HomeLatest NewsBREAKING NEWS: 20 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್: 8 ಆರೋಪಿಗಳು ಅರೆಸ್ಟ್

BREAKING NEWS: 20 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್: 8 ಆರೋಪಿಗಳು ಅರೆಸ್ಟ್

20 ವರ್ಷದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಯುವತಿ ತನ್ನ ಗೆಳೆಯನ ಜೊತೆ ರಾಜಾ ಫೆಸ್ಟಿವಲ್ ಆಚರಣೆಗಾಗಿ ಓಡಿಶಾದ ಗೋಪಾಲಪುರ ಸೀ ಬೀಚ್ ಗೆ ತೆರಳಿದ್ದಳು. ಈ ವೇಳೆ ಮೂವರು ಬೈಕ್ ಗಳಲ್ಲಿ ಬಂದ ಹತ್ತು ಜನರ ಗುಂಪು, ಯುವತಿಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿ ಆತನನನ್ನು ಕಟ್ಟಿಹಾಕಿ, ಯುವತಿಯನ್ನು ಹೊತ್ತೊಯ್ದು, ಮನೆಯೊಂದರಲ್ಲಿ ಗ್ಯಾಂಗ್ ರೇಪ್ ನಡೆಸಿದ್ದರು. ಕೃತ್ಯದ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವತಿಯ ಗೆಳೆಯ ಅಲ್ಲಿಂದ ತಪ್ಪಿಸಿಕೊಂಡು ಗೋಪಾಲಪುರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ. ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಸದ್ಯ 8 ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular