HomeInternationalಸೌದಿ ಅರೇಬಿಯಾವನ್ನೂ ಹಿಂದಿಕ್ಕಿದ ಚೀನಾ: ವಿಶ್ವದ ಅತಿದೊಡ್ಡ ತೈಲ ಭಂಡಾರ ಹೊಂದಿರುವ ದೇಶ ಯಾವುದು?

ಸೌದಿ ಅರೇಬಿಯಾವನ್ನೂ ಹಿಂದಿಕ್ಕಿದ ಚೀನಾ: ವಿಶ್ವದ ಅತಿದೊಡ್ಡ ತೈಲ ಭಂಡಾರ ಹೊಂದಿರುವ ದೇಶ ಯಾವುದು?

ನವದೆಹಲಿ: ಇಸ್ರೇಲ್, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರುಪೇರು ಉಂಟಾಗುತ್ತಿದೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ದೇಶದ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ‘ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್’ ಅಂದರೆ ವ್ಯೂಹಾತ್ಮಕ ತೈಲ ಸಂಗ್ರಹವನ್ನು ಹೊಂದಿರುತ್ತದೆ. ಯುದ್ಧ ಅಥವಾ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ತೈಲ ಪೂರೈಕೆ ಸ್ಥಗಿತಗೊಂಡರೆ ಈ ಸಂಗ್ರಹವನ್ನು ಬಳಸಲಾಗುತ್ತದೆ.

ಅತಿ ಹೆಚ್ಚು ತೈಲ ಸಂಗ್ರಹ ಹೊಂದಿರುವ ದೇಶ ಯಾವುದು? ಸಾಮಾನ್ಯವಾಗಿ ಅರಬ್ ರಾಷ್ಟ್ರಗಳ ಬಳಿ ಹೆಚ್ಚು ತೈಲ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಸಂಗ್ರಹದ ವಿಚಾರಕ್ಕೆ ಬಂದರೆ ಚೀನಾ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವರದಿಗಳ ಪ್ರಕಾರ, ಚೀನಾ ಪ್ರಸ್ತುತ ಸುಮಾರು 900 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲದ ಬೃಹತ್ ಸಂಗ್ರಹವನ್ನು ಹೊಂದಿದೆ. ಇನ್ನು ಜಪಾನ್ ಸುಮಾರು 470 ಮಿಲಿಯನ್ ಬ್ಯಾರೆಲ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ದೊಡ್ಡಣ್ಣ ಅಮೆರಿಕ ತನ್ನ ವ್ಯೂಹಾತ್ಮಕ ಸಂಗ್ರಹದಲ್ಲಿ ಸುಮಾರು 415.4 ಮಿಲಿಯನ್ ಬ್ಯಾರೆಲ್ ತೈಲವನ್ನು ಇರಿಸಿಕೊಂಡಿದೆ.

ಭಾರತದ ಬಳಿ ಎಷ್ಟಿದೆ ತೈಲ? ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದ ತೈಲ ಸಂಗ್ರಹದ ಪ್ರಮಾಣ ಸದ್ಯಕ್ಕೆ ಸುಮಾರು 39 ಮಿಲಿಯನ್ ಬ್ಯಾರೆಲ್ ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು ತನ್ನ ಸಂಗ್ರಹದಿಂದ ತೈಲ ಬಿಡುಗಡೆ ಮಾಡುವಂತೆ ಜಿ-7 ರಾಷ್ಟ್ರಗಳಿಗೆ ಮನವಿ ಮಾಡಿತ್ತು. ಆದರೆ ಭಾರತ ಮಾತ್ರ ತನ್ನ ಸಂಗ್ರಹದಿಂದ ತೈಲ ಬಿಡುಗಡೆ ಮಾಡಲು ನಿರಾಕರಿಸಿದೆ. ಈ ಬಿಕ್ಕಟ್ಟು ನಾವು ಸೃಷ್ಟಿಸಿದ್ದಲ್ಲ, ಇದಕ್ಕೆ ಕಾರಣರಾದವರೇ ಬೆಲೆ ಏರಿಕೆಯನ್ನು ನಿಯಂತ್ರಿಸಲಿ ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶದ ಇಂಧನ ಸುರಕ್ಷತೆ ಬಗ್ಗೆ ಸರ್ಕಾರ ಹೇಳುವುದೇನು? ಭಾರತದ ಕಚ್ಚಾ ತೈಲ ಪೂರೈಕೆ ಪರಿಸ್ಥಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಭರವಸೆ ನೀಡಿದ್ದಾರೆ. ಭಾರತಕ್ಕೆ ಆಮದಾಗುವ ತೈಲದ ಪೈಕಿ ಶೇ. 70 ರಷ್ಟು ಭಾಗ ಈಗ ಪರ್ಯಾಯ ಮಾರ್ಗಗಳ ಮೂಲಕ ಬರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಲಭ್ಯತೆಯಲ್ಲಿ ಯಾವುದೇ ತೊಂದರೆಯಿಲ್ಲ ಹಾಗೂ ಎಲ್‌ಎನ್‌ಜಿ ಸಾಗಣೆ ಕೂಡ ನಿರಂತರವಾಗಿ ನಡೆಯುತ್ತಿದೆ. ಯುದ್ಧ ದೀರ್ಘಕಾಲ ಮುಂದುವರಿದರೂ ಪರಿಸ್ಥಿತಿಯನ್ನು ನಿಭಾಯಿಸಲು ಭಾರತದ ಬಳಿ ಸಾಕಷ್ಟು ವ್ಯವಸ್ಥೆಗಳಿವೆ ಎಂದು ಅವರು ತಿಳಿಸಿದ್ದಾರೆ.

ಜಪಾನ್, ಜರ್ಮನಿಯಂತಹ ದೇಶಗಳು ಕೂಡ ಮಿಲಿಯನ್ ಗಟ್ಟಲೆ ಬ್ಯಾರೆಲ್ ತೈಲವನ್ನು ಕಾಯ್ದಿರಿಸಿದ್ದು, ಮಾರುಕಟ್ಟೆಯಲ್ಲಿ ಬೆಲೆಗಳನ್ನು ಸ್ಥಿರಗೊಳಿಸಲು ಇವು ಪ್ರಮುಖ ಪಾತ್ರ ವಹಿಸುತ್ತವೆ. ಭಾರತವು ಕೂಡ ಮುಂದಿನ ದಿನಗಳಲ್ಲಿ ತನ್ನ ವ್ಯೂಹಾತ್ಮಕ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular