HomeEntertainment'ಕಾಗದ' ಚಿತ್ರದ ಟೀಸರ್ ರಿಲೀಸ್

‘ಕಾಗದ’ ಚಿತ್ರದ ಟೀಸರ್ ರಿಲೀಸ್

ಈಗಾಗಲೇ ತನ್ನ ಟೈಟಲ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಂಜಿತ್ ನಿರ್ದೇಶನದ ‘ಕಾಗದ’ ಚಿತ್ರದ ಟೀಸರ್ ಅನ್ನು ಜಾನ್ ಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ನಲ್ಲಿ ಕಾಲೇಜ್ ವಿದ್ಯಾರ್ಥಿಗಳ ಪ್ರೀತಿ ಪ್ರೇಮದ ಕುರಿತು  ತೋರಿಸಲಾಗಿದ್ದು, ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ಅಮ್ಮ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿದ್ದು, ಆದಿತ್ಯ ಮತ್ತು ಕಿರುತೆರೆ ನಟಿ ಅಂಕಿತ ಜೈರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನೇಹಾ ಪಾಟೀಲ್,  ಬಾಲರಾಜ್ವಾಡಿ, ಅಶ್ವಥ್ ನೀನಾಸಂ, ಶಿವ ಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್ ಮತ್ತು ತೇಜಸ್ವಿ ತೆರೆ ಹಂಚಿಕೊಂಡಿದ್ದಾರೆ. ಪವನ್ ಗೌಡ ಸಂಕಲನ, ಅರುಣ್ ರೋಹಿತ್ ನೃತ್ಯ ನಿರ್ದೇಶನ, ವೇಣು ನಾಗರಾಜ್ ಮೂರ್ತಿ ಛಾಯಾಗ್ರಹಣವಿದೆ. ಪ್ರದೀಪ್ ವರ್ಮ ಸಂಗೀತ ಸಂಯೋಜನೆ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular