HomeBeautyನಿಮ್ಮ ಬ್ಯೂಟಿ ಸ್ಲೀಪ್‌ಗೆ ಕೊಡಿ ಹೊಸ ಟಚ್: ರಾತ್ರಿಯಿಡೀ ರೈಸ್ ಮಾಸ್ಕ್ ಧರಿಸಿದರೆ ಮುಖದಲ್ಲಿ ಬರಲಿದೆ...

ನಿಮ್ಮ ಬ್ಯೂಟಿ ಸ್ಲೀಪ್‌ಗೆ ಕೊಡಿ ಹೊಸ ಟಚ್: ರಾತ್ರಿಯಿಡೀ ರೈಸ್ ಮಾಸ್ಕ್ ಧರಿಸಿದರೆ ಮುಖದಲ್ಲಿ ಬರಲಿದೆ ನೈಸರ್ಗಿಕ ಗ್ಲೋ

ಪ್ರತಿಯೊಬ್ಬರಿಗೂ ತಮ್ಮ ಚರ್ಮವು ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿರಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ನಾನಾ ಬಗೆಯ ಕ್ರೀಮ್‌ಗಳನ್ನು ಬಳಸುತ್ತೇವೆ. ಆದರೆ ಏಷ್ಯಾದ ಸಾಂಪ್ರದಾಯಿಕ ಸೌಂದರ್ಯ ವರ್ಧಕಗಳಲ್ಲಿ ಒಂದಾದ ‘ಅಕ್ಕಿ’ಯನ್ನು ಬಳಸಿ ತಯಾರಿಸುವ ‘ಓವರ್‌ನೈಟ್ ರೈಸ್ ಶೀಟ್ ಮಾಸ್ಕ್’ (Overnight Rice Sheet Mask) ಈಗ ಜಾಗತಿಕವಾಗಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಚರ್ಮರೋಗ ತಜ್ಞರ ಪ್ರಕಾರ, ರಾತ್ರಿಯಿಡೀ ಈ ಮಾಸ್ಕ್ ಧರಿಸುವುದರಿಂದ ಚರ್ಮಕ್ಕೆ ಸಿಗುವ ಪ್ರಯೋಜನಗಳು ಅಚ್ಚರಿ ಮೂಡಿಸುವಂತಿವೆ.

ಶಾರದಾ ಕೇರ್ ಹೆಲ್ತ್ ಸಿಟಿಯ ಚರ್ಮರೋಗ ವಿಭಾಗದ ತಜ್ಞರಾದ ಡಾ. ಅದಿತಿ ವಾಧ್ವಾ ಅವರು ಈ ಮಾಸ್ಕ್‌ನ ವೈಜ್ಞಾನಿಕ ಹಿನ್ನೆಲೆ ಮತ್ತು ಪ್ರಯೋಜನಗಳ ಬಗ್ಗೆ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.

ಏನಿದು ಓವರ್‌ನೈಟ್ ರೈಸ್ ಶೀಟ್ ಮಾಸ್ಕ್? ಕೊರಿಯನ್ ಮತ್ತು ಜಪಾನಿ ಸೌಂದರ್ಯ ಚಿಕಿತ್ಸೆಗಳಲ್ಲಿ ಅಕ್ಕಿ ನೀರು ಮತ್ತು ಅದರ ಸಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರಲ್ಲಿ ವಿಟಮಿನ್, ಮಿನರಲ್ಸ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ರಾತ್ರಿಯಿಡೀ ಮುಖದ ಮೇಲಿರುವ ಈ ಮಾಸ್ಕ್ ಚರ್ಮಕ್ಕೆ ದೀರ್ಘಕಾಲದವರೆಗೆ ಪೋಷಣೆ ನೀಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರ ಪ್ರಯೋಜನಗಳೇನು?

ಆಳವಾದ ತೇವಾಂಶ (Hydration): ಇದರಲ್ಲಿರುವ ಹ್ಯೂಮೆಕ್ಟಂಟ್ಸ್ ಚರ್ಮದ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ. ಇದರಿಂದ ಬೆಳಿಗ್ಗೆ ಏಳುವಾಗ ನಿಮ್ಮ ತ್ವಚೆ ಮೃದುವಾಗಿ ಮತ್ತು ತಾಜಾವಾಗಿ ಕಾಣುತ್ತದೆ.

ಚರ್ಮದ ಬಣ್ಣ ಸುಧಾರಣೆ: ಅಕ್ಕಿ ನೀರಿನಲ್ಲಿರುವ ಫೆರುಲಿಕ್ ಆಸಿಡ್ ಮತ್ತು ನಿಯಾಸಿನಾಮೈಡ್ ಕಪ್ಪು ಕಲೆಗಳನ್ನು ಕಡಿಮೆ ಮಾಡಿ, ಚರ್ಮದ ಬಣ್ಣ ಒಂದೇ ಸಮನಾಗಿ ಇರುವಂತೆ ಮಾಡುತ್ತದೆ.

ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ: ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ನೆರಿಗೆಗಳನ್ನು ಕಡಿಮೆ ಮಾಡುತ್ತವೆ.

ಚರ್ಮದ ರಕ್ಷಣೆ: ಅಕ್ಕಿಯಲ್ಲಿರುವ ಅಮೈನೋ ಆಸಿಡ್‌ಗಳು ಚರ್ಮದ ನೈಸರ್ಗಿಕ ರಕ್ಷಣಾ ಕವಚವನ್ನು ಬಲಪಡಿಸುತ್ತವೆ, ಇದರಿಂದ ಮಾಲಿನ್ಯದ ಪರಿಣಾಮ ಚರ್ಮದ ಮೇಲಾಗುವುದಿಲ್ಲ.

    ಬಳಸುವ ವಿಧಾನ:

    • ಮೊದಲು ಮುಖವನ್ನು ಕ್ಲೆನ್ಸರ್‌ನಿಂದ ಚೆನ್ನಾಗಿ ತೊಳೆದುಕೊಳ್ಳಿ.
    • ಬಳಿಕ ಟೋನರ್ ಹಚ್ಚಿ ಚರ್ಮವನ್ನು ಸಿದ್ಧಪಡಿಸಿ.
    • ಈಗ ರೈಸ್ ಶೀಟ್ ಮಾಸ್ಕ್ ಅನ್ನು ಮುಖಕ್ಕೆ ಸರಿಯಾಗಿ ಕುಳಿತುಕೊಳ್ಳುವಂತೆ ಹಚ್ಚಿ.
    • ಇಡೀ ರಾತ್ರಿ ಇದನ್ನು ಹಾಗೆಯೇ ಬಿಟ್ಟು ಮಲಗಿ. ಇವು ಹಗುರವಾಗಿದ್ದು, ನಿಮಗೆ ಕಿರಿಕಿರಿ ಉಂಟುಮಾಡುವುದಿಲ್ಲ.
    • ಬೆಳಿಗ್ಗೆ ಎದ್ದ ತಕ್ಷಣ ಮಾಸ್ಕ್ ತೆಗೆದು ಉಗುರುಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಿರಿ.

    For Latest News Updates, Join Our Whatsapp Community🚩
    RELATED ARTICLES

    LEAVE A REPLY

    Please enter your comment!
    Please enter your name here

    Most Popular