ನವದೆಹಲಿ: ಇತ್ತೀಚಿಗೆ ಒತ್ತಡ, ಆತಂಕ (Anxiety) ಮತ್ತು ಪ್ಯಾನಿಕ್ ಅಟ್ಯಾಕ್ ಪ್ರಕರಣಗಳು ಮನೆಮನೆ ಮಾತಾಗಿವೆ. ಎಷ್ಟೋ ಬಾರಿ ಪ್ಯಾನಿಕ್ ಅಟ್ಯಾಕ್ ಆದಾಗ ಅದು ಹೃದಯಾಘಾತವೇನೋ ಎಂಬ ಭಯ ಕಾಡುವುದು ಸಹಜ. ಇಂತಹ ಸಂದರ್ಭದಲ್ಲಿ ಜೀವ ಉಳಿಸಲು ನಿಮ್ಮ ಮನೆಯಲ್ಲಿರುವ ಒಂದು ಸಾಮಾನ್ಯ ಪೇಪರ್ ಬ್ಯಾಗ್ ಹೇಗೆ ಸಂಜೀವಿನಿಯಾಗಬಲ್ಲದು ಎಂಬ ಬಗ್ಗೆ ಏಮ್ಸ್ (AIIMS) ನರರೋಗ ತಜ್ಞೆ ಡಾ. ಪ್ರಿಯಾಂಕಾ ಸೆಹ್ರಾವತ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ
ಏನಿದು ಪ್ಯಾನಿಕ್ ಅಟ್ಯಾಕ್?
ಯಾವುದೇ ಸ್ಪಷ್ಟ ಕಾರಣವಿಲ್ಲದೆ ದಿಢೀರನೆ ತೀವ್ರವಾದ ಭಯ ಕಾಡುವುದು ಪ್ಯಾನಿಕ್ ಅಟ್ಯಾಕ್‌ನ ಲಕ್ಷಣ ಇದು ಉಸಿರಾಟದ ತೊಂದರೆ, ಎದೆಬಡಿತ ಹೆಚ್ಚಾಗುವುದು ಮತ್ತು ಎದೆ ಬಿಗಿಯಾದ ಅನುಭವ ನೀಡುತ್ತದೆ
ಪ್ಯಾನಿಕ್ ಅಟ್ಯಾಕ್ ಸಮಯದಲ್ಲಿ ಏನಾಗುತ್ತದೆ?
ವೇಗದ ಉಸಿರಾಟ: ಅತಿ ವೇಗವಾಗಿ ಉಸಿರಾಡುವುದರಿಂದ ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡ್ (CO2) ಶ್ವಾಸಕೋಶದ ಮೂಲಕ ಅತಿಯಾಗಿ ಹೊರಹೋಗುತ್ತದೆ.
pH ಸಮತೋಲನ ವ್ಯತ್ಯಾಸ: ಕಾರ್ಬನ್ ಡೈಆಕ್ಸೈಡ್ ಕಡಿಮೆಯಾದಾಗ ದೇಹದ pH ಮಟ್ಟದಲ್ಲಿ ವ್ಯತ್ಯಾಸ ಉಂಟಾಗುತ್ತದೆ.
ಲಕ್ಷಣಗಳು: ಎದೆನೋವು, ಕೈಕಾಲು ನಡುಕ, ಎದೆಬಡಿತ ಹೆಚ್ಚಾಗುವುದು, ತಲೆತಿರುಗುವಿಕೆ ಮತ್ತು ಉಸಿರುಕಟ್ಟಿದ ಅನುಭವವಾಗುತ್ತದೆ.
ಪೇಪರ್ ಬ್ಯಾಗ್ ಟ್ರಿಕ್ ಕೆಲಸ ಮಾಡುವುದು ಹೇಗೆ?
ವಿಜ್ಞಾನ: ಪ್ಯಾನಿಕ್ ಅಟ್ಯಾಕ್ ಆದಾಗ ನಾವು ಅತಿ ವೇಗವಾಗಿ ಉಸಿರಾಡುತ್ತೇವೆ (Hyperventilation). ಇದರಿಂದ ರಕ್ತದಲ್ಲಿರುವ ಕಾರ್ಬನ್ ಡೈಆಕ್ಸೈಡ್ ಅತಿಯಾಗಿ ಹೊರಹೋಗಿ ದೇಹದ pH ಮಟ್ಟ ಏರುಪೇರಾಗುತ್ತದೆ. ಇದೇ ಎದೆನೋವು ಮತ್ತು ಬಿಗಿತಕ್ಕೆ ಕಾರಣ.
ಪರಿಹಾರ: ಬಾಯಿ ಮತ್ತು ಮೂಗಿಗೆ ಪೇಪರ್ ಬ್ಯಾಗ್ ಅಡ್ಡ ಹಿಡಿದು ಅದರ ಒಳಗೇ 6 ರಿಂದ 10 ಬಾರಿ ನಿಧಾನವಾಗಿ ಉಸಿರಾಡಬೇಕು. ಇದರಿಂದ ಹೊರಹೋದ ಕಾರ್ಬನ್ ಡೈಆಕ್ಸೈಡ್ ಅನ್ನು ದೇಹ ಮರಳಿ ಪಡೆಯುತ್ತದೆ.
ಫಲಿತಾಂಶ: ಕೇವಲ 2-3 ನಿಮಿಷಗಳಲ್ಲಿ ರಕ್ತದ pH ಮಟ್ಟ ಸಾಮಾನ್ಯ ಸ್ಥಿತಿಗೆ ಮರಳಿ, ಆತಂಕ ಕಡಿಮೆಯಾಗುತ್ತದೆ.
https://www.instagram.com/reel/DUM-fdIgS5p/?utm_source=ig_web_copy_link
ಎಚ್ಚರಿಕೆ: ಯಾರು ಇದನ್ನು ಬಳಸಬಾರದು?
ಎಲ್ಲಾ ಸಂದರ್ಭದಲ್ಲೂ ಪೇಪರ್ ಬ್ಯಾಗ್ ಬಳಸುವುದು ಸರಿಯಲ್ಲ. ಈ ಕೆಳಗಿನವರು ಎಚ್ಚರದಿಂದಿರಬೇಕು:
ಆಸ್ತಮಾ ರೋಗಿಗಳು: ಉಸಿರಾಟದ ತೊಂದರೆ ಆಸ್ತಮಾದಿಂದ ಆಗುತ್ತಿದ್ದರೆ ಇದನ್ನು ಬಳಸಬೇಡಿ.
ಹೃದಯ ಮತ್ತು ಶ್ವಾಸಕೋಶದ ಸಮಸ್ಯೆ: ಗಂಭೀರ ಹೃದಯ ಕಾಯಿಲೆ ಇರುವವರು ಈ ವಿಧಾನ ಅನುಸರಿಸಬಾರದು.
ವೃತ್ತಿಪರ ಸಲಹೆ: ಪ್ಯಾನಿಕ್ ಅಟ್ಯಾಕ್ ಆಗಾಗ ಸಂಭವಿಸುತ್ತಿದ್ದರೆ ತಕ್ಷಣವೇ ಮನಶ್ಶಾಸ್ತ್ರಜ್ಞರನ್ನು ಅಥವಾ ನರರೋಗ ತಜ್ಞರನ್ನು ಭೇಟಿ ಮಾಡುವುದು ಅವಶ್ಯಕ

