HomeLatest Newsಬಿಳಿ ಬಟ್ಟೆ ಮೇಲಿನ ಯಾವುದೇ ರೀತಿಯ ಕಲೆ ತೆಗೆಯಲು ಇನ್ನು ಬೇಡ ಟೆನ್ಷನ್‌

ಬಿಳಿ ಬಟ್ಟೆ ಮೇಲಿನ ಯಾವುದೇ ರೀತಿಯ ಕಲೆ ತೆಗೆಯಲು ಇನ್ನು ಬೇಡ ಟೆನ್ಷನ್‌

ಬಿಳಿ ಬಟ್ಟೆ ಕಲೆಯಾದರೆ ತೊಳೆಯುವುದು ತುಂಬಾ ಕಷ್ಟ. ಅದನ್ನು ಸಾಮಾನ್ಯವಾದ ಡಿಟರ್ಜೆಂಟ್ ಪೌಡರ್, ಸೋಪ್ ಬಳಸಿ ಸ್ವಚ್ಚ ಮಾಡಲು ಆಗುವುದಿಲ್ಲ. ಹಾಗಾಗಿ ಬಿಳಿ ಬಟ್ಟೆ ಮೇಲೆ ಯಾವುದೇ ರೀತಿಯ ಕಲೆಯಾದರೆ ಈ ಟಿಫ್ಸ್ ಫಾಲೋ ಮಾಡಿ.

*ಬಿಳಿ ಬಟ್ಟೆಯ ಮೇಲೆ ರಕ್ತ ಮತ್ತು ಎಣ್ಣೆಯ ಕಲೆಯಾದರೆ 4 ಹನಿ ಅಮೋನಿಯಾ, 1 ಚಮಚ ಹೈಡ್ರೋಜನ್ ಪೆರಾಕ್ಸೈಡ್ ಮತ್ತು 2 ಲೀಟರ್ ನೀರನ್ನು ಮಿಕ್ಸ್ ಮಾಡಿ ಅದರಲ್ಲಿ ಕಲೆಯಾದ ಬಿಳಿ ಬಟ್ಟೆಯನ್ನು ನೆನೆಸಿ 1-2 ಗಂಟೆಗಳ ಕಾಲ ಬಿಟ್ಟು ಬಳಿಕ ಡಿಟರ್ಜೆಂಟ್ ನಿಂದ ವಾಶ್ ಮಾಡಿ.

*ಬಿಳಿ ಬಟ್ಟೆ ಹಳದಿ ಗಟ್ಟಿದ್ದರೆ ಅದನ್ನು ಬಿಳುಪಾಗಿಸಲು ವಾಷಿಂಗ್ ಮೆಷಿನ್ ಒಳಗೆ 3-4 ಆಸ್ಪಿರಿನ್ ಮಾತ್ರೆಗಳನ್ನು ಹಾಕಿ ಬಟ್ಟೆಗಳನ್ನು ವಾಶ್ ಮಾಡಿ. ಇದರಿಂದ ಬಟ್ಟೆ ಬಿಳುಪಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬಿಳಿ ಬಟ್ಟೆಯ ಮೇಲೆ ಲಿಪ್ ಸ್ಟಿಕ್ ಮತ್ತು ಪೌಂಡೇಶನ್ ಕಲೆಗಳನ್ನು ತೆಗೆದು ಹಾಕಲು ಬ್ರೆಡ್ ನ್ನು ಉಂಡೆಯಾಗಿ ಮಾಡಿ ಅದರಿಂದ ಉಜ್ಜಿ ಬಳಿಕ ವಾಶ್ ಮಾಡಿ.

*ಬಿಳಿ ಬಟ್ಟೆಯ ಮೇಲೆ ಇಂಕ್ ಕಲೆಯಾಗಿದ್ದರೆ ಅದರ ಮೇಲೆ ಗ್ಲಾಸ್ ಕ್ಲೀನರ್ ಲಿಕ್ವಿಡ್ ನ್ನು ಸ್ಪ್ರೇ ಮಾಡಿ 5 ನಿಮಿಷ ಬಿಟ್ಟು ಎಂದಿನಂತೆ ಬಟ್ಟೆಯನ್ನು ತೊಳೆಯಿರಿ.

*ಬಿಳಿ ಬಟ್ಟೆಯ ಮೇಲೆ ಬೆವರಿನಿಂದ ಹಳದಿ ಕಲೆಯಾದರೆ 1 ಚಮಚ ಬೋರಿಕ್ ಆಮ್ಲಕ್ಕೆ ನೀರನ್ನು ಬೆರೆಸಿ ಕಲೆಗಳಿಗೆ ಹಾಕಿ 20 ನಿಮಿಷ ಬಿಟ್ಟು ವಾಶ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular