HomeKarnatakaಬೈಕ್ ಶೋ ರೂಂ, ಬಟ್ಟೆ ಅಂಗಡಿಗಳಿಗೆ ನುಗ್ಗಿ ದುಷ್ಕರ್ಮಿಗಳ ದಾಂಧಲೆ; 8 ಬೈಕ್ ಗಳನ್ನು ಹೊರಗೆಳೆದು...

ಬೈಕ್ ಶೋ ರೂಂ, ಬಟ್ಟೆ ಅಂಗಡಿಗಳಿಗೆ ನುಗ್ಗಿ ದುಷ್ಕರ್ಮಿಗಳ ದಾಂಧಲೆ; 8 ಬೈಕ್ ಗಳನ್ನು ಹೊರಗೆಳೆದು ಬೆಂಕಿ ಹಚ್ಚಿದ ಕಿಡಿಗೇಡಿಗಳು

ಮಂಡ್ಯ: ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಭೆ ವೇಳೆ ದುಷ್ಕರ್ಮಿಗಳು ಸಿಕ್ಕ ಸಿಕ್ಕ ಅಂಗಡಿಗಳ ಮೇಲೆ ಅಟ್ಟಹಾಸ ಮೆರೆದು ಬೆಂಕಿ ಹಚ್ಚಿದ್ದಾರೆ. ಸಾಲು ಸಾಲು ಅಂಗಡಿಗಳು, ಬೈಕ್ ಶೋ ರೂಂ ಗಳು ಕಿಡಿಗೇಡಿಗಳ ಆಕ್ರೋಶಕ್ಕೆ ಹೊತ್ತಿ ಉರಿದಿವೆ.

ಬೈಕ್ ಶೋ ರೂಂ ಗೆ ನುಗ್ಗಿರುವ ದುಷ್ಕರ್ಮಿಗಳು, ಬೈಕ್ ಗಳನ್ನು ಹೊರಗೆಳೆದು ತಂದು ಬೆಂಕಿ ಹಚ್ಚಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 7 ಪಲ್ಸರ್ ಬೈಕ್, 1 ಡ್ಯೂಕ್ ಬೈಕ್ ಗೆ ಬೆಂಕಿ ಹಚ್ಚಿದ್ದಲ್ಲದೇ, ಶೂ ರೂಂ ಗೂ ಬೆಂಕಿ ಇಟ್ಟಿದ್ದಾರೆ.

ದುಷ್ಕರ್ಮಿಗಳ ಕೃತ್ಯದಿಂದ 60-70 ಲಕ್ಷದಷ್ಟು ನಷ್ಟವುಂಟಾಗಿದೆ. ಸಾಲ ಮಾಡಿ ಶೋ ರೂಂ ತೆಗೆದಿದ್ದೆ. ಎಲ್ಲದಕ್ಕೂ ಬೆಂಕಿ ಹಚ್ಚಿ ಹೋಗಿದ್ದಾರೆ ಎಂದು ಶೂ ರೂಂ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಲಮಂಗಲದ ಹಲವೆಡೆ ಬಟ್ಟೆ ಅಂಗಡಿ, ಬೈಕ್ ಶೋ ರೂಂ ಸೇರಿದಂತೆ ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಅಂಗಡಿ ಮಾಲೀಕರು ದಿಕ್ಕೇ ತೋಚದಂತಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular