HomeKarnatakaಮೆಟ್ರೋದಲ್ಲಿ ಸಿಕ್ಕ ಉಂಗುರವನ್ನು ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಹೋಂ ಗಾರ್ಡ್ಸ್

ಮೆಟ್ರೋದಲ್ಲಿ ಸಿಕ್ಕ ಉಂಗುರವನ್ನು ಮಾಲೀಕರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಹೋಂ ಗಾರ್ಡ್ಸ್

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಸಿಕ್ಕಿದ್ದ ಪ್ರಯಾಣಿಕರೊಬ್ಬರ ಚಿನ್ನದುಂಗರವನ್ನು ಮಹಿಳಾ ಹೋಂ ಗಾರ್ಡ್ಸ್ ಮಾಲೀಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಶಾಖೆಯಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ದಿವ್ಯಾ ಪ್ರಿಯದರ್ಶಿನಿ ಎಂಬುವವರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಮೆಟ್ರೋ ನಿಲ್ದಾಣದಿಂದ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿ ಇಳಿದಾಗ ತಮ್ಮ ಕೈಯಲ್ಲಿ ಉಂಗುರವಿಲ್ಲದಿರುವುದು ಗೊತ್ತಾಗಿದೆ. ತಕ್ಷಣ ಕಂಟ್ರೋಲ್ ರೂಂ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆನ್ನಿಗಾನಹಳ್ಳಿಯ ಮೆಟ್ರೋ ನಿಲ್ದಾಣದ 2ನೇ ಪ್ಲಾಟ್ ಫಾರ್ಮ್ ನಲ್ಲಿ ರೈಲು ನಿಂತಾಗ ಲೇಡಿಸ್ ಕೋಚ್ ಬಳಿ ಚಿನ್ನದುಂಗುರವೊಂದು ಬಿದ್ದಿತ್ತು. ಇದನ್ನು ಗಮನಿಸಿದ ಮಹಿಳಾ ಹೋಮ್ ಗಾರ್ಡ್ಸ್ ಶಿಲ್ಪಾ ಹಾಗೂ ಈಶ್ವರಮ್ಮ , ಬಿಎಂ ಆರ್ ಸಿಎಲ್ ಸಹಾಯಕ ಸುರಕ್ಷತಾ ಅಧಿಕಾರಿ ಕೆ.ಎನ್.ರಾಜಣ್ಣ ಅವರಿಗೆ ಕೊಟ್ಟಿದ್ದಾರೆ.

ಉಂಗುರ ಕಳೆದುಕೊಂಡಿದ್ದ ದಿವ್ಯಾ ವಾಪಾಸ್ ಬೆನ್ನಿಗಾನಹಳ್ಳಿ ನಿಲ್ದಾಣಕ್ಕೆ ಬಂದು ಸಹಾಯಕ ಸುರಕ್ಷಾ ಅಧಿಕಾರಿಯನ್ನು ವಿಚಾರಿಸಿದಾಗ, ಉಂಗುರವನ್ನು ದಿವ್ಯಾ ಅವರಿಗೆ ನೀಡಿದ್ದಾರೆ. ಹೋಂ ಗಾರ್ಡ್ಸ್ ಗಳ ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular