ನಾನು ಪ್ರತಿ ವರ್ಷ ಪ್ರೀಮಿಯಂ ಕಟ್ಟುತ್ತಿದ್ದೇನೆ, ಆದ್ರೆ ನನಗೆ ಕಾಯಿಲೆಯೇ ಬಂದಿಲ್ಲ, ದುಡ್ಡೆಲ್ಲಾ ವೇಸ್ಟ್ ಆಯ್ತು ಅಂತ ಯೋಚಿಸಬೇಡಿ. ಇನ್ಶೂರೆನ್ಸ್ ಅನ್ನೋದು ಬರಿ ಖರ್ಚಲ್ಲ, ಅದು ನಮ್ಮ ಕುಟುಂಬದ ಸುತ್ತ ಇರುವ ಒಂದು ರಕ್ಷಾ ಕವಚ.ಅನಾರೋಗ್ಯ ಅನ್ನೋದು ಯಾವಾಗಲೂ ಹೇಳಿ ಕೇಳಿ ಬರೋದಿಲ್ಲ. ಅಚಾನಕ್ ಆಗಿ ದೊಡ್ಡ ಕಾಯಿಲೆ ಕಾಣಿಸಿಕೊಂಡಾಗ ಅಥವಾ ಸರ್ಜರಿ ಬೇಕಾದಾಗ ಲಕ್ಷಾಂತರ ರೂಪಾಯಿ ಬಿಲ್ ಆಗುತ್ತೆ.ಅನಾರೋಗ್ಯ ಅನ್ನೋದು ಯಾವಾಗಲೂ ಹೇಳಿ ಕೇಳಿ ಬರೋದಿಲ್ಲ. ಅಚಾನಕ್ ಆಗಿ ದೊಡ್ಡ ಕಾಯಿಲೆ ಕಾಣಿಸಿಕೊಂಡಾಗ ಅಥವಾ ಸರ್ಜರಿ ಬೇಕಾದಾಗ ಲಕ್ಷಾಂತರ ರೂಪಾಯಿ ಬಿಲ್ ಆಗುತ್ತೆ.
ಇವತ್ತಿನ ದಿನಗಳಲ್ಲಿ ಮನುಷ್ಯನಿಗೆ ಗಾಳಿ-ನೀರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿರೋದು ಹೆಲ್ತ್ ಇನ್ಶೂರೆನ್ಸ್ (Health Insurance). ಸಾಮಾನ್ಯವಾಗಿ ವಿಮೆಯಲ್ಲಿ ಲೈಫ್ ಇನ್ಶೂರೆನ್ಸ್ ಮತ್ತು ಜನರಲ್ ಇನ್ಶೂರೆನ್ಸ್ ಅಂತ ಬೇರೆ ವಿಧಗಳಿದ್ದರೂ ಮಧ್ಯಮ ವರ್ಗದ ಕುಟುಂಬಕ್ಕೆ ಸಂಕಷ್ಟದ ಸಮಯದಲ್ಲಿ ಆಸರೆಯಾಗೋದು ಮಾತ್ರ ಈ ಆರೋಗ್ಯ ವಿಮೆ.
ಇಂದಿನ ದಿನಗಳಲ್ಲಿ ತರಕಾರಿ ಬೆಲೆಗಿಂತ ಟ್ಯಾಬ್ಲೆಟ್ ಬೆಲೆಯೇ ಜಾಸ್ತಿ ಅಲ್ವಾ? ಒಂದು ಸಣ್ಣ ಜ್ವರ ಅಂತ ಆಸ್ಪತ್ರೆಗೆ ಹೋದ್ರೂ ಸಾಕು, ಬಿಲ್ ನೋಡಿ ಬಿಪಿ ರೈಸ್ ಆಗುತ್ತೆ ಇಂತಹ ಟೈಮ್‌ನಲ್ಲಿ ನಮಗೆ ಆಪದ್ಬಾಂಧವನಂತೆ ಸಹಾಯ ಮಾಡೋದು ಹೆಲ್ತ್ ಇನ್ಶೂರೆನ್ಸ್. ಆದ್ರೆ ನಮಗೆ ಗೊತ್ತಿರೋದು ಬರಿ ಅಡ್ಮಿಟ್ ಆದ್ರೆ ದುಡ್ಡು ಸಿಗುತ್ತೆ ಅನ್ನೋದು ಮಾತ್ರ. ಆದ್ರೆ ಪಾಲಿಸಿಯಲ್ಲಿ ಇನ್ನು ಏನೇನು ಅದ್ಭುತ ಸೌಲಭ್ಯಗಳಿವೆ ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್
1.ಆಸ್ಪತ್ರೆಗೆ ಸೇರೋ ಮುಂಚೆ ಬಂದ ಮೇಲೆ ಎರಡಕ್ಕೂ ಖರ್ಚು ಫ್ರೀ
ತುಂಬಾ ಜನರಿಗೆ ಈ ವಿಷಯ ಗೊತ್ತೇ ಇಲ್ಲ. ನೀವು ಆಸ್ಪತ್ರೆಗೆ ಅಡ್ಮಿಟ್ ಆಗೋಕೆ ಮುಂಚೆ ಮಾಡಿಸಿದ ಟೆಸ್ಟ್‌ಗಳು (Pre-hospitalization) ಮತ್ತು ಡಿಸ್ಚಾರ್ಜ್ ಆದ ಮೇಲೆ ತಗೊಳ್ಳೋ ಔಷಧಿ ಇಂಜೆಕ್ಷನ್ ಬಿಲ್ (Post-hospitalization) ಎಲ್ಲವನ್ನೂ ಕಂಪನಿಯೇ ಕೊಡುತ್ತೆ. ನೀವು ಬರಿ ಬಿಲ್ ಸಬ್‌ಮಿಟ್ ಮಾಡಿದ್ರೆ ಸಾಕು, ನಿಮ್ಮ ದುಡ್ಡು ವಾಪಸ್ ಬರುತ್ತೆ
2.ಪ್ರೈವೇಟ್ ರೂಮ್ ಬೇಕಾ? ಲಿಮಿಟ್ ಇಲ್ಲ
ಒಳ್ಳೆಯ ಪಾಲಿಸಿ ನಿಮ್ಮಲ್ಲಿದ್ರೆ, ನೀವು ಜನರಲ್ ವಾರ್ಡ್‌ನಲ್ಲಿ ಇರಬೇಕಿಲ್ಲ. ಪ್ರತ್ಯೇಕ ಪ್ರೈವೇಟ್ ರೂಮ್ ಅಥವಾ ಎಸಿ ರೂಮ್ ಬೇಕಿದ್ರೂ ಸಿಗುತ್ತೆ. ಅಷ್ಟೇ ಅಲ್ಲ, ICU ಬೆಡ್ ಚಾರ್ಜ್‌ಗೆ ಯಾವುದೇ ಕಟ್ಟುನಿಟ್ಟಾದ ಮಿತಿ (Capping) ಇರಲ್ಲ. ಆರಾಮಾಗಿ ಚಿಕಿತ್ಸೆ ಪಡಿಬಹುದು
3.ಮನಸ್ಸಿನ ಆರೋಗ್ಯಕ್ಕೂ ರಕ್ಷಣೆ
ಈಗಿನ ಒತ್ತಡದ ಲೈಫ್‌ನಲ್ಲಿ ಮಾನಸಿಕ ಸಮಸ್ಯೆಗಳು ಕಾಡೋದು ಸಹಜ. ಈ ಮೊದಲು ಇದಕ್ಕೆ ಇನ್ಶೂರೆನ್ಸ್ ಇರಲಿಲ್ಲ. ಆದ್ರೆ ಈಗಿನ ಹೊಸ ರೂಲ್ಸ್ ಪ್ರಕಾರ, ಮನೋವೈದ್ಯಕೀಯ ಚಿಕಿತ್ಸೆಗೂ (Psychiatric Treatment) ಇನ್ಶೂರೆನ್ಸ್ ಕವರ್ ಸಿಗುತ್ತೆ.
4.ಆಂಬ್ಯುಲೆನ್ಸ್ ಕಾಸ್ಟ್ ಕೂಡ ಕಂಪನಿದೇ
ತುರ್ತು ಟೈಮ್‌ನಲ್ಲಿ ಆಂಬ್ಯುಲೆನ್ಸ್‌ಗೆ ಸಾವಿರಾರು ರೂಪಾಯಿ ಕೇಳಿದ್ರೆ ಕಂಗಾಲಾಗಬೇಡಿ. ನಿಮ್ಮ ಇನ್ಶೂರೆನ್ಸ್ ಪಾಲಿಸಿಯಲ್ಲಿ ಈ ಸಾರಿಗೆ ವೆಚ್ಚವನ್ನೂ ಕ್ಲೇಮ್ ಮಾಡೋ ಅವಕಾಶ ಇರುತ್ತೆ.
5.ಜೇಬಿನಿಂದ ಒಂದು ರೂಪಾಯಿ ಕೊಡಬೇಕಿಲ್ಲ (Zero Co-payment)
ಒಳ್ಳೆಯ ಇನ್ಶೂರೆನ್ಸ್ ಕಂಪನಿ ಆರಿಸಿಕೊಂಡ್ರೆ ಅಲ್ಲಿ ಸೀರೋ ಕೋ-ಪೇಮೆಂಟ್ ಆಯ್ಕೆ ಇರುತ್ತೆ. ಅಂದ್ರೆ ಆಸ್ಪತ್ರೆ ಬಿಲ್ ಎಷ್ಟೇ ಆದ್ರೂ ಪೂರ್ತಿ ಹಣ ಇನ್ಶೂರೆನ್ಸ್ ಕಂಪನಿಯೇ ಕಟ್ಟುತ್ತೆ. ನೀವು ನಿಮ್ಮ ಜೇಬಿನಿಂದ ಒಂದು ಪೈಸೆ ಎಣಿಸೋ ಅವಶ್ಯಕತೆ ಇರಲ್ಲ.

