HomeLatest NewsSHOCKING : ‘ಅಯ್ಯೋ ದೇವ್ರೇ.! ‘ನೋಡಲು ನನ್ನಂತಿಲ್ಲ' ಅಂತ 6 ವರ್ಷದ ಮಗನನ್ನ ನದಿಗೆ ತಳ್ಳಿ...

SHOCKING : ‘ಅಯ್ಯೋ ದೇವ್ರೇ.! ‘ನೋಡಲು ನನ್ನಂತಿಲ್ಲ’ ಅಂತ 6 ವರ್ಷದ ಮಗನನ್ನ ನದಿಗೆ ತಳ್ಳಿ ಕೊಂದ ಪಾಪಿ ತಂದೆ.!

ಲೋಕದ ಎಲ್ಲ ನೋವುಗಳನ್ನು ಮರೆಸುವ ಮಗುವಿನ ನಗು ಆ ತಂದೆಗೆ ಮುಳ್ಳಿನಂತೆ ಕಂಡಿತ್ತು. ಮಗ ನೋಡಲು ತನ್ನಂತೆ ಇಲ್ಲ ಎಂಬ ಹೀಯಾಳಿಕೆಗೆ ಹೆತ್ತ ಮಗನನ್ನೇ ಬಲಿಪಡೆದ ಅಮಾನುಷ ಘಟನೆ ವಿಜಯಪುರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಚುಡಾಯಿಸುವಿಕೆಗೆ ಬೇಸತ್ತು, ಶಾಲೆಗೆ ಸೇರಿಸುವ ನೆಪದಲ್ಲಿ ತನ್ನ 6 ವರ್ಷದ ಹಸುಳೆಯನ್ನು ಮಹಾರಾಷ್ಟ್ರದ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ ಪಾಪಿ ತಂದೆಯ ಕೃತ್ಯ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮಗನ ಹುಟ್ಟುಹಬ್ಬದಂದೇ ತಂದೆಯ ಈ ಭೀಕರ ರಹಸ್ಯ ಸ್ಫೋಟಗೊಂಡಿದ್ದು, ಪ್ರಸ್ತುತ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಹೌದು.   ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಮಗ ತನ್ನ ತರಹ ಕಾಣುತ್ತಿಲ್ಲ ಎಂಬ ಕಾರಣಕ್ಕೆ ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾನೆ. ಮಲ್ಲಿಕಾರ್ಜುನ ಅರಕೇರಿ ಎಂಬಾತನೇ ತನ್ನ 6 ವರ್ಷದ ಮಗ ಸಿದ್ದಾರ್ಥನನ್ನು ಕೊಲೆ ಮಾಡಿದ ಆರೋಪಿ.

ಏನಿದು ಘಟನೆ? ಮಗ ಸಿದ್ದಾರ್ಥ ನೋಡಲು ಮಲ್ಲಿಕಾರ್ಜುನನ ತರಹ ಇಲ್ಲ ಎಂದು ಗ್ರಾಮದ ಕೆಲವು ಜನರು ಆತನನ್ನು ಚುಡಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಮಲ್ಲಿಕಾರ್ಜುನ, ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದಾನೆ. ಮಹಾರಾಷ್ಟ್ರದ ಕರಾಡ್ ಜಿಲ್ಲೆಯ ವಡೋಲಿ ಬಳಿ ಕೃಷ್ಣಾ ನದಿಗೆ ಮಗನನ್ನು ತಳ್ಳಿ ಹತ್ಯೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಮನೆಗೆ ಬಂದು, ಮಗನನ್ನು ಸಿಂದಗಿ ಬಳಿಯ ಹಾಸ್ಟೆಲ್‌ಗೆ ಸೇರಿಸಿರುವುದಾಗಿ ಕುಟುಂಬಸ್ಥರಿಗೆ ಸುಳ್ಳು ಹೇಳಿ ನಂಬಿಸಿದ್ದ. ಆದರೆ ಏಪ್ರಿಲ್ 1ರಂದು ಮಗನ ಹುಟ್ಟುಹಬ್ಬವಿದ್ದ ಕಾರಣ, ಮಗನನ್ನು ಮನೆಗೆ ಕರೆದುಕೊಂಡು ಬರುವಂತೆ ತಾಯಿ ಭಾಗ್ಯಶ್ರೀ ಪಟ್ಟು ಹಿಡಿದಿದ್ದಾರೆ. ಇದರಿಂದ ಗಾಬರಿಗೊಂಡ ಮಲ್ಲಿಕಾರ್ಜುನ ಮನೆಯಿಂದ ಓಡಿ ಹೋಗಿದ್ದ.

ಪತಿಯ ವರ್ತನೆಯಿಂದ ಅನುಮಾನಗೊಂಡ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಲ್ಲಿಕಾರ್ಜುನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular