HomeKarnatakaಬೆಂಗಳೂರಿಗರೇ ಗಮನಿಸಿ : ನಾಳೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರಿಗರೇ ಗಮನಿಸಿ : ನಾಳೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರು : ನಾಳೆ (08.02.2024) ರಂದು ವಿಧಾನಸೌಧದಲ್ಲಿ ಜನಸ್ಪಂದನ ಕಾರ್ಯಕ್ರವನ್ನು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಧಾನ ಸೌಧದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ವೃತ್ತದಿಂದ ಗೇಟ್ ನಂಬರ್-04 ರವರಗೆ ಸಂಚಾರವನ್ನು ನಿಷೇಧಿಸಲಾಗಿರುತ್ತದೆ ಎಂದು ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

1. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವಾಗಿ ಡಿ. ದೇವರಾಜು ಅರಸು ರಸ್ತೆಯಲ್ಲಿ ಬರುವ ವಾಹನಗಳು ಎ.ಜಿ.ಎಸ್. ವೃತ್ತ ಮೂಲಕ ಎಂ.ಎಸ್. ಬಿಲ್ಡಿಂಗ್ ಒಳಭಾಗದಿಂದ ಪ್ರವೇಶಿಸಿ ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿ ಎಡ ತಿರುವು ಪಡೆದುಕದೊಂಡು ಸಂಚರಿಸುವುದು.

2. ಚಾಲುಕ್ಯ ವೃತ್ತದಿಂದ ಬರುವ ವಾಹನಗಳು ಸಿ.ಐ.ಡಿ. ಕಛೇರಿ ಮುಂಭಾಗವಾಗಿ ಚಲಿಸಿ ಮಹಾರಾಣಿ ಕಾಲೇಜು ಅಪ್ಪರ್ ಕ್ಯಾಂಪ್ ಮಾರ್ಗವಾಗಿ ಎಡ ತಿರುವು ಪಡೆದು ಕೆ.ಆರ್. ವೃತ್ತದಿಂದ ಅಂಬೇಡ್ಕರ್ ವೀದಿ / ಸಿಟಿ ಸಿವಿಲ್ ಕೋರ್ಟ್ ರಸ್ತೆಯನ್ನು ಉಪಯೋಗಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿ. 08.02.2024 ರಂದು ಬೆಳಿಗ್ಗೆ 6.00 ರಿಂದ ರಾತ್ರಿ 07-00 ರ ವರೆಗೆ ವಾಹನ ನಿಲುಗಡೆ
ನಿಷೇಧವಿರುವ ರಸ್ತೆಗಳ ವಿವರ:

1. ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ,
2. ರಾಜಭವನ ರಸ್ತೆ, ಪ್ಯಾಲೇಸ್ ರಸ್ತೆ,
3. ಡಿ. ದೇವರಾಜು ಅರಸು ರಸ್ತೆ
4. ಶೇಷಾದ್ರಿ ರಸ್ತೆ.

ದಿ. 08.02.2024 ರಂದು ಸಾರ್ವಜನಿಕ ವಾಹನ ನಿಲುಗಡೆ ಸ್ಥಳಗಳು (ಸ್ಥಳ ಲಭ್ಯತೆಯ ಮೇಲೆ/ಪಾವತಿ ನಿಲುಗಡೆ)

*ಸ್ಕೌಟ್  ಮತ್ತು ಗೈಡ್ಸ್ ಪಾರ್ಕಿಂಗ್ ಸ್ಥಳ
*ಜ್ಞಾನ ಜ್ಯೋತಿ ಮತ್ತು ಬೆಂಗಳೂರು ವಿಶ್ವವಿಧ್ಯಾಲಯ ಪಾರ್ಕಿಂಗ್ ಸ್ಥಳ.
*ಸೆಂಟ್ರಲ್ ಕಾಲೇಜ್
*ಸ್ವಾತಂತ್ರ್ಯ ಉದ್ಯಾನವನ
*ಅರಮನೆ ಮೈದಾನ ಪಾರ್ಕಿಂಗ್ ಸ್ಥಳ

https://twitter.com/DCPTrWestBCP/status/1755204936974074027

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular