HomeLatest Newsಇಂಥ ಕೆಳ ಮಟ್ಟಕ್ಕೂ ಇಳಿತಾರಾ?: ನೀಟ್ ಪೇಪರ್ ಲೀಕ್‌ನಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದ ನಿರ್ಮಲಾಗೆ ನೆಟ್ಟಿಗರಿಂದ...

ಇಂಥ ಕೆಳ ಮಟ್ಟಕ್ಕೂ ಇಳಿತಾರಾ?: ನೀಟ್ ಪೇಪರ್ ಲೀಕ್‌ನಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದ ನಿರ್ಮಲಾಗೆ ನೆಟ್ಟಿಗರಿಂದ ಛೀಮಾರಿ; ವಿಡಿಯೊ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮದ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ವಿದ್ಯಾರ್ಥಿಗಳ ಹಾಗೂ ಸಿಜೆಪಿ ಕಾರ್ಯಕರ್ತರ ಪ್ರತಿಭಟನೆ ಇದೀಗ ದೇಶವ್ಯಾಪಿ ಹರಡಿದ್ದು, ಕೇಂದ್ರ ಸರ್ಕಾರ ಅಕ್ಷರಶಃ ಅಲುಗಾಡಿದೆ.

ಇಷ್ಟು ದಿನಗಳ ಕಾಲ ಯಾವುದೇ ಕ್ರಮಕ್ಕೆ ಮುಂದಾಗದೇ ಇದ್ದ ಸರ್ಕಾರದ ಪರ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಸೆಲ್ಫಿ ವಿಡಿಯೊ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ತನಿಖೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆ ಮಾಡಲಾಗುವುದು, ಅಪರಾಧಿಗಳಿಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮೋದಿ ತಿಳಿಸಿದರು. ಆದರೆ ಇದ್ಯಾವುದಕ್ಕೂ ಮಣಿಯದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟುಹಿಡಿದಿದ್ದಾರೆ.

ಇನ್ನು ಇದೇ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಟ್ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರ ಕುರಿತು ಮಾತನಾಡಿದ್ದು, ‘ಸರ್ಕಾರ ತಪ್ಪಿತಸ್ಥರನ್ನು ಸರಿಯಾದ ಸಮಯಕ್ಕೆ ಬಂಧಿಸಿದೆ, ಮರುಪರೀಕ್ಷೆಯನ್ನು ಸರಿಯಾದ ಸಮಯಕ್ಕೆ ನಡೆಸಿದೆ, ಫಲಿತಾಂಶವನ್ನೂ ಸಹ ಸರಿಯಾದ ಸಮಯಕ್ಕೆ ಘೋಷಿಸಲಿದೆ, ಅಲ್ಲದೇ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಯಾವ ಶಿಕ್ಷಣ ಸಂಸ್ಥೆ ಆರಿಸಿಕೊಳ್ಳಬೇಕು ಎಂಬುದನ್ನು ಯೋಚಿಸಲು ಸಮಯ ಸಿಕ್ಕಿದೆ. ಇದೆಲ್ಲ ನಡೆಯುತ್ತಿದೆ. ಇನ್ನು ಯುವ ಜನತೆ ಬಂದು ಮೊದಲಿಗೆ ಪೇಪರ್ ಲೀಕ್ ನನಗೆ ಬೇಸರವನ್ನುಂಟುಮಾಡಿತು, ಆದರೆ ಬಳಿಕ ನಾನು ಅದನ್ನು ಅನುಕೂಲವನ್ನಾಗಿ ಬಳಸಿಕೊಂಡು ಚೆನ್ನಾಗಿ ಓದಿದೆ ಹಾಗೂ ನನ್ನ ಪರ್ಫಾಮೆನ್ಸ್ ಇನ್ನೂ ಹೆಚ್ಚಾಯಿತು ಎನ್ನುತ್ತಿದ್ದಾರೆ’ ಎಂದರು.

ಅಲ್ಲದೇ ಕಾಂಗ್ರೆಸ್ ಪಕ್ಷ ಮೊದಲಿಗೆ ಸಂಸತ್‌ನಲ್ಲಿ ಈ ಕುರಿತು ಚರ್ಚಿಸಬೇಕು ಎಂದಿತ್ತು, ಅದಕ್ಕೆ ಸರ್ಕಾರ ಸಿದ್ಧ ಎಂದು ಹೇಳಿದ ಮೇಲೆ ಇನ್ನೂ ಹೆಚ್ಚಿನ ಬೇಡಿಕೆಗಳನ್ನು ಹಾಕುತ್ತಾ ಚರ್ಚೆಗೆ ಬರುತ್ತಿಲ್ಲ, ಇದರಿಂದ ಕಾಂಗ್ರೆಸ್ ನೀಟ್ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗುತ್ತಿರುವುದು ತಿಳಿದುಬರುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದರು.

ಹೀಗೆ ನಿರ್ಮಲಾ ಸೀತಾರಾಮನ್ ಪೇಪರ್ ಲೀಕ್‌ನಿಂದ ಅನುಕೂಲವಾಯಿತು ಎಂದು ನೀಡಿರುವ ಹೇಳಿಕೆ ವಿರುದ್ಧ ನೆಟ್ಟಿಗರು ಕೆಂಡಕಾರಿದ್ದು, ಓರ್ವ ವಿದ್ಯಾವಂತೆಯಾಗಿ ಇಂತಹ ಕೀಳು ಮಟ್ಟದ ಹೇಳಿಕೆ ನೀಡುತ್ತಾರಾ ಎಂದು ಛೀಮಾರಿ ಹಾಕಿದ್ದಾರೆ. ನಿರ್ಮಲಾ ಅವರ ಈ ಹೇಳಿಕೆಯ ವಿಡಿಯೊವನ್ನು ಹಲವಾರು ಮಂದಿ ಹಂಚಿಕೊಂಡಿದ್ದು, ಟೀಕಿಸಿ ಟ್ರೋಲ್ ಮಾಡುತ್ತಿದ್ದಾರೆ.

https://x.com/Amockx2022/status/2080666530958721448?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular