HomeInternationalದಂತವೈದ್ಯರ ಬಳಿ ಹೊರಟವನಿಗೆ ಸಿಡಿಲ ಶಾಕ್: ಮೈ ನಡುಗಿಸುತ್ತೆ ಈ ವಿಡಿಯೋ | Watch

ದಂತವೈದ್ಯರ ಬಳಿ ಹೊರಟವನಿಗೆ ಸಿಡಿಲ ಶಾಕ್: ಮೈ ನಡುಗಿಸುತ್ತೆ ಈ ವಿಡಿಯೋ | Watch

ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ಆಕಾಶದಿಂದ ಧರೆಗಿಳಿದ ಸಿಡಿಲು ವ್ಯಕ್ತಿಯೊಬ್ಬನ ಕಾಲಿಗೆ ಬಡಿದಿದ್ದು, ಆತ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನ ಸ್ಟೇಟನ್ ಐಲೆಂಡ್‌ನಲ್ಲಿ ನಡೆದಿದೆ. ಈ ಇಡೀ ಆಘಾತಕಾರಿ ದೃಶ್ಯ ಮನೆಯ ಮುಂಭಾಗ ಅಳವಡಿಸಲಾಗಿದ್ದ ಡೋರ್‌ಬೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಿದವರ ಮೈ ನಡುಗಿಸುವಂತಿದೆ.

ಘಟನೆಯ ವಿವರ: ಥಾಮಸ್ ಫಹ್ಮಿ ಎಂಬ ವ್ಯಕ್ತಿ ಹಲ್ಲಿನ ತಪಾಸಣೆಗಾಗಿ ದಂತವೈದ್ಯರ ಬಳಿ ತೆರಳಲು ಮನೆಯಿಂದ ಹೊರಬಂದಿದ್ದರು. ಅವರು ತಮ್ಮ ಮನೆಯ ಮುಂಭಾಗದ ಬಾಗಿಲು ದಾಟಿ ಹೆಜ್ಜೆ ಇಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ಆಕಾಶದಿಂದ ಪ್ರಚಂಡ ವೇಗದಲ್ಲಿ ಬಂದ ಮಿಂಚು ನೇರವಾಗಿ ಅವರ ಕಾಲಿಗೆ ಅಪ್ಪಳಿಸಿದೆ. ಸಿಡಿಲು ಅಪ್ಪಳಿಸಿದ ರಭಸಕ್ಕೆ ಬೆಚ್ಚಿಬಿದ್ದ ಫಹ್ಮಿ, ತಕ್ಷಣವೇ ಮನೆಯೊಳಗೆ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ವ್ಯಕ್ತಿ ಹಂಚಿಕೊಂಡ ಭಯಾನಕ ಅನುಭವ: ಘಟನೆಯ ಕುರಿತು ಮಾಧ್ಯಮಗಳೊಂದಿಗೆ ಆಘಾತಕಾರಿ ಅನುಭವವನ್ನು ಹಂಚಿಕೊಂಡಿರುವ ಫಹ್ಮಿ, “ಸಿಡಿಲು ಬಡಿದ ತಕ್ಷಣವೇ ನನ್ನ ಇಡೀ ದೇಹದಲ್ಲಿ ಈ ಹಿಂದೆಂದೂ ಅನುಭವಿಸದಂತಹ ವಿಚಿತ್ರ ಸಂವೇದನೆ ಶುರುವಾಯಿತು. ದೇಹವೆಲ್ಲ ಉರಿಯುತ್ತಿರುವ ಅನುಭವ, ತೀವ್ರವಾದ ಮರಗಟ್ಟುವಿಕೆ, ವಿಪರೀತ ನೋವು ಮತ್ತು ಜುಮ್ಮೆನ್ನುವ ಅನುಭವವಾಯಿತು,” ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಗಳಿಲ್ಲದೆ ಪಾರಾದ ಅಚ್ಚರಿ: ಸಿಡಿಲು ಬಡಿದ ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಸಾಮಾನ್ಯವಾಗಿ ಮಿಂಚು ಬಡಿದಾಗ ದೇಹ ತೀವ್ರವಾಗಿ ಸುಟ್ಟು ಕರಕಲಾಗುವ ಸಾಧ್ಯತೆಗಳಿರುತ್ತವೆ. ಆದರೆ, ವೈದ್ಯಕೀಯ ಪರೀಕ್ಷೆಗಳಲ್ಲಿ ಫಹ್ಮಿ ಅವರ ದೇಹದ ಮೇಲೆ ಯಾವುದೇ ಗಂಭೀರವಾದ ಸುಟ್ಟ ಗಾಯಗಳಾಗಲಿ ಅಥವಾ ಪ್ರಾಣಾಪಾಯದ ಲಕ್ಷಣಗಳಾಗಲಿ ಕಂಡುಬಂದಿಲ್ಲ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಅವರು, “ನನ್ನ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸಾವು ಹತ್ತಿರ ಬಂದು ವಾಪಸ್ ಹೋದಂತಾಗಿದೆ. ಈ ಎರಡನೇ ಜನ್ಮ ನೀಡಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದ್ದೇನೆ,” ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular