ಬಾಲಿವುಡ್ ಅಪ್ರತಿಮ ಕಾಮಿಡಿ ಫ್ರಾಂಚೈಸಿಯ ‘ಧಮಾಲ್ 4’ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ ನಂತರ ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಆಗಮಿಸಲು ದಿನಾಂಕ ನಿಗದಿಪಡಿಸಿಕೊಂಡಿದೆ. ಇಂದೂ ಕುಮಾರ್ ನಿರ್ದೇಶನದ ಈ ನಗೆಹಬ್ಬದ ಚಿತ್ರವು ಈ ಸರಣಿಯಲ್ಲೇ ಅತ್ಯಧಿಕ ಗಳಿಕೆ ಕಂಡ ಯಶಸ್ವಿ ಸಿನಿಮಾವಾಗಿ ಹೊರಹೊಮ್ಮಿದೆ.
ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು 8 ವಾರಗಳನ್ನು ಪೂರೈಸಿರುವ ಈ ಚಿತ್ರವು ಸೆಪ್ಟೆಂಬರ್ 4 ರಿಂದ ಪ್ರಸಿದ್ಧ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಿಸುವ ಪ್ರೇಕ್ಷಕರಿಂದ ಈ ಕಾಮಿಡಿ ಚಿತ್ರಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಈ ಬಿಗ್ ಬಜೆಟ್ ಸಿನಿಮಾವನ್ನು ಇಂದೂ ಕುಮಾರ್, ಅಜಯ್ ದೇವಗನ್, ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಅಶೋಕ್ ಠಾಕೇರಿಯಾ, ಆನಂದ್ ಪಂಡಿತ್ ಹಾಗೂ ಕುಮಾರ್ ಮಂಗತ್ ಪಾಠಕ್ ಜಂಟಿಯಾಗಿ ನಿರ್ಮಿಸಿದ್ದಾರೆ. ಅಜಯ್ ದೇವಗನ್ ಅವರೊಂದಿಗೆ ರಿತೇಶ್ ದೇಶ್‌ಮುಖ್, ಅರ್ಷದ್ ವಾರ್ಸಿ, ಜಾವೇದ್ ಜಾಫ್ರಿ, ರವಿ ಕಿಶನ್, ಸಂಜಯ್ ಮಿಶ್ರಾ, ಉಪೇಂದ್ರ ಲಿಮಾಯೆ, ಅಂಜಲಿ ಆನಂದ್, ಸಂಜೀದಾ ಶೇಖ್, ಈಶಾ ಗುಪ್ತಾ ಮತ್ತು ವಿಜಯ್ ಪಾಟ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

