ಬೆಂಗಳೂರು : ಜ.18 ರಂದು ನಿಗದಿಯಾಗಿದ್ದ (NMMS) ಪರೀಕ್ಷೆ ಫೆ.1 ಕ್ಕೆ ಮುಂದೂಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2025-26ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿ ವೇತನ (NMMS) ಪರೀಕ್ಷೆಯನ್ನು ದಿನಾಂಕ:18.01.2026 (ಭಾನುವಾರ)ರಂದು ನಡೆಸುವುದಾಗಿ ಉಲ್ಲೇಖ(2)ರ ಈ ಕಛೇರಿ ಜ್ಞಾಪನದಲ್ಲಿ ತಿಳಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ಮುಂದೂಡಿ ದಿನಾಂಕ:01.02.2026 (ಭಾನುವಾರ)ರಂದು ನಿಗದಿಪಡಿಸಲಾಗಿದೆ.
ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ. ಹಾಗೂ ಈಗಾಗಲೇ NMMS ಪರೀಕ್ಷೆಗೆ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳನ್ನು ಬೇರೆ ಯಾವುದೇ ಪರೀಕ್ಷೆಗಳಿಗೆ ನೀಡದಂತೆ ಕ್ರಮವಹಿಸಲು ತಿಳಿಸಿದೆ.


