HomeLatest NewsBREAKING: ಬ್ರೆಡ್ ಪೀಸ್ ಗಳ ಮಧ್ಯೆ ಕೊಕೇನ್ ಇಟ್ಟು ಸಾಗಾಟ: ವಿದೇಶಿ ಮಹಿಳೆ ಅರೆಸ್ಟ್

BREAKING: ಬ್ರೆಡ್ ಪೀಸ್ ಗಳ ಮಧ್ಯೆ ಕೊಕೇನ್ ಇಟ್ಟು ಸಾಗಾಟ: ವಿದೇಶಿ ಮಹಿಳೆ ಅರೆಸ್ಟ್

ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಡ್ರಗ್ಸ್ ಸಾಗಾಟ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳುರು ಸಿಸಿಬಿ ಪೊಲೀಸರು ಮಾದಕ ವಸ್ತುಗಳ ಪೆಡ್ಲರ್ ಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ.

ಬ್ರೇಡ್ ಪೀಸಗಳ ಮಧ್ಯೆ ಕೊಕೇನ್ ಇಟ್ಟು ಸಾಗಾಟ ಮಾಡುತ್ತಿದ್ದ ವಿದೇಶಿ ಮಹಿಳೆಯೊಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಬಸ್ ನಲ್ಲಿ ಕೊಕೇನ್ ಸಾಗಾಟ ಮಾಡುತ್ತಿದ್ದಳು.

ಅನುಮಾನ ಬಾರದಂತೆ ಬ್ರೆಡ್ ನಲ್ಲಿ ಕೊಕೇನ್ ಇಟ್ಟು ಅದನ್ನು ಪ್ಯಾಕ್ ಮಾಡಿ ಸಾಗಿಸುತ್ತಿದ್ದಳು ಮಹಿಳೆ. ಖಚಿತ ಮಾಹಿತಿ ಮೇರೆಗೆ ಮಹಿಳೆ ಹತ್ತಿದ್ದ ಬಸ್ ಮೇಲೆ ದಾಳಿ ನಡೆಸಿದ ಪೊಲೀಸರು, ಪರಿಶೀಲಿಸಿದಾಗ ಮಹಿಳೆಯ ಬ್ಯಾಗ್ ನಲ್ಲಿ ಬ್ರೆಡ್ ಇತ್ತು. ಮಹಿಳೆ ಇದನ್ನು ತಾನು ತಿನ್ನಲು ತಂದಿದ್ದಾಗಿ ಹೇಳಿದ್ದಾಳೆ. ಬ್ರೆಡ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಬ್ರೆಡ್ ಪೀಸ್ ಗಳ ಮಧ್ಯೆ ಕೊಕೇನ್ ಪ್ಯಾಕೇಟ್ ಇಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

65 ಲಕ್ಷ ಮೌಲ್ಯದ 120 ಗ್ರಾಂ ಕೊಕೇನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೈಜೀರಿಯಾ ಮೂಲದ ಮಹಿಳೆ ಒಲಾಜಿಡೆ ಎಸ್ತಾರ್ ಎಂಬ ಪೆಡ್ಲರ್ ಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular