HomeLatest NewsBIG NEWS: ಹರಿಯಾಣ ಮಾಡೆಲ್ ಶವವಾಗಿ ಪತ್ತೆ ಪ್ರಕರಣ: ಬಾಯ್ ಫ್ರೆಂಡ್ ಅರೆಸ್ಟ್

BIG NEWS: ಹರಿಯಾಣ ಮಾಡೆಲ್ ಶವವಾಗಿ ಪತ್ತೆ ಪ್ರಕರಣ: ಬಾಯ್ ಫ್ರೆಂಡ್ ಅರೆಸ್ಟ್

ಚಂಡೀಗಢ: ಹರಿಯಾಣ ಮೂಲದ ಖ್ಯಾತ ಮಾಡೆಲ್ ಶೀತಲ್ ಅಲಿಯಾಸ್ ಸಿಮ್ಮಿ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

ಸುನಿಲ್ ಬಂಧಿತ ಆರೋಪಿ. ಶೀತಲ್ ಅಲಿಯಾಸ್ ಸಿಮ್ಮಿ ಗೆಳೆಯನಾಗಿರುವ ಸುನಿಲ್ ನನ್ನು ಬಂಧಿಸಿರುವ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೂನ್ 14 ರಂದು ಶೂಟಿಂಗ್ ಗೆ ಎಂದು ಮನೆಯಿಂದ ಹೋಗಿದ್ದ ಶೀತಲ್ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಕಂಗಾಲಾಗಿದ್ದ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೋನಿಪತ್ ನ ಖಾರ್ಖೋಡಾ ಪ್ರದೇಶದ ಕಾಲುವೆಯಲ್ಲಿ ಶೀತಲ್ ಶವ ಪತ್ತೆಯಾಗಿತ್ತು. ಶವ ಪತ್ತೆಯಾದ ಜಾಗದಲ್ಲೇ ಸೋನಿಪತ್ ನ ಇಸ್ರಾನಾ ಮೂಲದ ವ್ಯಕ್ತಿಗೆ ಸೇರಿದ ಕಾರು ಪತ್ತೆಯಾಗಿತ್ತು. ಶೀತಲ್ ಕೊನೆಯದಾಗಿ ಸುನಿಲ್ ಜೊತೆ ಕಾಣಿಸಿಕೊಂಡಿದ್ದಳು. ಶವದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸುನಿಲ್ ನೇ ಶೀತಲ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular