HomeLatest Newsರಿಂಕು ಸಿಂಗ್ ತಂದೆ ಸತ್ತ ದಿನವೂ ಈ ಶೋಕಿ ಬೇಕಾ? ಟೀಮ್ ಇಂಡಿಯಾ ಆಟಗಾರರ ನಡೆಗೆ...

ರಿಂಕು ಸಿಂಗ್ ತಂದೆ ಸತ್ತ ದಿನವೂ ಈ ಶೋಕಿ ಬೇಕಾ? ಟೀಮ್ ಇಂಡಿಯಾ ಆಟಗಾರರ ನಡೆಗೆ ನೆಟ್ಟಿಗರ ಕಿಡಿ; ವಿಡಿಯೊ

ಪ್ರಸ್ತುತ ನಡೆಯುತ್ತಿರುವ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ 2026ರಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ತಂಡದ ಸ್ಪೋಟಕ ಆಟಗಾರ ರಿಂಕು ಸಿಂಗ್ ತಂದೆ ವಿಧಿವಶರಾಗಿದ್ದಾರೆ.

ಮೂಲತಃ ಉತ್ತರಪ್ರದೇಶದ ಅಲಿಘರ್‌ನ ನಿವಾಸಿಯಾದ ರಿಂಕು ಸಿಂಗ್ ತಂದೆ ಖಾನ್‌ಚಂದ್ ಸಿಂಗ್ ಹಲವು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಹಲವು ದಿನಗಳಿಂದ ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ ವಾರವಷ್ಟೇ ಅವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ವಿಧಿವಶರಾಗಿದ್ದಾರೆ. ನಿನ್ನೆ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ತೆರಳಿ ತಂದೆಯ ಆರೋಗ್ಯದ ಮಾಹಿತಿ ಪಡೆದುಕೊಂಡು ವಾಪಸ್ ಬಂದು ಜಿಂಬಾಬ್ವೆ ವಿರುದ್ಧ ಫೀಲ್ಡಿಂಗ್‌ನಲ್ಲಿ ಭಾಗವಹಿಸಿದ್ದ ರಿಂಕು ಸದ್ಯ ತಂದೆಯ ಅಂತ್ಯಸಂಸ್ಕಾರಕ್ಕೆ ಅಲಿಘರ್‌ಗೆ ತೆರಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ಸಮಯಕ್ಕೆ ಟೀಮ್ ಇಂಡಿಯಾ ಆಟಗಾರರಾದ ಅಕ್ಸರ್ ಪಟೇಲ್ ಹಾಗೂ ಅರ್ಷ್‌ದೀಪ್ ಸಿಂಗ್ ವಿಮಾನದಲ್ಲಿ ಕುಳಿತು ಜಸ್‌ಪ್ರೀತ್ ಬುಮ್ರಾಗಾಗಿ ಹುಡುಕಾಟ ನಡೆಸುವ ವಿಡಿಯೊವನ್ನು ಹಾಸ್ಯಾಸ್ಪದವಾಗಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ನೆಟ್ಟಿಗರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಿಂಕು ಸಿಂಗ್ ತಮ್ಮ ತಂದೆ ಅಗಲಿಕೆಯ ಕಾರಣ ಟೂರ್ನಿಯಿಂದ ಮಧ್ಯದಲ್ಲೇ ತೆರಳಿರುವ ಸಂದರ್ಭದಲ್ಲಿ ತಂಡದ ಯಾರೊಬ್ಬರಿಗೂ ಸಹ ಶೋಕ ಇಲ್ಲ. ಶೋಕವಿಲ್ಲದಿದ್ದರೂ ಪರವಾಗಿಲ್ಲ ಇದೊಂದು ದಿನವಾದರೂ ಟೀಮ್ ಇಂಡಿಯಾ ಆಟಗಾರರು ರೀಲ್ಸ್ ಅಥವಾ ಫನ್ನಿ ವಿಡಿಯೊಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು ಟೀಮ್ ಇಂಡಿಯಾ ಆಟಗಾರರ ವಿರುದ್ಧ ಕಿಡಿಕಾರಿದರೆ, ಇನ್ನೂ ಕೆಲವರು ಅದು ಅವರ ವೈಯಕ್ತಿಕ, ರಿಂಕು ಸಿಂಗ್‌ಗೆ ಅವರು ನೇರವಾಗಿ ಸಮಾಧಾನ ಹೇಳಿರಬಹುದು, ರೀಚ್‌ಗಾಗಿ ಇಂತಹ ಪೋಸ್ಟ್ ಹಂಚಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular