HomeKarnatakaಗುತ್ತಿಗೆದಾರನನ್ನು ಕಿಡ್ನ್ಯಾಪ್‌ ಮಾಡಿ 16 ಲಕ್ಷ ಹಣ, ಚಿನ್ನಾಭರಣದೊಂದಿಗೆ ಪರಾರಿಯಾದ ಗ್ಯಾಂಗ್‌

ಗುತ್ತಿಗೆದಾರನನ್ನು ಕಿಡ್ನ್ಯಾಪ್‌ ಮಾಡಿ 16 ಲಕ್ಷ ಹಣ, ಚಿನ್ನಾಭರಣದೊಂದಿಗೆ ಪರಾರಿಯಾದ ಗ್ಯಾಂಗ್‌

ಮೈಸೂರು:ಗುತ್ತಿಗೆದಾರನನ್ನು ಕಿಡ್ನ್ಯಾಪ್‌ ಮಾಡಿ‌ದ್ದ ಗ್ಯಾಂಗ್ ವೊಂದು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿ 16 ಲಕ್ಷ ಹಣ, 3.5 ಲಕ್ಷ ಮೌಲ್ಯದ ಚಿನ್ನ ಕಸಿದು ಪರಾರಿಯಾಗಿರುವ ಘತನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಹೊರವಲಯದಲ್ಲಿ ಜುಲೈ 15 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಸೂರು ತಾಲೂಕು ಮುದೇಗೌಡನ ದೊಡ್ಡಿ ಗ್ರಾಮದ ಗುತ್ತಿಗೆದಾರ ರಾಮು ಕಿಡ್ನ್ಯಾಪ್ ಆದವರು.

ರಾಮು ತಮ್ಮ ತೋಟದಿಂದ ಮನೆಗೆ ವಾಪಸ್ ಬರುವಾಗ ನಾಲ್ವರ ತಂಡ ಕಿಡ್ನ್ಯಾಪ್ ಮಾಡಿದೆ. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿದ್ದಾರೆ. ‌ ನಂತರ ರಾಮು ಮೊಬೈಲ್‌ನಿಂದ ಹೆಂಡತಿಗೆ ಕರೆ ಮಾಡಿಸಿ ರಾತ್ರಿ ಮನೆಗೆ ಬರುವುದಿಲ್ಲ ಎಂದು ಹೇಳಿಸಿದ್ದಾರೆ. ರಾಮು ಕತ್ತಿನಲ್ಲಿದ್ದ 30 ಗ್ರಾಂ ಚೈನು, ಕೈಯಲ್ಲಿದ್ದ 10 ಗ್ರಾಂನ ಎರಡು ಉಂಗುರ ಜೇಬಿನಲ್ಲಿದ್ದ 50 ಸಾವಿರ ಹಣ ಕಸಿದುಕೊಂಡು ಎಸ್ಕೇಪ್ ಆಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನನ್ನ ಕೊಲೆ ಮಾಡಲು 9 ಲಕ್ಷಕ್ಕೆ ಸುಫಾರಿ ಕೊಟ್ಟಿದ್ದಾರೆ. ಕೊಲೆ ಮಾಡುವುದು ಬೇಡ ಎಂದರೆ 40 ಲಕ್ಷ ಕೊಡುವಂತೆ ತಲೆಗೆ ಹೊಡೆದಿದ್ದಾರ್ಂತೆ. ಹೆದರಿದ ರಾಮು ತನ್ನ ಬಳಿ 40 ಲಕ್ಷ ಇಲ್ಲ 16 ಲಕ್ಷ ಇದೆ ಎಂದಿದ್ದಾರೆ. ಹೆಂಡತಿಗೆ ಫೋನ್ ಮಾಡಿಸಿದ ಕಿಡ್ನ್ಯಾಪರ್ಸ್‌ ಬಾಮೈದ ಸುರೇಶ್ ಬರುತ್ತಾನೆ 16 ಲಕ್ಷ ಹಣ ಕೊಡು ಕಂಟ್ರಾಕ್ಟರ್ ಗೆ ಕೊಡಬೇಕೆಂದು ಹೇಳಿಸಿದ್ದಾರೆ. ನಂದಗುಂದ ಸೇತುವೆ ಬಳಿ ಕಪ್ಪು ಬಣ್ಣದ ಶರ್ಟ್ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ರಾಮು ಬಾಮೈದ ಹಣ ನೀಡಿದ್ದಾನೆ. ನಂತರ ಒಂದು ಗಂಟೆ ಕಾರಿನಲ್ಲಿ‌ ಸುತ್ತಾಡಿಸಿ ಅಜ್ಞಾನತ ಸ್ಥಳದಲ್ಲಿ ರಾಮು ಅವರನ್ನು ಬಿಟ್ಟು ಪರಾರಿಯಾಗಿದ್ದಾರೆ.

ವಿಷಯವನ್ನ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿಡ್ನ್ಯಾಪರ್ಸ್ ಪತ್ತೆಗೆ ಬಲೆ ಬೀಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular