HomeLatest News'ಫೋನ್‌ಪೇ' ಬಳಕೆದಾರರಿಗೆ ಬಿಗ್ ಶಾಕ್ ; ಈ ತಪ್ಪು ಮಾಡಿದರೆ ಪ್ರತಿ 3 ತಿಂಗಳಿಗೆ ₹100...

‘ಫೋನ್‌ಪೇ’ ಬಳಕೆದಾರರಿಗೆ ಬಿಗ್ ಶಾಕ್ ; ಈ ತಪ್ಪು ಮಾಡಿದರೆ ಪ್ರತಿ 3 ತಿಂಗಳಿಗೆ ₹100 ದಂಡ!

ಫೋನ್‌ಪೇ ಬಳಸುವವರಿಗೆ ಇದು ಮಹತ್ವದ ಮಾಹಿತಿ. ಫೋನ್‌ಪೇ ತನ್ನ ವಾಲೆಟ್ ಸೇವೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ದೀರ್ಘಕಾಲ ಬಳಸದೇ ಇರುವ ವಾಲೆಟ್‌ಗಳ ಮೇಲೆ ನಿರ್ವಹಣಾ ಶುಲ್ಕ (Maintenance Charge) ವಿಧಿಸಲು ಮುಂದಾಗಿದೆ.

ಫೋನ್‌ಪೇ ವಾಲೆಟ್ ಅನ್ನು ಸಕ್ರಿಯಗೊಳಿಸಿದರೆ ಬ್ಯಾಂಕ್ ಖಾತೆ ಇಲ್ಲದಿದ್ದರೂ ವಹಿವಾಟು ನಡೆಸಬಹುದು. ಸಣ್ಣ ಮೊತ್ತದ ಪಾವತಿಗಳನ್ನು ವೇಗವಾಗಿ ಮಾಡಲು ಹಾಗೂ ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲದ ಕಾರಣ ಅನೇಕರು ಈ ಸೇವೆಯನ್ನು ಬಳಸುತ್ತಿದ್ದಾರೆ. ಆದರೆ ವಾಲೆಟ್ ಸಕ್ರಿಯಗೊಳಿಸಿ ದೀರ್ಘಕಾಲ ಬಳಸದ ಬಳಕೆದಾರರಿಗೆ ಇದೀಗ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ.

ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ವಾಲೆಟ್ ಅನ್ನು ದೀರ್ಘಕಾಲ ಬಳಸದೇ ಇದ್ದರೆ ಅದು ನಿಷ್ಕ್ರಿಯ (Inactive) ಆಗುತ್ತದೆ. ಇಂತಹ ವಾಲೆಟ್‌ಗಳ ಮೇಲೆ ಫೋನ್‌ಪೇ ಪ್ರತಿ ಮೂರು ತಿಂಗಳಿಗೊಮ್ಮೆ ₹100 (ಜಿಎಸ್‌ಟಿ ಸೇರಿದಂತೆ) ನಿರ್ವಹಣಾ ಶುಲ್ಕ ವಿಧಿಸಲಿದೆ. ಈ ಕುರಿತು ಕಂಪನಿ ಈಗಾಗಲೇ ಬಳಕೆದಾರರಿಗೆ ನೋಟಿಫಿಕೇಶನ್‌ಗಳನ್ನು ಕಳುಹಿಸಲು ಆರಂಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಲೆಟ್‌ನಲ್ಲಿ ₹100 ಅಥವಾ ಅದಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇದ್ದರೆ, ಕಂಪನಿ ನೇರವಾಗಿ ₹100 ಕಡಿತಗೊಳಿಸುತ್ತದೆ. ಬ್ಯಾಲೆನ್ಸ್ ₹100ಕ್ಕಿಂತ ಕಡಿಮೆ ಇದ್ದರೆ ಲಭ್ಯವಿರುವ ಸಂಪೂರ್ಣ ಮೊತ್ತವನ್ನು ಶುಲ್ಕವಾಗಿ ಕಡಿತ ಮಾಡಿಕೊಳ್ಳಲಿದೆ.

ದಂಡ ತಪ್ಪಿಸಿಕೊಳ್ಳುವುದು ಹೇಗೆ?

ವಾಲೆಟ್ ನಿಷ್ಕ್ರಿಯವಾಗದಂತೆ ನೋಡಿಕೊಳ್ಳಲು ವರ್ಷದಲ್ಲಿ ಕೆಲವು ಬಾರಿ ವಾಲೆಟ್ ಬಳಸಿ ವಹಿವಾಟು ನಡೆಸಬೇಕು. ವಾಲೆಟ್ ಮೂಲಕ ಪಾವತಿ ಮಾಡುವುದು, ಹಣ ವರ್ಗಾವಣೆ ಮಾಡುವುದು ಅಥವಾ ಇತರೆ ಹಣಕಾಸು ವ್ಯವಹಾರಗಳನ್ನು ನಡೆಸುವುದರಿಂದ ಖಾತೆ ಸಕ್ರಿಯವಾಗಿರುತ್ತದೆ.

ಯಾವಾಗ ವಾಲೆಟ್ ನಿಷ್ಕ್ರಿಯವಾಗುತ್ತದೆ?

ಬಳಕೆದಾರರು ತಮ್ಮ ಫೋನ್‌ಪೇ ವಾಲೆಟ್‌ನಲ್ಲಿ ಸತತ 365 ದಿನಗಳ ಕಾಲ ಯಾವುದೇ ಹಣಕಾಸು ವಹಿವಾಟು ನಡೆಸದಿದ್ದರೆ, ಆ ವಾಲೆಟ್ ಅನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಅಂತಹ ಖಾತೆಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ₹100 ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ.ಫೋನ್‌ಪೇ ವಾಲೆಟ್ ಹೊಂದಿರುವವರು ವರ್ಷಕ್ಕೆ ಕನಿಷ್ಠ ಒಂದು ಬಾರಿ ಆದರೂ ವಹಿವಾಟು ನಡೆಸುವುದು ಉತ್ತಮ. ಇಲ್ಲವಾದರೆ 365 ದಿನಗಳ ಬಳಿಕ ವಾಲೆಟ್ ನಿಷ್ಕ್ರಿಯಗೊಂಡು, ಪ್ರತಿ ಮೂರು ತಿಂಗಳಿಗೆ ₹100ರಷ್ಟು ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular