HomeKarnatakaಎರಡನೇ ಮದುವೆಗೆ ಸಜ್ಜಾದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್: ಆ.16ರಂದು ಕೊಡಗಿನಲ್ಲಿ ಅದ್ದೂರಿ ವಿವಾಹ

ಎರಡನೇ ಮದುವೆಗೆ ಸಜ್ಜಾದ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್: ಆ.16ರಂದು ಕೊಡಗಿನಲ್ಲಿ ಅದ್ದೂರಿ ವಿವಾಹ

ಬೆಂಗಳೂರು: ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಎರಡನೇ ವಿವಾಹಕ್ಕೆ ಸಜ್ಜಾಗಿದ್ದು, ಆಗಸ್ಟ್ 16ರಂದು ಕೊಡಗಿನಲ್ಲಿ ಹಸೆಮಣೆಯೇರಲಿದ್ದಾರೆ.

ಕೊಡಗಿನ ಪ್ರತಿಷ್ಠಿತ ರೆಸಾರ್ಟ್‌ನಲ್ಲಿ ಮೊಹಮ್ಮದ್ ನಲಪಾಡ್ ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಗಿದೆ. ಆಗಸ್ಟ್‌ 15ರಿಂದ 20ರವರೆಗೆ ಮಡಿಕೇರಿ ಹೊರವಲಯದ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್‌ ಕುಟುಂಬಸ್ಥರ ಒಡೆತನದ ಕೂರ್ಗ್‌ ವೈಲ್ಡರ್‌ನೆಟ್‌ ರೆಸಾರ್ಟ್‌ನಲ್ಲಿ ಮದುವೆ ನಡೆಯಲಿದೆ.

ಆಗಸ್ಟ್‌ 16ರಂದು ಮಧ್ಯಾಹ್ನ 12 ಗಂಟೆಗೆ ನಿಕಾಹ್‌ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇರಳ ಮುಖ್ಯಮಂತ್ರಿ ಸತೀಶನ್‌, ನಟರಾದ ಸುದೀಪ್‌, ಯಶ್‌ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್ ನಲಪಾಡ್ 2017ರಲ್ಲಿ ಸಮ್ರೀನ್ ಸೇಲಂ ಅವರನ್ನು ವಿವಾಹವಾಗಿದ್ದರು. ಅವರಿಂದ ದೂರಾಗಿ ಈಗ ಎರಡನೇ ವಿವಾಹವಾಗುತ್ತಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಐ. ಮುನೀರ್‌ ಅಹಮ್ಮದ್‌ ಅವರ ಮೂರನೇ ಪುತ್ರಿ ಮಲಿಹಾ ಫಾತಿಮಾ ಅವರನ್ನು ನಲಪಾಡ್‌ ವಿವಾಹವಾಗಲಿದ್ದಾರೆ.

ಮುನೀರ್‌ ಅಹಮ್ಮದ್‌ ಮತ್ತು ಎನ್‌.ಎ. ಹ್ಯಾರಿಸ್‌ ಕಳೆದ 20 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಮಲಿಹಾ ಫಾತಿಮಾ ಕಾನೂನು ವ್ಯಾಸಂಗ ಮಾಡಿದ್ದು, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಎರಡೂ ಕುಟುಂಬಗಳ ಸಮ್ಮತಿಯೊಂದಿಗೆ ಈ ವಿವಾಹ ನಿಶ್ಚಯವಾಗಿದೆ.

ಆಗಸ್ಟ್‌ 17ರಂದು ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶ ಇರಲಿದೆ. ಐದು ದಿನಗಳ ಮದುವೆ ಸಂಭ್ರಮಕ್ಕಾಗಿ ನಲಪಾಡ್‌ ಮತ್ತು ಮಲಿಹಾ ಫಾತಿಮಾ ಅವರ ಕುಟುಂಬಸ್ಥರು ರೆಸಾರ್ಟ್‌ನಲ್ಲಿ ತಂಗಲಿದ್ದು, ಈ ಅವಧಿಗೆ 104 ಕೊಠಡಿಗಳನ್ನು ಬುಕ್‌ ಮಾಡಲಾಗಿದೆ. ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಸಾರ್ವಜನಿಕರಿಗೆ ರೆಸಾರ್ಟ್‌ ಪ್ರವೇಶವನ್ನು ನಿರ್ಬಂಧಿಸಲಾಗುವುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular