HomeIndiaʼಫೆಮಿನಾ ಮಿಸ್ ಇಂಡಿಯಾʼ ಆಗಿ ರಾಜಸ್ತಾನದ ನಂದಿನಿ ಗುಪ್ತಾ

ʼಫೆಮಿನಾ ಮಿಸ್ ಇಂಡಿಯಾʼ ಆಗಿ ರಾಜಸ್ತಾನದ ನಂದಿನಿ ಗುಪ್ತಾ

ರಾಜಸ್ತಾನದ 19 ವರ್ಷದ ನಂದಿನಿ ಗುಪ್ತಾ 2023 ರ ಫೆಮಿನಾ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾರೆ.
ಮಣಿಪುರದ ಇಂಫಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ನಂದಿನಿ ಗುಪ್ತಾ ಅವರು ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡರು. ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರೆ, ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಅಪ್ ಆದರು.

ಮಿಸ್ ಇಂಡಿಯಾ ನಂದಿನಿ ಗುಪ್ತಾ ಬಗ್ಗೆ ನಿಮಗೆಷ್ಟು ಗೊತ್ತು ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ನಂದಿನಿ ಗುಪ್ತಾ ರಾಜಸ್ಥಾನದ ಕೋಟಾದವರು

*ಬಾಲ್ಯದಿಂದಲೇ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದ ನಂದಿನಿ ಗುಪ್ತಾ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆಯುತ್ತಿದ್ದಾರೆ.

*ಉದ್ಯಮಿ ರತನ್ ಟಾಟಾ, ನಂದಿನಿ ಗುಪ್ತಾ ಅವರಿಗೆ ಸ್ಫೂರ್ತಿ

*ಮನರಂಜನಾ ಉದ್ಯಮದಲ್ಲಿ ಮಾಜಿ ವಿಶ್ವ ಸುಂದರಿ, ನಟಿ-ನಿರ್ಮಾಪಕಿ ಪ್ರಿಯಾಂಕಾ ಚೋಪ್ರಾ ಅವರ ಸಾಧನೆಗಳು ಮತ್ತು ಸಮಾಜಕ್ಕೆ ಅವರ ಕೊಡುಗೆ ಬಗ್ಗೆ ನಂದಿನಿ ಗುಪ್ತಾ ಮೆಚ್ಚಿಕೊಳ್ಳುತ್ತಾರೆ

*ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಕೈಮಗ್ಗವನ್ನು ಉತ್ತೇಜಿಸಲು ನಂದಿನಿ ಗುಪ್ತಾ ಅವರು ಕೋಟಾ ಡೋರಿಯಾ ಸೀರೆಗಳ ಬಗ್ಗೆ ಪ್ರಚಾರ ಮಾಡುವ ಬಗ್ಗೆ ಉತ್ಸುಕರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular