ್‌ಸ್ಟಾಂಟಿಯಾ ನಿಗ್ರಾ ಎಂಬ ಭಾಗದಲ್ಲಿ ಈ ಡೋಪಮೈನ್ ಉತ್ಪಾದಿಸುವ ನರಕೋಶಗಳು ಕ್ಷೀಣಿಸಿದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಇದು ಹೆಚ್ಚಾದರೂ, ಇತ್ತೀಚಿನ ದಿನಗಳಲ್ಲಿ 40-50 ವರ್ಷ ವಯಸ್ಸಿನವರಲ್ಲೂ ಇದು ಕಂಡುಬರುತ್ತಿರುವುದು ಆತಂಕಕಾರಿ ವಿಷಯ. ಪುರುಷರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಮಹಿಳೆಯರಿಗಿಂತ ಹೆಚ್ಚು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಮನಿಸಬೇಕಾದ ಆರಂಭಿಕ ಲಕ್ಷಣಗಳೇನು?

*ಸುಮ್ಮನೆ ಕುಳಿತಿದ್ದಾಗ ಬೆರಳು, ಕೈ ಅಥವಾ ಗಲ್ಲ ನಡುಗುವುದು.

*ಮೊದಲಿನ ಹಿರಿದಾದ ಕೈಬರಹ ಇದ್ದಕ್ಕಿದ್ದಂತೆ ಚಿಕ್ಕದಾಗುವುದು.

*ಬಾಳೆಹಣ್ಣು ಅಥವಾ ಉಪ್ಪಿನಕಾಯಿಯ ವಾಸನೆ ತಿಳಿಯದೇ ಇರುವುದು.

*ಸ್ನಾಯುಗಳು ಬಿಗಿದಂತಾಗಿ ಬಟ್ಟೆಯ ಗುಂಡಿ ಹಾಕಲು ಅಥವಾ ಶೂ ಲೇಸ್ ಕಟ್ಟಲು ಕಷ್ಟವಾಗುವುದು.

*ಮುಖದಲ್ಲಿ ಯಾವುದೇ ನಗು ಅಥವಾ ಕೋಪದ ಭಾವನೆ ಕಾಣದೆ ಮುಖವಾಡದಂತೆ ಇರುವುದು.

*ನಡೆಯುವಾಗ ಕೈಗಳು ಸರಾಗವಾಗಿ ಅಲುಗಾಡದಿರುವುದು.

*ನಿರಂತರವಾಗಿ ಕಾಡುವ ಹೊಟ್ಟೆಯ ತೊಂದರೆ.

*ಧ್ವನಿ ತುಂಬಾ ಸಣ್ಣದಾಗುವುದು ಅಥವಾ ಮಾತು ಸ್ಪಷ್ಟವಾಗಿರದಿರುವುದು.

ಕಾರಣಗಳೇನು?

ಈ ರೋಗಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ತಜ್ಞರ ಪ್ರಕಾರ:

ಆನುವಂಶಿಕತೆ ಕುಟುಂಬದ ಇತಿಹಾಸದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ.

ಪರಿಸರ ವಿಷಕಾರಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು.

ಗಾಯಗಳು ತಲೆಗೆ ಆದ ಗಂಭೀರ ಗಾಯಗಳು.

ಪಾರ್ಕಿನ್ಸನ್ ನಿರ್ವಹಣೆ ಹೇಗೆ? ಚಿಕಿತ್ಸೆ ಮತ್ತು ಸಲಹೆಗಳು

ಔಷಧಿರಹಿತ ನಿರ್ವಹಣೆ :

ಕಾಯಿಲೆಯ ಆರಂಭಿಕ ಹಂತದಲ್ಲಿರುವವರಿಗೆ ಜೀವನಶೈಲಿಯ ಬದಲಾವಣೆಗಳು ಮದ್ದಿಗಿಂತ ಮೇಳಾಗಿ ಕೆಲಸ ಮಾಡುತ್ತವೆ.ನಿಯಮಿತ ದೈಹಿಕ ವ್ಯಾಯಾಮ ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ಮತ್ತು ದೇಹದ ಸಮತೋಲನ ಕಾಯ್ದುಕೊಳ್ಳಲು ವ್ಯಾಯಾಮ ಅತಿ ಮುಖ್ಯ.

ಧ್ಯಾನ ಮತ್ತು ಯೋಗ: ಯೋಗಾಸನಗಳು ನರಮಂಡಲದ ಚಟುವಟಿಕೆಯನ್ನು ಚುರುಕುಗೊಳಿಸುತ್ತವೆ. ಮನಸ್ಸನ್ನು ಶಾಂತವಾಗಿರಿಸಲು ಧ್ಯಾನ ಸಹಾಯ ಮಾಡುತ್ತದೆ. ಈ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಔಷಧಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು.

ಔಷಧೀಯ ಚಿಕಿತ್ಸೆ :

ರೋಗದ ತೀವ್ರತೆಗೆ ಅನುಗುಣವಾಗಿ ನರರೋಗ ತಜ್ಞರು ವಿವಿಧ ಔಷಧಗಳನ್ನು ಸೂಚಿಸುತ್ತಾರೆ.ಡೋಪಮಿನರ್ಜಿಕ್ ಚಿಕಿತ್ಸೆ ಮಿದುಳಿನಲ್ಲಿ ಡೋಪಮೈನ್ ಮಟ್ಟವನ್ನು ಹೆಚ್ಚಿಸಲು ಲೆವೊಡೋಪಾ (Levodopa) ಮತ್ತು ಕಾರ್ಬಿಡೋಪಾ (Carbidopa) ನಂತಹ ಔಷಧಗಳನ್ನು ಬಳಸಲಾಗುತ್ತದೆ.

ಪ್ರಯೋಜನಗಳು: ಈ ಔಷಧಗಳು ರೋಗಿಗಳಲ್ಲಿ ಕಂಡುಬರುವ ನಡುಕ, ನಡಿಗೆಯಲ್ಲಿನ ಅಡಚಣೆ ಮತ್ತು ಚಲನೆಯ ನಿಧಾನಗತಿಯನ್ನು ಗಣನೀಯವಾಗಿ ಸುಧಾರಿಸುತ್ತವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular