HomeLatest Newsಕಲ್ಯಾಣ ಕರ್ನಾಟಕದ 'ಕಾಶ್ಮೀರ' ಚಿಂಚೋಳಿಗೆ ಹೊಸ ಕಳೆ : ಜೀಪ್ ಸಫಾರಿ, ಟೆಂಟ್ ಹೌಸ್ ಸೇರಿ...

ಕಲ್ಯಾಣ ಕರ್ನಾಟಕದ ‘ಕಾಶ್ಮೀರ’ ಚಿಂಚೋಳಿಗೆ ಹೊಸ ಕಳೆ : ಜೀಪ್ ಸಫಾರಿ, ಟೆಂಟ್ ಹೌಸ್ ಸೇರಿ ವಿವಿಧ ಯೋಜನೆಗಳಿಗೆ ಚಾಲನೆ!

ಬಿಸಿಲ ನಾಡಿನ ‘ಹಸಿರು ಸ್ವರ್ಗ’ ಎಂದೇ ಕರೆಯಲ್ಪಡುವ ಚಿಂಚೋಳಿ ಅಭಯಾರಣ್ಯದಲ್ಲಿ  ₹2 ಕೋಟಿ ವೆಚ್ಚದ ವಿವಿಧ ಪ್ರವಾಸೋದ್ಯಮ ಯೋಜನೆಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇಂದು ಕಲಬುರಗಿ ಜಿಲ್ಲೆಯಲ್ಲಿನ ಚಿಂಚೋಳಿ ಅರಣ್ಯಧಾಮದ ವಿವಿಧ ಪ್ರವಾಸೋದ್ಯಮ ಉತ್ತೇಜನ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಚಿಂಚೋಳಿ ವನ್ಯಜೀವಿ ಅಭಯಾರಣ್ಯವು ಕಲ್ಯಾಣ ಕರ್ನಾಟಕಕ್ಕೆ ಬಿಸಿಲ ನಾಡಲ್ಲೊಂದು ತಂಪೆರೆವ ಧಾಮ ಎನಿಸಿಕೊಳ್ಳುತ್ತದೆ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುವ ಚಿಂಚೋಳಿ ಅಭಯಾರಣ್ಯವು ವಿಶಿಷ್ಠ ನೈಸರ್ಗಿಕ ಸಂಪತ್ತನ್ನು ಹೊಂದಿದೆ, ಚಿರತೆಗಳು, ಕಾಡು ನಾಯಿಗಳು, ನೀಲಗಾಯ್, ಚುಕ್ಕೆ ಜಿಂಕೆಗಳು, ಬ್ಲ್ಯಾಕ್‌ಬಕ್ಸ್ ಇತ್ಯಾದಿ ಪ್ರಾಣಿಗಳು ಇಲ್ಲಿನ ನಿಸರ್ಗದ ವಾರಸುದಾರರು. ಚಂದ್ರಂಪಳ್ಳಿ ಅಣೆಕಟ್ಟು, ಮಾಣಿಕ್‌ಪುರ ಜಲಪಾತ ಮತ್ತು ಅನೇಕ ಸುಂದರವಾದ ಸ್ಥಳಗಳು ಈ ಪ್ರದೇಶದ ರಮಣೀಯತೆಯನ್ನು ಹೆಚ್ಚಿಸುತ್ತವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರದೇಶವು ಪರಿಸರ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಸ್ಥಳೀಯ ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಕ್ರಿಯಾಶೀಲ ಯೋಜನೆಯನ್ನು ರೂಪಿಸಿದೆ, ಕಳೆದ ವರ್ಷ ರೂಪಿಸಿದ್ದ ನೇಚರ್ ಟ್ರೆಕ್ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಸಾವಿರಾರು ಜನರು ಚಾರಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈಗ- 24 ಲಕ್ಷ ವೆಚ್ಚದಲ್ಲಿ ಜೀಪ್ ಸಫಾರಿಗಾಗಿ ಎರಡು ಕ್ಯಾಂಪರ್ ವಾಹನಗಳನ್ನು ಖರೀದಿಸಿ ಸಫಾರಿ ವಾಹನಗಳಾಗಿ ಮಾರ್ಪಡಿಸಲಾಗಿದೆ.- 64 ಲಕ್ಷ ವೆಚ್ಚದಲ್ಲಿ ಎಲ್ಲಾ ಹವಾಮಾನಗಳಿಗೆ ಒಗ್ಗುವಂತಹ ಸಫಾರಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ದಿನಕ್ಕೆ 6 ಟ್ರಿಪ್‌ಗಳನ್ನು ನಡೆಸಲಾಗುತ್ತದೆ. 43 ಲಕ್ಷ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಚಂದ್ರಂಪಳ್ಳಿಯಲ್ಲಿ ಅಸ್ತಿತ್ವದಲ್ಲಿರುವ ಎರಡು ಮರದ ಕುಟೀರಗಳ ಜೊತೆಗೆ, ಗೊಟ್ಟಂಗೊಟ್ಟದಲ್ಲಿ ಎರಡು ಹೆಚ್ಚುವರಿ ಟೆಂಟ್ ಹೌಸ್‌ಗಳನ್ನು ನಿರ್ಮಿಸಲಾಗಿದೆ. 14 ಲಕ್ಷ ವೆಚ್ಚದಲ್ಲಿ ಮನರಂಜನಾ ಚಟುವಟಿಕೆಗಳಿಗಾಗಿ 12 ಆಸನಗಳ ಮೋಟಾರ್ ದೋಣಿ ಮತ್ತು ಎರಡು ಪೆಡಲ್ ದೋಣಿಗಳು ಮತ್ತು ಕಯಾಕ್ ಗಳನ್ನು ಒದಗಿಸಲಾಗಿದೆ ಎಂದಿದ್ದಾರೆ.

ಕೆಕೆಆರ್ ಡಿಬಿಯ ಮ್ಯಾಕ್ರೋ ಅನುದಾನದಲ್ಲಿ ₹2 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಕ್ರಮಗಳು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಅನುಮಾನವಿಲ್ಲ. ಇಲ್ಲಿನ ಪ್ರವಾಸೋದ್ಯಮ ಹೆಚ್ಚಿದಂತೆ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರಕುತ್ತದೆ ಮತ್ತು ಸ್ಥಳೀಯರ ಉದ್ಯೋಗಾವಕಾಶಗಳು ಹೆಚ್ಚುತ್ತದೆ ಎಂಬ ನಂಬಿಕೆ ನಮ್ಮದು ಎಂದು ಸಚಿವರು ಹೇಳಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular