HomeLive Newsಪಾಕಿಸ್ತಾನ ರಾಷ್ಟ್ರೀಯತೆ ಮುಚ್ಚಿಟ್ಟು ಕೆಲಸ ಗಿಟ್ಟಿಸಿಕೊಂಡು ಶಿಕ್ಷಕಿಯಾದ ಮಹಿಳೆ: FIR ದಾಖಲು

ಪಾಕಿಸ್ತಾನ ರಾಷ್ಟ್ರೀಯತೆ ಮುಚ್ಚಿಟ್ಟು ಕೆಲಸ ಗಿಟ್ಟಿಸಿಕೊಂಡು ಶಿಕ್ಷಕಿಯಾದ ಮಹಿಳೆ: FIR ದಾಖಲು

ಲಖ್ನೌ: ಶಿಕ್ಷಕಿ ಕೆಲಸ ಗಿಟ್ಟಿಸಿಕೊಳ್ಳಲು ಮಹಿಳೆಯೊಬ್ಬಳು ಪಾಕಿಸ್ತಾನ ರಾಷ್ಟ್ರೀಯತೆಯನ್ನೇ ಮುಚ್ಚಿಟ್ಟಿದ್ದ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ ನಕಲಿ ದಾಖಲೆ ಸೃಷ್ಟಿಸಿ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದು, ಪಾಕಿಸ್ತಾನ ರಾಷ್ಟ್ರೀಯತೆಯನ್ನು ಮುಚ್ಚಿಟ್ಟಿದ್ದಾಳೆ ಎಂಬುದು ಇಲಾಖೆಯ ಆಂತರಿಕ ತನಿಖೆಯಲ್ಲಿ ಬಯಲಾಗಿದೆ.

ಶಿಕ್ಷಣ ಇಲಾಖೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕಿ ಮಹಿರಾ ಅಖ್ತರ್ ವಿರುದ್ಧ ಅಜೀಮ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿವೆ. ಮಹಿಳೆ ಕುಮ್ಹರಿಯಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆ ಪಾಕಿಸ್ತಾನಿ ಪ್ರಜೆ. ಆದರೆ ನಕಲಿ ವಿಳಾಸ ಕೊಟ್ಟು ಪ್ರಮಾಣ ಪತ್ರ ಸಿದ್ಧಪಡಿಸಿ ಕೆಲಸ ಗಿಟ್ಟಿಸಿಕೊಂಡಿದ್ದಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಕಲಿ ದಾಖಲೆ ಸಲ್ಲಿಕೆ ಹಾಗೂ ವಂಚನೆ ಹಿನ್ನೆಲೆಯಲ್ಲಿ ಮಹಿಳೆ ವಿರುದ್ಧ ಬಿಎನ್ ಎಸ್ ಸೆಕ್ಷನ್ 318(4), 336, 338 ಮತ್ತು 340 ರ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಅಧಿಕಾರಿಗಳು ಹೇಳುವ ಪ್ರಕಾರ ಮಹಿರಾ ಅಖ್ತರ್ ಅಲಿಯಾಸ್ ಫರ್ಜಾನಾ 1979ರಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗಿ ಪಾಕಿಸ್ತಾನಿ ಪೌರತ್ವ ಪಡೆದಿದ್ದಾಳೆ. ವಿಚ್ಛೇದನ ಬಳಿಕ ಪಾಕಿಸ್ತಾನ ಪಾಸ್ ಪೋರ್ಟ್ ನಲ್ಲೇ ಭಾರತಕ್ಕೆ ಮರಳಿದ್ದಾಳೆ. 1985 ಸುಮಾರಿಗೆ ಸ್ಥಳೀಯ ವ್ಯಕ್ತಿಯೋರ್ವನನ್ನು ವಿವಾಹವಾಗಿದ್ದಾಳೆ. ಇದೇ ವೇಳೆ ತನ್ನನ್ನು ಭಾರತೀಯ ಪ್ರಜೆ ಎಂದು ಬಿಂಬಿಸಿಕೊಳ್ಳಲು ನಕಲಿ ದಾಖಲೆ ಕೊಟ್ಟು ಶಿಕ್ಷಣ ಇಲಾಖೆಯಲ್ಲಿ ಕೆಲಸ ಪಡೆದಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular