HomeKarnatakaBIG NEWS: ಕೇಂದ್ರ ನಾಯಕರಿಗೆ ಜ್ಞಾನೋದಯವಾಗಿ ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತುಂಬಿದ್ದಾರೆ; ಸಚಿವ ಕೆ.ಎನ್.ರಾಜಣ್ಣ...

BIG NEWS: ಕೇಂದ್ರ ನಾಯಕರಿಗೆ ಜ್ಞಾನೋದಯವಾಗಿ ಈಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತುಂಬಿದ್ದಾರೆ; ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯ

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕೇಂದ್ರ ನಾಯಕರಿಗೆ ಜ್ಞಾನೋದಯವಾಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ವಿಜಯೇಂದ್ರ ನೇಮಕ ಮಾಡಿದ್ದಕ್ಕೆ ಹಲವರಿಗೆ ಅಸಮಾಧಾನವಿದೆ. ಯಾವುದೋ ನಾಲ್ಕು ಉಪಚುನಾವಣೆಯನ್ನು ಗೆಲ್ಲಿಸಿದ ಮಾತ್ರಕ್ಕೆ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡಲು ಆಗಲ್ಲ. ಉಪಚುನಾವಣೆಯಲ್ಲಿ ಎರಡು ಕಡೆ ಗೆದ್ದಿದ್ದು ಕಾಂಗ್ರೆಸ್ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ನನಗೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯಿದೆ ಎಂದ ಕೆ.ಎನ್.ರಾಜಣ್ಣ, ಹೈಕಮಾಂಡ್ ಸೂಚಿಸಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಇಲ್ಲ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular