HomeLatest NewsOYO ಬ್ಯುಸಿನೆಸ್ ಸ್ಕೆಚ್ : ₹6,650 ಕೋಟಿ IPO ಗೆ ಸಜ್ಜು; ದೇಶಾದ್ಯಂತ ವ್ಯವಹಾರ ವಿಸ್ತರಣೆಗೆ...

OYO ಬ್ಯುಸಿನೆಸ್ ಸ್ಕೆಚ್ : ₹6,650 ಕೋಟಿ IPO ಗೆ ಸಜ್ಜು; ದೇಶಾದ್ಯಂತ ವ್ಯವಹಾರ ವಿಸ್ತರಣೆಗೆ ಮಹತ್ವದ ಹೆಜ್ಜೆ

ಆತಿಥ್ಯ (ಹಾಸ್ಪಿಟಾಲಿಟಿ) ಕ್ಷೇತ್ರದ ಪ್ರಮುಖ ಸಂಸ್ಥೆಯಾದ OYO ಮತ್ತೊಮ್ಮೆ ಸುದ್ದಿಯಲ್ಲಿದೆ. ಸಂಸ್ಥೆಯ ಮಾತೃ ಕಂಪನಿ ಒರಾವೆಲ್ ಸ್ಟೇಸ್ (ಪ್ರಿಜಮ್) ಈ ವರ್ಷ ಷೇರುಪೇಟೆಗೆ (IPO) ಪ್ರವೇಶಿಸಲು ಸಜ್ಜಾಗಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಗೆ ನವೀಕರಿಸಿದ ಕರಡು ದಾಖಲೆಗಳನ್ನು ಸಲ್ಲಿಸಿದೆ.

ಕಂಪನಿ ₹6,650 ಕೋಟಿ ಮೌಲ್ಯದ ಹೊಸ ಇಕ್ವಿಟಿ ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವ ಮೂಲಕ ಬೃಹತ್ ಪ್ರಮಾಣದ ಬಂಡವಾಳ ಸಂಗ್ರಹಿಸಲು ಯೋಜಿಸಿದೆ. ಈ ಹಣವನ್ನು ಭವಿಷ್ಯದ ವ್ಯವಹಾರ ವಿಸ್ತರಣೆ, ಬೆಳವಣಿಗೆ ಯೋಜನೆಗಳು ಹಾಗೂ ಕಂಪನಿಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಬಳಸುವ ಉದ್ದೇಶ ಹೊಂದಿದೆ.

ಇತ್ತೀಚೆಗೆ ದೇಶೀಯ ಷೇರುಪೇಟೆಯಲ್ಲಿ ಹಲವು ದೊಡ್ಡ ಕಂಪನಿಗಳ ಐಪಿಒಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ OYO ಕೂಡ ಸಾರ್ವಜನಿಕ ಹೂಡಿಕೆದಾರರ ಮುಂದೆ ಬರಲು ನಿರ್ಧರಿಸಿದೆ.ಈ ಐಪಿಒಯ ವಿಶೇಷತೆ ಎಂದರೆ ಆಫರ್ ಫಾರ್ ಸೇಲ್ (OFS) ವ್ಯವಸ್ಥೆಯನ್ನು ಒಳಗೊಂಡಿಲ್ಲ. ಅಂದರೆ ಸಂಸ್ಥಾಪಕ ರಿತೇಶ್ ಅಗರ್ವಾಲ್, ಪ್ರಮುಖ ಹೂಡಿಕೆದಾರರಾದ ಸಾಫ್ಟ್‌ಬ್ಯಾಂಕ್, ಮೈಕ್ರೋಸಾಫ್ಟ್, ಏರ್‌ಬಿಎನ್‌ಬಿ, ಪೀಕ್ XV, ಲೈಟ್‌ಸ್ಪೀಡ್, ಗ್ರೀನ್‌ಓಕ್ಸ್ ಕ್ಯಾಪಿಟಲ್ ಸೇರಿದಂತೆ ಇತರ ಹೂಡಿಕೆದಾರರು ಈ ಹಂತದಲ್ಲಿ ತಮ್ಮ ಷೇರುಗಳನ್ನು ಮಾರಾಟ ಮಾಡುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಪಿಒಗೂ ಮುನ್ನ ಕಂಪನಿ ಸುಮಾರು ₹1,330 ಕೋಟಿ ಪ್ರೀ-ಐಪಿಒ ಪ್ಲೇಸ್‌ಮೆಂಟ್ ಮೂಲಕ ಹೆಚ್ಚುವರಿ ಬಂಡವಾಳ ಸಂಗ್ರಹಿಸುವ ಯೋಜನೆಯನ್ನೂ ಹೊಂದಿದೆ. ಇದು ಯಶಸ್ವಿಯಾದರೆ ಸಾರ್ವಜನಿಕ ಐಪಿಒ ಮೂಲಕ ಸಂಗ್ರಹಿಸಬೇಕಾದ ಮೊತ್ತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

ಐಪಿಒ ಮೂಲಕ ಸಂಗ್ರಹವಾಗುವ ಹಣದಲ್ಲಿ ಸುಮಾರು ₹4,987.50 ಕೋಟಿ ಮೊತ್ತವನ್ನು ಕಂಪನಿಯ ಸಾಲ ತೀರಿಸಲು ಬಳಸುವ ಯೋಜನೆ ಇದೆ. ಉಳಿದ ಹಣವನ್ನು ದೈನಂದಿನ ಕಾರ್ಯಾಚರಣೆ, ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳು ಹಾಗೂ ಭವಿಷ್ಯದ ವ್ಯವಹಾರ ವಿಸ್ತರಣೆಗೆ ವಿನಿಯೋಗಿಸಲಾಗುತ್ತದೆ. ಇದರಿಂದ ಕಂಪನಿಯ ಮೇಲಿರುವ ಬಡ್ಡಿ ಹೊರೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular