ಅಸ್ಸಾಂ ಕಾಂಗ್ರೆಸ್ ಶಾಸಕರು ಬೆಂಗಳೂರು ಹೊರವಲಯದ ರೆಸಾರ್ಟ್‌ನಲ್ಲಿದ್ದಾರೆ. ಆದರೆ ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರು ಸಹ ರೆಸಾರ್ಟ್‌ಗೆ ಬಂದಿದ್ದಾರೆ. ಆದರೆ ಈ ಬಗ್ಗೆ ತಮಗೆ ತಿಳಿದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾರ್ಚ್ 16ರಂದು ನಡೆಯುವ ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ಒಡಿಶಾದ ವಿರೋಧ ಪಕ್ಷವಾದ ಕಾಂಗ್ರೆಸ್ 8 ಶಾಸಕರನ್ನು ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕಕ್ಕೆ ಕಳಿಸಿದೆ. ಆದರೆ ಇದು ಅವರೇ ಹೇಳಿದಂತೆ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿದಿಲ್ಲ.
ರಾಜಕೀಯ ಲೆಕ್ಕಾಚಾರ: ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರು ಅಡ್ಡ ಮತದಾನ ಮಾಡುವುದನ್ನು ತಡೆಯಲು ಅವರನ್ನು ಒಡಿಶಾದಿಂದ ಬೆಂಗಳೂರು ನಗರಕ್ಕೆ ಕಳಿಸಲಾಗಿದೆ. 14 ಶಾಸಕರಿಗೆ ರಾಜಧಾನಿ ಭುವನೇಶ್ವರಕ್ಕೆ ಗುರುವಾರ ಬನ್ನಿ ಎಂದು ಹೇಳಿದ್ದ ಕಾಂಗ್ರೆಸ್ ಮುಖ್ಯ ಸಚೇತಕ ಸೇರಿ 8 ಶಾಸಕರನ್ನು ಬೆಂಗಳೂರಿಗೆ ಕಳಿಸಿದೆ.
ಒಡಿಶಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ರಾಮಚಂದ್ರ ಕದಮ್ ಮಾತನಾಡಿ, “ಹೌದು, ನಮ್ಮ 8 ಶಾಸಕರು ಬೆಂಗಳೂರಿಗೆ ಹೋಗಿದ್ದಾರೆ. ಬಿಜೆಪಿಯ ಕುದುರೆ ವ್ಯಾಪಾರದ ಪ್ರಯತ್ನಗಳಿಂದ ಅವರನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಶಾಸಕರು ಒಗ್ಗಟ್ಟಾಗಿ ಉಳಿಯಲಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
6 ಶಾಸರು ಒಡಿಶಾದಲ್ಲಿದ್ದು, ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಶಾಸಕರು ಸೋಮವಾರದ ತನಕ ರೆಸಾರ್ಟ್‌ನಲ್ಲಿಯೇ ಇರಲಿದ್ದಾರೆ. ಇಲ್ಲಿಂದಲೇ ರಾಜ್ಯಸಭೆ ಚುನಾವಣೆಗೆ ಮತದಾನ ಮಾಡಲು ತೆರೆಳಲಿದ್ದಾರೆ.
147 ಸದಸ್ಯ ಬಲದ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರ ಆಯ್ಕೆಯಾಗಬೇಕು. ರಾಜ್ಯದ ಆಡಳಿತ ಪಕ್ಷ ಬಿಜೆಪಿ 2, ಬಿಜೆಡಿ 1 ಸೀಟು ಗೆಲ್ಲಬಹುದು. ಎರಡೂ ಪಕ್ಷಕ್ಕೆ 4ನೇ ಸೀಟು ಗೆಲ್ಲಲು 30 ಶಾಸಕರ ಮೊದಲ ಪ್ರಶಸ್ತ್ಯದ ಮತಗಳು ಬೇಕು.
ಬಿಜೆಪಿಯ 79, ಇಬ್ಬರು ಪಕ್ಷೇತರರು ಸೇರಿ 82 ಮತಗಳಿವೆ. ಪಕ್ಷ 3ನೇ ಸೀಟು ಗೆಲ್ಲಲು 8 ಶಾಸಕರ ಬೆಂಬಲ ಬೇಕಿದೆ. ಬಿಜೆಡಿಯ ಇಬ್ಬರು ಶಾಸಕರು ಕಳೆದ ತಿಂಗಳು ಅಮಾನತುಗೊಂಡಿದ್ದು, ಸದಸ್ಯ ಸದಸ್ಯ ಬಲ 48.
ಒಬ್ಬ ಸದಸ್ಯನನ್ನು ಆಯ್ಕೆ ಮಾಡಿದ ಬಳಿಕ ಬಿಜೆಡಿ ಬಳಿ 18 ಶಾಸಕರ ಬಲ ಉಳಿಯುತ್ತದೆ. ಇನ್ನೊಂದು ಸೀಟು ಗೆಲ್ಲಲು ಇನ್ನೂ 12 ಶಾಸಕರ ಬೆಂಬಲ ಬೇಕು.
ಕಾಂಗ್ರೆಸ್ ರಾಜ್ಯದಲ್ಲಿ 14 ಶಾಸಕರನ್ನು ಹೊಂದಿದೆ. ಸಿಪಿಐ(ಎಂ)ನ ಒಬ್ಬರು ಶಾಸಕರು ಇದ್ದಾರೆ. ಆದ್ದರಿಂದ ಕಾಂಗ್ರೆಸ್ ಶಾಸಕರಿಗೆ ಭಾರೀ ಬೇಡಿಕೆ ಇದೆ. ಬಿಜೆಪಿ, ಬಿಜೆಡಿ ಎರಡೂ ಪಕ್ಷಗಳು ಶಾಸಕರನ್ನು ಸೆಳೆಯುವ ನಿರೀಕ್ಷೆ ಇದೆ. ಆದ್ದರಿಂದ ಅವರನ್ನು ರೆಸಾರ್ಟ್‌ಗೆ ಕಳಿಸಲಾಗಿದೆ.

