HomeLatest Newsಒಂದೇ ಪಂದ್ಯದಲ್ಲಿ ನಾಲ್ವರು ಶತಕ, ರನ್ ಸುರಿಮಳೆ: 345 ರನ್ ಚೇಸ್ ಮಾಡಿ ಲಂಕಾ ಮಣಿಸಿದ...

ಒಂದೇ ಪಂದ್ಯದಲ್ಲಿ ನಾಲ್ವರು ಶತಕ, ರನ್ ಸುರಿಮಳೆ: 345 ರನ್ ಚೇಸ್ ಮಾಡಿ ಲಂಕಾ ಮಣಿಸಿದ ಪಾಕಿಸ್ತಾನ

ಹೈದರಾಬಾದ್: ಹಲವು ದಾಖಲೆಗಳಿಗೆ ಸಾಕ್ಷಿಯಾದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಮಣಿಸಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 344 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಕುಶಾಲ್ ಮೆಂಡಿಸ್ 122, ಸಮರ ವಿಕ್ರಮ 108, ಪಾಥುಮ್ ನಿಸ್ಸಾಂಕ 51 ರನ್ ಗಳಿಸಿದರು. ಪಾಕ್ ಪರವಾಗಿ ಹಸನ್ ಅಲಿ 4, ಹ್ಯಾರಿಸ್ ರವೂಫ್ 2 ವಿಕೆಟ್ ಪಡೆದರು. 345 ರನ್ ಗಳ ಕಠಿಣ ಸವಾಲು ಬೆನ್ನತ್ತಿದ ಪಾಕಿಸ್ತಾನ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿ ಆರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೃಹತ್ ಮತ್ತ ಇದ್ದರೂ ಕಳಪೆ ಫೀಲ್ಡಿಂಗ್ ಕಾರಣ ಶ್ರೀಲಂಕಾ ಸೋಲು ಕಂಡಿದೆ. ಪಾಕಿಸ್ತಾನ ಪರವಾಗಿ ಅಬ್ದುಲ್ಲಾ  ಶಫೀಕ್ 113, ರಿಜ್ವಾನ್ ಅಜೇಯ 134 ಭರ್ಜರಿ ಶತಕ ಸಿಡಿಸಿದ್ದಾರೆ. ಲಂಕಾ ಪರ ದಿಲ್ಷಾನ್ ಎರಡು ವಿಕೆಟ್ ಪಡೆದರು.

ಶ್ರೀಲಂಕಾ 344 ರನ್ ಬೃಹತ್ ಮೊತ್ತ ಗಳಿಸಿದ್ದು, ಇದು ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. 2019ರಲ್ಲಿ ಭಾರತ ಐದು ವಿಕೆಟ್ ಗೆ 336 ರನ್ ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತ ಆಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular