HomeInternationalBREAKING: ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್ ಗೆ ಮತ್ತೆ ಶಾಕ್: ಮತ್ತೆ ಪ್ರಬಲ ಭೂಕಂಪ: ಆಫ್ಘಾನಿಸ್ಥಾನದಲ್ಲೂ ಕಂಪಿಸಿದ...

BREAKING: ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್ ಗೆ ಮತ್ತೆ ಶಾಕ್: ಮತ್ತೆ ಪ್ರಬಲ ಭೂಕಂಪ: ಆಫ್ಘಾನಿಸ್ಥಾನದಲ್ಲೂ ಕಂಪಿಸಿದ ಭೂಮಿ

ನಿನ್ನೆಯಷ್ಟೇ ಭಾರೀ ಪ್ರಬಲ ಭೂಕಂಪದಿಂದ ತತ್ತರಿಸಿದ್ದ ಮ್ಯಾನ್ಮಾರ್ ನಲ್ಲಿ ಮತ್ತೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.2ರಷ್ಟು ತೀವ್ರತೆ ದಾಖಲಾಗಿದೆ.

ನಿನ್ನೆಯಷ್ಟೇ ಸಂಭವಿಸಿದ ಪ್ರಬಲ ಭೂಕಂಪದಿಂದ ಮಯನ್ಮಾರ್ ಜನ ತತ್ತರಿಸಿ ಹೋಗಿದ್ದಾರೆ. ಮ್ಯಾನ್ಮಾರ್‌ನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 7.7 ಮತ್ತು 6.4 ತೀವ್ರತೆಯ ಎರಡು ಸತತ ಭೂಕಂಪಗಳು ಸಂಭವಿಸಿದ್ದು, ಇಂದು ಕೂಡ 4.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.

ಮ್ಯಾನ್ಮಾರ್ ಬಳಿಕ ಅಫ್ಘಾನಿಸ್ತಾನ, ತಜಕಿಸ್ತಾನದಲ್ಲಿಯೂ ಇಂದು ಬೆಳಗಿನ ಜಾವ ಭೂಕಂಪ ಸಂಭವಿಸಿದೆ. ಆಫ್ಘಾನಿಸ್ತಾನದಲ್ಲಿ ಮುಂಜಾನೆ 4 51ಕ್ಕೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.7 ರಷ್ಟು ತೀವ್ರತೆ ದಾಖಲಾಗಿದೆ. ತಜಕಿಸ್ತಾನದಲ್ಲಿ 4.2ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular