HomeKarnatakaಜೈಲಿನಿಂದ ಎಸ್ಕೇಪ್ ಆದ ಕೊಲೆ ಆರೋಪಿ; ಪೋಷಕರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಚ್ಚರಿ ಘಟನೆ...!

ಜೈಲಿನಿಂದ ಎಸ್ಕೇಪ್ ಆದ ಕೊಲೆ ಆರೋಪಿ; ಪೋಷಕರೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಅಚ್ಚರಿ ಘಟನೆ…!

ರಾಯಚೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನನ್ನು ಹಿಡಿದ ಪೋಷಕರು ಮತ್ತೆ ಪೊಲೀಸರಿಗೆ ತಂದು ಒಪ್ಪಿಸಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಅನ್ವರ್ ಪಾಷಾ ರಾಯಚೂರಿನ ದೇವದುರ್ಗ ಸಬ್ ಜೈಲಿನಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ. ಈತ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಪ್ರಿಯತಮೆಯ ಪತಿಯನ್ನೇ ಕೊಲೆಗೈದು ಅನ್ವರ್ ಪಾಷಾ ಜೈಲು ಸೇರಿದ್ದ. ಆದರೆ ಸೆ.3ರಂದು ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಹೀಗೆ ಜೈಲಿನಿಂದ ಪರಾರಿಯಾಗಿದ್ದ ಆರೋಪಿಯನ್ನು ಇದೀಗ ಆತನ ಪೋಷಕರೇ ಹಿಡಿದು ದೇವದುರ್ಗ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಅನ್ವರ್ ಪಾಷಾ, ತನ್ನ ಇಬ್ಬರು ಮಕ್ಕಳ ನೆನಪು ಕಾಡುತ್ತಿತ್ತು, ಅವರು ಕನಸಲ್ಲಿ ಬರುತ್ತಿದ್ದರು ಎಂದು ಕಥೆ ಹೇಳಿದ್ದಾನೆ ಎಂದು ತಿಲೀದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular