HomeIndiaಹಿಮಾಲಯ ಪರ್ವತ ಪ್ರದೇಶದಲ್ಲಿ ಒಂದೇ ತಿಂಗಳಲ್ಲಿ 130 ಬಾರಿ ಭೂಕಂಪ! ಭಾರೀ ಅಪಾಯ ಎದುರಾಗುತ್ತಿದೆಯೇ?

ಹಿಮಾಲಯ ಪರ್ವತ ಪ್ರದೇಶದಲ್ಲಿ ಒಂದೇ ತಿಂಗಳಲ್ಲಿ 130 ಬಾರಿ ಭೂಕಂಪ! ಭಾರೀ ಅಪಾಯ ಎದುರಾಗುತ್ತಿದೆಯೇ?

ಹಿಮಾಲಯ ಪರ್ವತ ಪ್ರದೇಶವು ನಿರಂತರ ಭೂಕಂಪನದ ಆಘಾತಕ್ಕೆ ತತ್ತರಿಸುತ್ತಿದೆ. ಕೇವಲ ಆಗಸ್ಟ್‌ ತಿಂಗಳೊಂದರಲ್ಲೇ 130ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ತಿಳಿಸಿದೆ.

ನೇಪಾಳದ ಜಲಪ್ರಳಯದ ಭೀತಿ ಇನ್ನೂ ಮಾಸುವ ಮುನ್ನವೇ, ಹಿಮಾಲಯ ಪ್ರದೇಶದಲ್ಲಿ ಸರಣಿ ಭೂಕಂಪಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಭೂಕಂಪಗಳು ಯಾವುದಾದರೂ ದೊಡ್ಡ ಅಪಾಯದ ಮುನ್ಸೂಚನೆಯೇ ಎಂಬ ಚರ್ಚೆ ಕೂಡ ಆರಂಭವಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಅಂಕಿಅಂಶಗಳ ಪ್ರಕಾರ, ಆಗಸ್ಟ್‌ ತಿಂಗಳಲ್ಲಿ ಹಿಮಾಲಯ ಪ್ರದೇಶ ಹಾಗೂ ಅದರ ಗಡಿಗೆ ಹೊಂದಿಕೊಂಡಿರುವ ಹಿಂದುಕುಶ್‌–ಪಾಮೀರ್‌ ಪ್ರದೇಶದಲ್ಲಿ 130ಕ್ಕೂ ಹೆಚ್ಚು ಭೂಕಂಪಗಳು ದಾಖಲಾಗಿವೆ. ಈ ಪೈಕಿ 63 ಭೂಕಂಪಗಳು ಭಾರತದ ಹಿಮಾಲಯ ಗಡಿ ಪ್ರದೇಶಗಳಲ್ಲೇ ಸಂಭವಿಸಿರುವುದು ಗಮನಾರ್ಹ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಡಾಖ್‌, ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಒಟ್ಟು 36 ಬಾರಿ ಭೂಮಿ ಕಂಪಿಸಿದೆ. ನೆರೆಯ ಅಫ್ಘಾನಿಸ್ತಾನದಲ್ಲಿ 26 ಬಾರಿ ಹಾಗೂ ನೇಪಾಳದಲ್ಲಿ 10 ಬಾರಿ ಭೂಕಂಪನ ದಾಖಲಾಗಿದೆ.

ಲಡಾಖ್‌ನಲ್ಲಿ ಭೂ ಕಂಪನ

ದಾಖಲಾಗಿರುವ ಬಹುತೇಕ ಭೂಕಂಪಗಳು ಕಡಿಮೆ ತೀವ್ರತೆಯದ್ದಾಗಿದ್ದರೂ, ಜನರಲ್ಲಿ ಆತಂಕ ಮೂಡಿಸಿದೆ. ಆಗಸ್ಟ್‌ 13ರಂದು ಲಡಾಖ್‌ ಪ್ರದೇಶದಲ್ಲಿ ರಿಕ್ಟರ್‌ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ದಿನ 4.3 ತೀವ್ರತೆಯ ಮತ್ತೊಂದು ಕಂಪನವೂ ದಾಖಲಾಗಿತ್ತು.

ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿಯೂ ನಿರಂತರವಾಗಿ ಭೂ ಕಂಪನಗಳು ದಾಖಲಾಗುತ್ತಿವೆ. ಕಡಿಮೆ ಅವಧಿಯಲ್ಲಿ ಪದೇಪದೇ ಭೂಮಿ ಕಂಪಿಸುತ್ತಿರುವುದು ಭೂಗರ್ಭದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನೇಪಾಳದ ದುರಂತಕ್ಕಿಂತಲೂ ದೊಡ್ಡ ಅಪಾಯವೇ?

ಮತ್ತೊಂದೆಡೆ, ಆಗಸ್ಟ್‌ 26ರಂದು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 4,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿ ಹೇಳಿದೆ. ಲಾಂಗ್‌ಟಾಂಗ್‌ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗಾಗಿ ಭಾರತ ಮತ್ತು ನೇಪಾಳದ ರಕ್ಷಣಾ ತಂಡಗಳು ಸುಮಾರು 185 ಮೀಟರ್‌ ಆಳದವರೆಗೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ಈ ದುರಂತದ ಆಘಾತದಿಂದ ಹೊರಬರುವ ಮುನ್ನವೇ ಹಿಮಾಲಯ ಪ್ರದೇಶದಲ್ಲಿ ಒಂದೇ ತಿಂಗಳಲ್ಲಿ 130ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿರುವುದು ಆತಂಕ ಮೂಡಿಸಿದೆ. ಇದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಭೂಕಂಪದ ಮುನ್ಸೂಚನೆಯೇ ಎಂಬುದರ ಕುರಿತು ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular