HomeKarnatakaNamma Metro: ಇತರ ನಗರಗಳ ಮೆಟ್ರೋ ಟಿಕೆಟ್ ದರ ಎಷ್ಟಿದೆ?

Namma Metro: ಇತರ ನಗರಗಳ ಮೆಟ್ರೋ ಟಿಕೆಟ್ ದರ ಎಷ್ಟಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ವಾರ್ಷಿಕ ದರ ಪರಿಷ್ಕರಣೆಯನ್ನು ಪ್ರಕಟಿಸಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಶೇ 5ರಷ್ಟು ದರ ಏರಿಕೆಯಾಗಲಿದೆ. ಈ ಕುರಿತು ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ದೇಶದಲ್ಲಿಯೇ ಬೆಂಗಳೂರು ನಗರದಲ್ಲಿ ಮೆಟ್ರೋ ದರಗಳು ಹೆಚ್ಚು ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಮೆಟ್ರೋ ದರ ಏರಿಕೆ ವಿಚಾರದಲ್ಲಿ ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದೆ.

ದೇಶದ ವಿವಿಧ ನಗರಗಳ ಮೆಟ್ರೋ ದರಗಳು ಮತ್ತು ಬೆಂಗಳೂರಿನ ನಮ್ಮ ಮೆಟ್ರೋ ದರಗಳನ್ನು ಹೋಲಿಕೆ ಮಾಡಿದರೆ ಬೆಂಗಳೂರು ಮೆಟ್ರೋ ದರಗಳು ಅತಿ ಹೆಚ್ಚು ಇವೆ ಎಂದು ಅಂಕಿ ಸಂಖ್ಯೆಗಳು ಹೇಳುತ್ತಿವೆ. ಕನಿಷ್ಠ ಮತ್ತು ಗರಿಷ್ಠ ಎರಡೂ ದರಗಳು ಉಳಿದ ಮೆಟ್ರೋ ಸೇವೆಗಿಂತ ಹೆಚ್ಚಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ರಚಿತವಾದ ಮೊದಲ ದರ ನಿಗದಿ ಸಮಿತಿ (FFC) ಪ್ರಕಾರ ವಾರ್ಷಿಕ ದರ ಪರಿಷ್ಕರಣೆ ಪಕಟಿಸಿದೆ ಎಂದು ತಿಳಿಸಿದೆ.

ದರ ನಿಗದಿ ಸಮಿತಿ (FFC) ಪ್ರಕಾರ BMRCLಗೆ 7.5 ವರ್ಷಗಳ ನಂತರ ಪರಿಷ್ಕೃತ ದರ ರಚನೆಯನ್ನು ಮತ್ತು 29 ರಿಂದ 10 ರವರೆಗಿನ ದರದ ವಲಯಗಳನ್ನು ಶಿಫಾರಸು ಮಾಡುವಾಗ ದರ ಪರಿಷ್ಕರಣೆ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು.

ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡಾವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ದರವನ್ನು ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಬೇರೆ ನಗರದ ಮೆಟ್ರೋ ದರಗಳ ಪಟ್ಟಿ

  • ನಮ್ಮ ಮೆಟ್ರೋ (96 ಕಿ.ಮೀ.). ಕನಿಷ್ಠ ದರ 11 ಮತ್ತು ಗರಿಷ್ಠ ದರ 95 ರೂ.
  • ದೆಹಲಿ ಮೆಟ್ರೋ (394 ಕಿ.ಮೀ). ಕನಿಷ್ಠ ದರ 11 ಮತ್ತು ಗರಿಷ್ಠ 64 ರೂ.
  • ಹೈದರಾಬಾದ್ (69 ಕಿ.ಮೀ). ಕನಿಷ್ಠ 10 ಮತ್ತು ಗರಿಷ್ಠ 69 ರೂ.ಗಳು
  • ಚೆನ್ನೈ (54 ಕಿ.ಮೀ.) ಕನಿಷ್ಠ 10 ಮತ್ತು ಗರಿಷ್ಠ 50 ರೂ.ಗಳು
  • ಮುಂಬೈ (80 ಕಿ.ಮೀ) ಕನಿಷ್ಠ10 ಮತ್ತು ಗರಿಷ್ಠ 80 ರೂ.ಗಳು
  • ಕೋಲ್ಕತ್ತಾ (73 ಕಿ.ಮೀ.) ಕನಿಷ್ಠ 5 ಮತ್ತು ಗರಿಷ್ಠ 24 ರೂ.ಗಳು
  • ಲಕ್ನೋ (22.9 ಕಿ.ಮೀ.) ಕನಿಷ್ಠ 10 ಮತ್ತು ಗರಿಷ್ಠ 60 ರೂ.ಗಳು
  • ಕೊಚ್ಚಿ (28 ಕಿ.ಮೀ.) ಕನಿಷ್ಠ 10 ಮತ್ತು ಗರಿಷ್ಠ 60 ರೂ.ಗಳು
  • ಜೈಪುರ (12 ಕಿ.ಮೀ.) ಕನಿಷ್ಠ 10 ಮತ್ತು ಗರಿಷ್ಠ 30 ರೂ.ಗಳು.

ಆದರೆ ಬಿಎಂಆರ್‌ಸಿಎಲ್ 2024-25 (31 ಮಾರ್ಚ್ 2025) ಹಣಕಾಸು ವರ್ಷದ ಅಂಕಿ ಅಂಶಗಳನ್ನು, ಹಣಕಾಸು ವರ್ಷ 2023-24 (31 ಮಾರ್ಚ್ 2024) ರ ಅಂಕಿ ಅಂಶಗಳಿಗೆ ಹೋಲಿಸಿದರೆ, ಸೂತ್ರ-ಆಧಾರಿತ ದರ ಪರಿಷ್ಕರಣೆ ಶೇ 10.20ರಷ್ಟು ವೆಚ್ಚ ಹೆಚ್ಚಳವನ್ನು ಸೂಚಿಸುತ್ತದೆ. ಆದಾಗ್ಯೂ, FFC ನಿಬಂಧನೆಗೆ ಅನುಗುಣವಾಗಿ ದರ ಪರಿಷ್ಕರಣೆಯನ್ನು ಕೇವಲ ಶೇ 5 ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸಮರ್ಥನೆಯನ್ನು ನೀಡಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular