HomeKarnataka'ಚಳಿಗಾಲ ಅಧಿವೇಶನದ ಒಳಗೆ ಯಾರೂ ಡಿಸಿಎಂ ಆಗುವುದಿಲ್ಲ' : ಸಚಿವ ಸತೀಶ್ ಜಾರಕಿಹೊಳಿ

‘ಚಳಿಗಾಲ ಅಧಿವೇಶನದ ಒಳಗೆ ಯಾರೂ ಡಿಸಿಎಂ ಆಗುವುದಿಲ್ಲ’ : ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ : ಚಳಿಗಾಲ ಅಧಿವೇಶನದ ಒಳಗೆ ಯಾರೂ ಡಿಸಿಎಂ ಆಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಚಳಿಗಾಲ ಅಧಿವೇಶನದ ಒಳಗೆ ಯಾರೂ ಡಿಸಿಎಂ ಆಗುವುದಿಲ್ಲ , ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡಲು ಅವಕಾಶವಿದೆ ಎಂದರು.
ಲೋಕಸಭೆ ಚುನಾವಣೆ ಬಳಿಕ ಡಿಸಿಎಂ ಮಾಡ್ತಾರಾ ಇಲ್ವೋ ಗೊತ್ತಿಲ್ಲ. ಹೆಚ್ಚುವರಿ ಡಿಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮೂರು ಸಮುದಾಯಕ್ಕೆ ಮೂರು ಉಪಮುಖ್ಯಮಂತ್ರಿ ಸೃಷ್ಟಿಸಬೇಕು.ಇದರಿಂದ ಲೋಕಸಭೆಯಲ್ಲೂ ನೆರವಾಗುತ್ತೆ. ಹೈಕಮಾಂಡ್ಗೂ ಇದನ್ನ ಮನವರಿಕೆ ಮಾಡಿಕೊಡುವುದಾಗಿ ಸಚಿವ ಕೆ.ಎನ್, ರಾಜಣ್ಣ ಹೇಳಿದ್ದರು. ರಾಜಣ್ಣ ಹೇಳಿಕೆ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಡಿಸಿಎಂ ಕದನ ಶುರುವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular