HomeIndiaಹೊಸ ಟೋಲ್ ರೂಲ್ಸ್‌: ವಾಹನ ಮಾರುವುದು ಇನ್ನು ಕಷ್ಟ ಕಷ್ಟ

ಹೊಸ ಟೋಲ್ ರೂಲ್ಸ್‌: ವಾಹನ ಮಾರುವುದು ಇನ್ನು ಕಷ್ಟ ಕಷ್ಟ

ಕೇಂದ್ರ ಸರ್ಕಾರ ಟೋಲ್ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಏಪ್ರಿಲ್‌ನಿಂದ ಟೋಲ್‌ನಲ್ಲಿ ನಗದು ಹಣವನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಈಗ ಮತ್ತೊಂದು ಮಹತ್ವದ ನಿಯಮ ಜಾರಿಗೆ ಮುಂದಾಗಿದೆ.

ಟೋಲ್‌ಗಳಲ್ಲಿ ಈಗ ಫಾಸ್ಟ್‌ಟ್ಯಾಗ್ ಮೂಲಕ ಹಣ ಕಡಿತವಾಗುತ್ತಿದೆ. ಆದ್ದರಿಂದ ಯಾವುದೇ ವಾಹನ ಸವಾರರು ಟೋಲ್ ಬಾಕಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕೇಂದ್ರದ ಹೊಸ ನಿಯಮದ ಪ್ರಕಾರ ಟೋಲ್ ಬಾಕಿ ಇದ್ದರೆ ಎನ್‌ಒಸಿ ಸಿಗುವುದಿಲ್ಲ.

ಒಂದು ವೇಳೆ ವಾಹನ ಸವಾರರು ಟೋಲ್ ಶುಲ್ಕವನ್ನು ಬಾಕಿ ಇಟ್ಟುಕೊಂಡಿದ್ದರೆ ಫಿಟ್ನೆಸ್ ಸರ್ಟಿಫಿಕೇಟ್, ಎನ್‌ಒಸಿ ತಡೆಹಿಡಿಯುವ ನಿಯಮವನ್ನು ಸರ್ಕಾರ ಜಾರಿಗೆ ತರಲು ಹೊರಟಿದೆ. ಇದು ಜಾರಿಗೆ ಬಂದರೆ ನಿಮ್ಮ ಟೋಲ್ ಶುಲ್ಕ ಬಾಕಿ ಇದ್ದರೆ ವಾಹನ ಮಾರಾಟ ಮಾಡಲು ಎನ್‌ಒಸಿ ಸಿಗುವುದೇ ಇಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರಡು ಪ್ರತಿ ಸಿದ್ಧ: ಟೋಲ್ ಶುಲ್ಕ ಬಾಕಿ ಉಳಿಸಿಕೊಂಡು ವಾಹನ ಮಾರಾಟ ಮಾಡುವ ಮಾಲೀಕರಿಗೆ ಕಡಿವಾಣ ಹಾಕಲು ಈ ನಿಯಮ ರೂಪಿಸಲಾಗುತ್ತಿದೆ. ಈಗಾಗಲೇ ಕರಡು ನಿಯಮಗಳನ್ನು ರಚಿಸಲಾಗಿದ್ದು, ಶೀಘ್ರವೇ ಇದನ್ನು ಜಾರಿಗೆ ತರಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಹನದ ಬಾಕಿ ಇರುವ ಟೋಲ್ ಶುಲ್ಕವನ್ನು ವಸೂಲಿ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಟೋಲ್ ಮೊತ್ತ ಬಾಕಿ ಇದ್ದರೆ ಇನ್ನು ಮುಂದೆ ಆ ವಾಹನಗಳಿಗೆ ನಿರಕ್ಷೇಪಣಾ ಪ್ರಮಾಣ ಪತ್ರ, ಫಿಟ್ನೆಸ್‌ ಪ್ರಮಾಣ ಪತ್ರ ಮತ್ತು ರಾಷ್ಟ್ರೀಯ ಪರವಾನಗಿಗಳು ಸೇರಿದಂತೆ ಅಗತ್ಯ ಅನುಮೋದನೆ ಸಿಗುವುದಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ನೂರಾರು ವಾಣಿಜ್ಯ ವಾಹನಗಳ ಟೋಲ್ ಶುಲ್ಕ ಬಾಕಿ ಇದೆ. ಟೋಲ್ ಶುಲ್ಕಗಳನ್ನು ಪಾವತಿಸುವವರೆಗೆ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್‌ ಪ್ರಮಾಣ ಪತ್ರಗಳನ್ನು ನೀಡಲಾಗುವುದಿಲ್ಲ ಅಥವಾ ನವೀಕರಿಸಲಾಗುವುದಿಲ್ಲ. ಈ ಕ್ರಮವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಸಂಚರಿಸುವ ವಾಹನಗಳ ಮೇಲೆ ನೇರ ಪರಿಣಾಮ ಬೀರಲಿದೆ.

ಲಾರಿಗಳು ಮತ್ತು ಬಸ್ಸುಗಳು ಸೇರಿದಂತೆ ವಾಣಿಜ್ಯ ವಾಹನಗಳ ರಾಷ್ಟ್ರೀಯ ಪರವಾನಗಿ ಅರ್ಜಿಗಳನ್ನು ಪರಿಶೀಲಿಸುವಾಗ, ಬಾಕಿ ಇರುವ ಟೋಲ್ ಪಾವತಿಗಳ ಬಗ್ಗೆ ಗಮನಹರಿಸಲಾಗುವುದು. ಯಾವುದೇ ಬಾಕಿ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರವೇ ಪರವಾನಗಿಗಳನ್ನು ನೀಡಲಾಗುವುದು ಎಂದು ಕರಡು ನಿಯಮ ಹೇಳಿದೆ.

ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಕಡಿಮೆ ಹಣ ಇರುವ, ಟೋಲ್ ಶುಲ್ಕವನ್ನು ಪಾವತಿ ಮಾಡದ ವಾಹನಗಳ ವಿವರಗಳನ್ನು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮತ್ತು ಸಂಬಂಧಿತ ಬ್ಯಾಂಕುಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಈ ದತ್ತಾಂಶವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನಿರ್ವಹಿಸುವ ಡಿಜಿಟಲ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗುತ್ತದೆ. ಇದು ವಾಹನಗಳ ಟ್ರ್ಯಾಕಿಂಗ್ ಅನ್ನು ಸುಧಾರಿಸಲು ಮತ್ತು ಬಾಕಿ ಇರುವ ಶುಲ್ಕಗಳ ವಸೂಲಾತಿಯನ್ನು ಖಚಿತಪಡಿಸಿಕೊಳ್ಳಲು ಸಹಾಯಕವಾಗಿದೆ.

ನಿರಕ್ಷೇಪಣಾ ಪ್ರಮಾಣ ಪತ್ರ, ಫಿಟ್ನೆಸ್‌ ಪ್ರಮಾಣ ಪತ್ರ ಮತ್ತು ರಾಷ್ಟ್ರೀಯ ಪರವಾನಗಿಗಳು ಸೇರಿದಂತೆ ಅಗತ್ಯ ಅನುಮೋದನೆ ಇಲ್ಲದೇ ವಾಹನ ಮಾರಾಟ ಮಾಡುವುದು ಅಸಾಧ್ಯ. ಟೋಲ್ ಬಾಕಿ ಇರುವ ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿ, ಅದರ ಹೊರೆಯನ್ನು ಹೊಸ ಮಾಲೀಕರ ಮೇಲೆ ಹಾಕುವುದಕ್ಕೆ ಇದರಿಂದ ತಡೆ ಬೀಳಲಿದೆ.

ಈಗಾಗಲೇ ಫಾಸ್ಟ್‌ಟ್ಯಾಗ್, ವಾರ್ಷಿಕ ಪಾಸು ಸೇರಿದಂತೆ ಟೋಲ್ ಸಂಗ್ರಹದಲ್ಲಿ ಹಲವು ಸುಧಾರಣೆಗಳನ್ನು, ಪಾರದರ್ಶಕತೆಯನ್ನು ಸರ್ಕಾರ ತಂದಿದೆ. ಆದರೂ ಸಹ ಟೋಲ್ ಪಾವತಿ ಮಾಡದೇ ಇರುವ ವಾಹನಗಳನ್ನು ಪತ್ತೆ ಹಚ್ಚಲು ಈ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular