HomeIndiaBREAKING: 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಕನ್ನಡಿಗ ಅಂಕೇಗೌಡ ಸೇರಿದಂತೆ 45 ಸಾಧಕರು...

BREAKING: 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಕನ್ನಡಿಗ ಅಂಕೇಗೌಡ ಸೇರಿದಂತೆ 45 ಸಾಧಕರು ಪ್ರಶಸ್ತಿ ಗೌರವಕ್ಕೆ ಆಯ್ಕೆ

ನವದೆಹಲಿ: 2026ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 45 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಕನ್ನಡಿಗ ಪುಸ್ತಕ ಮನೆ ಖ್ಯಾತಿಯ ಅಂಕೇಗೌಡ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಂಕೇಗೌಡ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದವರು. 20 ಲಕ್ಷಕ್ಕೂ ಹೆಚ್ಚು ಪುಸ್ತಗಳನ್ನು ಸಂಗ್ರಹಿಸಿರುವ ಕೀರ್ತಿ ಅಂಕೇಗೌಡ ಅವರದ್ದು. ಪುಸ್ತಕ ಮನೆ ಎಂಬ ಗ್ರಂಥಾಲಯನ್ನು ನಿರ್ಮಿಸಿ ಜನಪ್ರಿಯರಾಗಿದ್ದಾರೆ.

20ನೇ ವಯಸ್ಸಿನಲ್ಲಿಯೇ ಅಂಕೇಗೌಡ ಪುಸ್ತಕಗಳನ್ನು ಸಂಗ್ರಹಿಸುವ ಹವ್ಯಾಸ ಆರಂಭಿಸಿದ್ದರು. ಅಂಕೇಗೌಡ ಅವರ ವಿಶಿಷ್ಠ ಸಾಧನೆಯನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಈ ಬಾರಿಯ ಪದ್ಮಶ್ರೀ ಗೌರವಕ್ಕೆ ಆಯ್ಕೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ನಿವೃತ್ತ ಡಿಜಿಐ ಇಂದರ್ಜಿತ್ ಸಿಂಗ್ ಸಿಧು, ರಘುಪತ್ ಸಿಂಗ್, ತಾಗಾ ರಾಮ್ ಭೀಲ್ ಸೇರಿದಂತೆ ಒಟ್ಟು 45 ಸಾಧಕರು 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪಟ್ಟಿ:
ಅಂಕೇಗೌಡ
ಎಸ್. ಜಿ. ಸುಶೀಲಮ್ಮ
ಆರ್ಮಿಡಾ ಫರ್ನಾಂಡೆಸ್
ಭಗವಾನದಾಸ್ ರೈಕ್ವಾರ್
ಭಿಕ್ಲ್ಯಾ ಲಡಕ್ಯಾ ಧಿಂಡಾ
ಬೃಜ್ ಲಾಲ್ ಭಟ್
ಬುಧ್ರಿ ತಾತಿ
ಚಾರಣ್ ಹೆಂಬ್ರಮ್
ಚಿರಂಜೀವಿ ಲಾಲ್ ಯಾದವ್
ಧರ್ಮಿಕ್‌ಲಾಲ್ ಚುನಿಲಾಲ್ ಪಾಂಡ್ಯ
ಗಫ್ರುದ್ದೀನ್ ಮೇವಾತಿ ಜೋಗಿ
ಹ್ಯಾಲಿ ವಾರ್
ಇಂದರ್‌ಜಿತ್ ಸಿಂಗ್ ಸಿದ್ಧು
ಕೆ. ಪಜನಿವೇಲ್
ಕೈಲಾಸ್ ಚಂದ್ರ ಪಂತ್
ಖೇಮ್ ರಾಜ್ ಸುಂದ್ರಿಯಾಲ್
ಕೊಲ್ಲಕ್ಕಯಿಲ್ ದೇವಕಿ ಅಮ್ಮ ಜಿ
ಕುಮಾರಸ್ವಾಮಿ ತಂಗರಾಜ್
ಮಹೇಂದ್ರ ಕುಮಾರ್ ಮಿಶ್ರಾ
ಮೀರ್ ಹಾಜಿಭಾಯ್ ಕಸಂಭಾಯ್
ಮೋಹನ್ ನಗರ್
ನರೇಶ್ ಚಂದ್ರ ದೇವ್ ವರ್ಮಾ
ನಿಲೇಶ್ ವಿನೋದ್‌ಚಂದ್ರ ಮಂಡಲೇವಾಲಾ
ನೂರುದ್ದೀನ್ ಅಹ್ಮದ್
ಓಥುವಾರ್ ತಿರುತ್ತನಿ ಸ್ವಾಮಿನಾಥನ್
ಪದ್ಮ ಗುರ್ಮೆಟ್
ಪೊಖಿಲಾ ಲೆಕ್ತೆಪಿ
ಪುನ್ನಿಯಮೂರ್ತಿ ನಟೇಸನ್
ಆರ್. ಕೃಷ್ಣನ್
ರಘುಪತ್ ಸಿಂಗ್
ರಘುವೀರ್ ತುಕಾರಾಮ್ ಖೇಡ್ಕರ್
ರಾಜಸ್ತಾಪತಿ ಕಳಿಯಪ್ಪ ಗೌಂಡರ್
ರಾಮಾ ರೆಡ್ಡಿ ಮಾಮಿಡಿ
ರಾಮಚಂದ್ರ ಗೋಡಬೋಲೆ ಮತ್ತು ಸುನೀತಾ ಗೋಡಬೋಲೆ
ಸಂಗ್ಯುಸಂಗ್ ಎಸ್ ಪೊಂಗೆನರ್
ಶಫಿ ಶೌಕ್
ಶ್ರೀರಂಗ್ ದೇವಬಾ ಲಾಡ್
ಶ್ಯಾಮ್ ಸುಂದರ್
ಸಿಮಂಚಲ್ ಪಾತ್ರೋ
ಸುರೇಶ್ ಹಣಗವಾಡಿ
ತಾಗಾ ರಾಮ್ ಭೀಲ್
ತೆಚಿ ಗುಬಿನ್
ತಿರುವಾರೂರ್ ಬಕ್ತವತ್ಸಲಂ
ವಿಶ್ವ ಬಂಧು
ಯುಮ್ನಾಂ ಜತ್ರಾ ಸಿಂಗ್

For Latest News Updates, Join Our Whatsapp Community🚩
RELATED ARTICLES

Most Popular