HomeKarnatakaಗಮನಿಸಿ: ವ್ಯಕ್ತಿಗೆ ಗೊತ್ತೇ ಆಗದಂತೆ ಪಾನ್ ನಂಬರ್ ಬಳಸಿ 7 ನಕಲಿ ಕಂಪನಿ ಸ್ಥಾಪನೆ

ಗಮನಿಸಿ: ವ್ಯಕ್ತಿಗೆ ಗೊತ್ತೇ ಆಗದಂತೆ ಪಾನ್ ನಂಬರ್ ಬಳಸಿ 7 ನಕಲಿ ಕಂಪನಿ ಸ್ಥಾಪನೆ

ಶಿವಮೊಗ್ಗ: ವ್ಯಕ್ತಿಯೊಬ್ಬರ ಪಾನ್ ನಂಬರ್ ದುರ್ಬಳಕೆ ಮಾಡಿಕೊಂಡು 7 ನಕಲಿ ಕಂಪನಿಗಳನ್ನು ಸ್ಥಾಪಿಸಿ ಜಿಎಸ್‌ಟಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಅಕೌಂಟೆಂಟ್ ಒಬ್ಬರು ತಮ್ಮ ಸ್ನೇಹಿತನಿಗೆ ಫೋನ್ ಪೇ ಮೂಲಕ ಹಣ ಕಳಿಸಲು ಹೋದಾಗ ಬ್ಯಾಂಕ್ ಖಾತೆ ಫ್ರೀಜ್ ಆಗಿರುವುದು ಗಮನಕ್ಕೆ ಬಂದಿದೆ. ಇದನ್ನು ವಿಚಾರಿಸಲು ಬ್ಯಾಂಕಿಗೆ ಹೋದಾಗ ಮುಂಬೈ ಕೇಂದ್ರೀಯ ಜಿಎಸ್​ಟಿ ಕಚೇರಿ ನೋಟಿಸ್ ನೀಡಿದ ಮೇರೆಗೆ ಬ್ಯಾಂಕ್ ಖಾತೆ ಫ್ರೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ತಿಳಿದ ಅಕೌಂಟೆಂಟ್ ಆತಂಕಕ್ಕೆ ಒಳಗಾಗಿದ್ದಾರೆ.

ಅವರ ಪಾನ್ ಸಂಖ್ಯೆ ಬಳಕೆ ಮಾಡಿಕೊಂಡು 7 ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದು, ಈ ಮೂಲಕ ಜಿಎಸ್ಟಿ ವಂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿತ್ತು. ಆನ್ಲೈನ್ ಮೂಲಕ ತಮ್ಮ ಪಾನ್ ಕಾರ್ಡ್ ಬಳಸಿ ಕಂಪನಿಗಳನ್ನು ರಿಜಿಸ್ಟರ್ ಮಾಡಿಕೊಂಡು ತೆರೆಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಅಕೌಂಟೆಂಟ್ ಶಿವಮೊಗ್ಗದ ಸಿಇಎನ್ ಠಾಣಿಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular