HomeLatest Newsರಾಜ್ಯದ ರೈತರೇ ಗಮನಿಸಿ ; 'ಡೆತ್ ಸರ್ಟಿಫಿಕೇಟ್' ಇಲ್ಲದಿದ್ದರೂ ಪೌತಿ ಖಾತೆ ಮಾಡಿಸಲು ಅವಕಾಶ.!

ರಾಜ್ಯದ ರೈತರೇ ಗಮನಿಸಿ ; ‘ಡೆತ್ ಸರ್ಟಿಫಿಕೇಟ್’ ಇಲ್ಲದಿದ್ದರೂ ಪೌತಿ ಖಾತೆ ಮಾಡಿಸಲು ಅವಕಾಶ.!

ಬೆಂಗಳೂರು : ಕೃಷಿ ಭೂಮಿಯ ಮಾಲೀಕರು ಮರಣ ಹೊಂದಿದ ನಂತರ ಅವರ ವಾರಸುದಾರರ ಹೆಸರಿಗೆ ಭೂಮಿಯನ್ನು ಸುಲಭವಾಗಿ ವರ್ಗಾಯಿಸಲು ಕರ್ನಾಟಕ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮೂಲಕ ರೈತರು ಎದುರಿಸುತ್ತಿದ್ದ ಪೌತಿ (ವಾರಸಾ) ಖಾತೆ ಸಮಸ್ಯೆಗಳಿಗೆ ಮುಕ್ತಿ ಹಾಡಲು ‘ಇ-ಪೌತಿ’ ತಂತ್ರಾಂಶದ ಮೂಲಕ ಆಂದೋಲನ ನಡೆಸಲು ನಿರ್ಧರಿಸಲಾಗಿದೆ.

ಯಾರು ಈ ಸೌಲಭ್ಯ ಪಡೆಯಬಹುದು ?

ಖಾತೆದಾರರು ಮರಣ ಹೊಂದಿದ ನಂತರ ಅವರ ಹೆಸರಿನಲ್ಲೇ ಉಳಿದಿರುವ ಜಮೀನುಗಳನ್ನು ವಾರಸುದಾರರಿಗೆ ವರ್ಗಾಯಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ವರ್ಗಾವಣೆ ಆಗದಿದ್ದರೆ ರೈತರಿಗೆ ಸಾಲ ಸೌಲಭ್ಯ, ಬೆಳೆ ವಿಮೆ, ಪರಿಹಾರ ಮತ್ತು ಪಿ.ಎಂ ಕಿಸಾನ್‌ ನಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಅಸಂಗತತೆಯನ್ನು ಹೋಗಲಾಡಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಮಾರ್ಗಸೂಚಿಗಳು

ಶುಲ್ಕ ವಿನಾಯಿತಿ: ಇ-ಪೌತಿ ಖಾತೆ ಮಾಡಲು ಮ್ಯುಟೇಶನ್ ಶುಲ್ಕವಾದ 35 ರೂ.ಗಳಿಗೆ ವಿನಾಯಿತಿ ನೀಡಲಾಗಿದೆ. ಯಾವುದೇ ಅರ್ಜಿ ಇಲ್ಲದೆಯೇ ವಾರಸುದಾರರ ಆಧಾರ್ ಇ-ಕೆವೈಸಿ ಪಡೆದು ಸ್ವಯಂಪ್ರೇರಿತವಾಗಿ ಗ್ರಾಮ ಆಡಳಿತಾಧಿಕಾರಿಗಳೇ ಈ ಪ್ರಕ್ರಿಯೆ ನಡೆಸಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಖಲೆಗಳಿಲ್ಲದಿದ್ದರೂ ಅವಕಾಶ

ಮರಣ ಪ್ರಮಾಣ ಪತ್ರ ಇಲ್ಲದಿದ್ದರೆ: ಗ್ರಾಮ ಆಡಳಿತಾಧಿಕಾರಿಗಳು ಸ್ಥಳೀಯವಾಗಿ ತನಿಖೆ (ಮಹಜರು) ನಡೆಸಿ, ವಾರಸುದಾರರಿಂದ ಅಫಿಡವಿಟ್ ಪಡೆದು ಪ್ರಕ್ರಿಯೆ ಆರಂಭಿಸಬಹುದು.

ವಂಶವೃಕ್ಷ ಇಲ್ಲದಿದ್ದರೆ: ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಅಥವಾ ನೋಟರಿ ಮುಂದೆ ಪ್ರಮಾಣೀಕರಿಸಿದ ವಂಶವೃಕ್ಷವನ್ನು ಬಳಸಬಹುದು.

ತಕರಾರು ಪ್ರಕರಣಗಳ ವಿಲೇವಾರಿ: ವಾರಸುದಾರರಲ್ಲಿ ಭಿನ್ನಾಭಿಪ್ರಾಯವಿದ್ದರೆ ಅಂತಹ ಪ್ರಕರಣಗಳನ್ನು ತಹಶೀಲ್ದಾರರು 15 ರಿಂದ 30 ದಿನಗಳೊಳಗೆ ಇತ್ಯರ್ಥಪಡಿಸಬೇಕು.

ಜಂಟಿ ಖಾತೆ: ವಾರಸುದಾರರ ನಡುವೆ ಹಂಚಿಕೆ ಆಗದಿದ್ದರೆ, ಸದ್ಯಕ್ಕೆ ಲಭ್ಯವಿರುವ ಎಲ್ಲಾ ವಾರಸುದಾರರ ಹೆಸರನ್ನು ಜಂಟಿಯಾಗಿ ಖಾತೆಗೆ ಸೇರಿಸಲಾಗುತ್ತದೆ. ಇದು ಯಾರಿಗೂ ಅನ್ಯಾಯವಾಗದಂತೆ ತಡೆಯಲು ಸಹಕಾರಿ.

ಸಮಯ ಮಿತಿ: ನೋಟಿಸ್ ನೀಡಿದ 15 ದಿನಗಳೊಳಗೆ ಯಾವುದೇ ಆಕ್ಷೇಪಣೆ ಬರದಿದ್ದರೆ ಭೂಮಿ ತಂತ್ರಾಂಶದಲ್ಲಿ ಹೊಸ ವಾರಸುದಾರರ ಹೆಸರು ದಾಖಲಾಗುತ್ತದೆ.

ಗಮನಿಸಿ: ಈ ಹೊಸ ನಿಯಮಗಳು ಮಾರ್ಚ್ 07, 2026 ರಿಂದ ಜಾರಿಗೆ ಬರಲಿದ್ದು, ಈ ಹಿಂದಿನ 2020 ಮತ್ತು 2024 ರ ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular