HomeLatest NewsBREAKING: ಮುಂಬೈ ಲೋಕಲ್ ಟ್ರೈನ್ ನಲ್ಲಿ ಕೈಕೊಟ್ಟ AC: ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

BREAKING: ಮುಂಬೈ ಲೋಕಲ್ ಟ್ರೈನ್ ನಲ್ಲಿ ಕೈಕೊಟ್ಟ AC: ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಎಸಿ ಕೈಕೊಟ್ಟ ಪರಿಣಾಮ ಪ್ರಯಾಣಿಕರು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಏಕಾಏಕಿ ಎಸಿ ಬಂದ್ ಆದ ಪರಿಣಾಮ ರೈಲಿನಲ್ಲಿದ್ದ ಪ್ರಯಾಣಿಕರು ಉಸಿರಾಟದ ಸಮಸ್ಯೆಯಿಂದ ಬಳಲಿದ್ದಾರೆ.

ಮುಂಬೈನ ಲೋಕಲ್ ಟ್ರೈನ್ ನಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮುಂಬೈ ನಿಲ್ದಾಣದ ಫ್ಲಾಟ್ ಫಾರ್ಮ್ -2ರಲ್ಲಿ ನಿಂತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ರೈಲಿನಲ್ಲಿ ಎಸಿ ಆಫ್ ಆಗಿದ್ದು, ರೈಲಿನ ಬೋಗಿಯಲ್ಲಿ ಪ್ರಯಾಣಿಕರು ಉಸಿರಾಡಲಾಗದೇ ಪರದಾಡಿದ್ದಾರೆ.

15 ನಿಮಿಷಗಳ ಕಾಲ ರೈಲಿನಲ್ಲಿ ಎಸಿ ಬಂದ್ ಆಗಿತ್ತು. ಈ ವೇಳೆ ಹಲವು ಪ್ರಯಾಣಿಕರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪ್ರಯಾಣಿಕರು ಅಸ್ವಸ್ಥರಾಗುತ್ತಿದ್ದಂತೆ ರೈಲಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಸಹ ಪ್ರಯಾಣಿಕರು ಅಸ್ವಸ್ಥ ಪ್ರಯಾಣಿಕರಿಗೆ ಆರೈಕೆ ಮಾಡಿದ್ದಾರೆ. 15 ನಿಮಿಷಗಳ ಬಳಿಕ ಎಸಿ ಆನ್ ಆಗಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ರೈಲಿನಲ್ಲಿ ಎಸಿ ಕೈಕೊಟ್ಟಿದ್ದಕ್ಕೆ ಪ್ರಯಾಣಿಕರಿಗಾದ ತೊಂದರೆಗೆ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular