ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಜನವರಿ 1ರಿಂದ ಕ್ರೆಡಿಟ್ ಸ್ಕೋರ್ (Credit Score) ನವೀಕರಣದ ನಿಯಮ ಬದಲಾಗಲಿದೆ. ಇನ್ಮುಂದೆ ಬ್ಯಾಂಕುಗಳು ಪ್ರತಿ ವಾರಕ್ಕೊಮ್ಮೆ ಗ್ರಾಹಕರ ಕ್ರೆಡಿಟ್ ಡೇಟಾವನ್ನು ಅಪ್‌ಡೇಟ್ ಮಾಡುವುದು ಕಡ್ಡಾಯ. ಇದರಿಂದ ನಿಮ್ಮ ಸಾಲದ ಇತಿಹಾಸವು ಮತ್ತಷ್ಟು ನಿಖರವಾಗಲಿದೆ. ಇದಲ್ಲದೆ, ಎಸ್‌ಬಿಐ, ಎಚ್‌ಡಿಎಫ್‌ಸಿ ಮತ್ತು ಪಿಎನ್‌ಬಿ ಬ್ಯಾಂಕ್‌ಗಳು ಈಗಾಗಲೇ ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡಿದ್ದು, ಜನವರಿಯಿಂದ ಇದರ ಲಾಭ ಗ್ರಾಹಕರಿಗೆ ಸಿಗಲಿದೆ. ಎಫ್‌ಡಿ (ಸ್ಥಿರ ಠೇವಣಿ) ಬಡ್ಡಿದರಗಳಲ್ಲೂ ಹೊಸ ಬದಲಾವಣೆ ನಿರೀಕ್ಷಿಸಲಾಗಿದೆ.
ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ ಇನ್ನು ಮುಂದೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಅನಿವಾರ್ಯ. ಇದನ್ನು ಪೂರ್ಣಗೊಳಿಸದಿದ್ದರೆ ಸರ್ಕಾರಿ ಯೋಜನೆಗಳು ಮತ್ತು ಬ್ಯಾಂಕ್ ವಹಿವಾಟುಗಳಿಗೆ ತೊಂದರೆಯಾಗಬಹುದು. ಡಿಜಿಟಲ್ ವಂಚನೆ ತಡೆಯಲು ವಾಟ್ಸಾಪ್, ಟೆಲಿಗ್ರಾಂ ಮತ್ತು ಸಿಗ್ನಲ್‌ನಂತಹ ಆಪ್‌ಗಳ ಸಿಮ್ ವೆರಿಫಿಕೇಶನ್ ನಿಯಮಗಳನ್ನು ಕೂಡ ಕಠಿಣಗೊಳಿಸಲಾಗುತ್ತಿದೆ.
ಸರ್ಕಾರಿ ನೌಕರರಿಗೆ ಸಂಬಳದ ಬಂಪರ್ ಡಿಸೆಂಬರ್ 31ಕ್ಕೆ 7ನೇ ವೇತನ ಆಯೋಗದ ಅವಧಿ ಮುಕ್ತಾಯವಾಗಲಿದ್ದು, ಜನವರಿ 1, 2026 ರಿಂದ ಬಹುನಿರೀಕ್ಷಿತ 8ನೇ ವೇತನ ಆಯೋಗ ಜಾರಿಗೆ ಬರುವ ಸಾಧ್ಯತೆಯಿದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಯಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ತುಟ್ಟಿಭತ್ಯೆಯೂ (DA) ಏರಿಕೆಯಾಗಲಿದೆ. ಇದು ಹಣದುಬ್ಬರದ ನಡುವೆ ನೌಕರರಿಗೆ ದೊಡ್ಡ ರಿಲೀಫ್ ನೀಡಲಿದೆ.
ಸೋಷಿಯಲ್ ಮೀಡಿಯಾ ಮತ್ತು ಸಂಚಾರ ನಿಯಮ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ತರಲು ಸರ್ಕಾರ ಚಿಂತನೆ ನಡೆಸಿದೆ. ಪೋಷಕರ ನಿಯಂತ್ರಣ (Parental Control) ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ಮಾಲಿನ್ಯ ತಡೆಗೆ ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಣಿಜ್ಯ ವಾಹನಗಳ ಸಂಚಾರಕ್ಕೆ ಹೊಸ ನಿರ್ಬಂಧಗಳು ಜಾರಿಯಾಗಲಿವೆ.
ರೈತರಿಗೆ ಮತ್ತು ಸಾಮಾನ್ಯರಿಗೆ ಮುಖ್ಯ ಸುದ್ದಿ
- ರೈತರಿಗೆ ಐಡಿ ಕಾರ್ಡ್: ಪಿಎಂ-ಕಿಸಾನ್ ಯೋಜನೆಯ ಹಣ ಪಡೆಯಲು ಇನ್ಮುಂದೆ ರೈತರಿಗೆ ಪ್ರತ್ಯೇಕ ಐಡಿ ಕಡ್ಡಾಯವಾಗಲಿದೆ. ಕಾಡುಪ್ರಾಣಿಗಳಿಂದ ಬೆಳೆ ನಾಶವಾದರೆ 72 ಗಂಟೆಯೊಳಗೆ ದೂರು ನೀಡಿದರೆ ವಿಮಾ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
- ಐಟಿಆರ್ ಫಾರ್ಮ್: ತೆರಿಗೆದಾರರಿಗಾಗಿ ಹೊಸ ಆದಾಯ ತೆರಿಗೆ ರಿಟರ್ನ್ ಫಾರ್ಮ್ ಪರಿಚಯಿಸಲಾಗುತ್ತಿದ್ದು, ಇದರಲ್ಲಿ ನಿಮ್ಮ ಬ್ಯಾಂಕ್ ವಹಿವಾಟಿನ ವಿವರಗಳು ಮೊದಲೇ ಭರ್ತಿಯಾಗಿರುತ್ತವೆ.
- ಅಡುಗೆ ಅನಿಲ ದರ: ಪ್ರತಿ ತಿಂಗಳಂತೆ ಜನವರಿ 1ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳು ಪರಿಷ್ಕರಣೆಯಾಗಲಿವೆ.

