ಮುಂಬೈನಲ್ಲಿ ಬುಧವಾರ ರಾತ್ರಿ ನಡೆದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ತಾರಾಗಣದ ಅದ್ಧೂರಿ ಉಪಸ್ಥಿತಿಯಿಂದಾಗಿ ಭಾರೀ ಸದ್ದು ಮಾಡಿದೆ. ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಅಭಿನಯದ ಈ ಸಿನಿಮಾದ ಸಂಗೀತ ಬಿಡುಗಡೆ ಕಾರ್ಯಕ್ರಮಕ್ಕೆ ಬಾಲಿವುಡ್ ಹಾಗೂ ದಕ್ಷಿಣ ಭಾರತದ ದಂಡೇ ಹರಿದುಬಂದಿತ್ತು. ಆದರೆ ಎಲ್ಲರ ಚಿತ್ತ ಸೆಳೆದಿದ್ದು ಮಾತ್ರ ಚಿತ್ರದ ನಾಯಕಿಯರಾದ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಅವರ ಫ್ಯಾಷನ್ ಸ್ಟೈಲ್.
ಕಾರ್ಯಕ್ರಮದ ರೆಡ್ ಕಾರ್ಪೆಟ್ ಮೇಲೆ ಕೆಂಪು ಬಣ್ಣದ ಪ್ಯಾಂಟ್ ಹಾಗೂ ಸೂಟ್ ಧರಿಸಿ ಬಂದ ಕಿಯಾರಾ ಅಡ್ವಾಣಿ ಆಕರ್ಷಕವಾಗಿ ಕಾಣಿಸಿಕೊಂಡರು. ಪ್ರಸಿದ್ಧ ಡಿಸೈನರ್ ಎಲಿ ಸಾಬ್ ವಿನ್ಯಾಸಗೊಳಿಸಿದ ಈ ಉಡುಪಿನಲ್ಲಿ ಕಿಯಾರಾ ಅವರ ಲುಕ್ ಟ್ರೆಂಡಿ ಹಾಗೂ ಪವರ್‌ಫುಲ್ ಆಗಿತ್ತು. ಈ ರಾಯಲ್ ಉಡುಪಿನ ಮೌಲ್ಯ ಲಕ್ಷಾಂತರ ರೂಪಾಯಿ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ನಟಿ ತಾರಾ ಸುತಾರಿಯಾ ಕಪ್ಪು ಬಣ್ಣದ ಲೇಸ್ ಡ್ರೆಸ್‌ನಲ್ಲಿ ಮಿಂಚಿದರು. ಹೆಲ್ಸಾ ಸ್ಟುಡಿಯೋ ವಿನ್ಯಾಸದ ಈ ಸಿಂಪಲ್ ಹಾಗೂ ಗ್ಲಾಮರಸ್ ಉಡುಪಿಗೆ ತಕ್ಕಂತೆ ವಿಂಟೇಜ್ ಶೈಲಿಯ ಆಭರಣಗಳನ್ನು ಧರಿಸಿದ್ದ ತಾರಾ, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಚಿತ್ರದ ಮತ್ತೊಬ್ಬ ಪ್ರಮುಖ ನಟಿ ಹುಮಾ ಖುರೇಷಿ ಶೈನಿಂಗ್ ಗನ್‌ಮೆಟಲ್ ವಿನ್ಯಾಸದ ಕಪ್ಪು ಗೌನ್‌ನಲ್ಲಿ ಭಾಗವಹಿಸಿದರೆ, ಕನ್ನಡಿಗರ ನೆಚ್ಚಿನ ನಟಿ ರುಕ್ಮಿಣಿ ವಸಂತ್ ಹಳದಿ ಬಣ್ಣದ ಕಾಸರ್ಟ್ ಉಡುಪಿನಲ್ಲಿ ಸರಳ ಹಾಗೂ ಸುಂದರವಾಗಿ ಕಂಗೊಳಿಸಿದರು. ಯಶ್ ಜೊತೆಗೆ ಚಿತ್ರದ ಇಡೀ ತಂಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ‘ಟಾಕ್ಸಿಕ್’ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

