HomeEntertainmentಸಂಗೀತ ಕೋಗಿಲೆ ಎಂ.ಎಸ್. ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ: ಚಿತ್ರದ ಶೀರ್ಷಿಕೆ ಮತ್ತು ಮುಹೂರ್ತದ ವಿವರ ಇಲ್ಲಿದೆ

ಸಂಗೀತ ಕೋಗಿಲೆ ಎಂ.ಎಸ್. ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ: ಚಿತ್ರದ ಶೀರ್ಷಿಕೆ ಮತ್ತು ಮುಹೂರ್ತದ ವಿವರ ಇಲ್ಲಿದೆ

ಖ್ಯಾತ ಸಂಗೀತ ಗಾಯಕಿ, ಭಾರತರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ನಲ್ಲಿ ಅಭಿನಯಿಸಲು ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಈ ಮಹತ್ವದ ಚಿತ್ರಕ್ಕೆ ‘ಎಂ.ಎಸ್. – ಎ ಲೆಗಸಿ ಆನ್ ಸ್ಕ್ರೀನ್’ (M.S. – A Legacy on Screen) ಎಂದು ಹೆಸರಿಡಲಾಗಿದ್ದು, ಚಿತ್ರತಂಡ ಅಧಿಕೃತವಾಗಿ ಪೋಸ್ಟರ್ ಹಾಗೂ ವಿವರಗಳನ್ನು ಹಂಚಿಕೊಂಡಿದೆ.

ಈ ಬಹುನಿರೀಕ್ಷಿತ ಸಿನಿಮಾವನ್ನು ಗೌತಮ್ ತಿನ್ನನುರಿ ನಿರ್ದೇಶಿಸಲಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರಕ್ಕೆ ಅಲ್ಲು ಅರವಿಂದ್, ಬನ್ನಿ ವಾಸ್ ಹಾಗೂ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನದ ಅಂಗವಾಗಿ ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ನಟ ಕಮಲ್ ಹಾಸನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಇಂಡಿಯನ್ ಕೋರಲ್ ಎನ್‌ಸಂಬಲ್ ತಂಡದವರಿಂದ ಗಾಯಕಿಗೆ ಸಂಗೀತ ನಮನ ಸಲ್ಲಿಕೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಡಿಯನ್ ಮ್ಯೂಸಿಕ್ ಲೆಜೆಂಡ್ ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ಪೋಷಿಸುತ್ತಿರುವುದು ರಶ್ಮಿಕಾ ಅವರ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ಪ್ರತಿಷ್ಠಿತ ಕಾರ್ಯ ಯೋಜನೆಯಾಗಿದೆ. ಸುಬ್ಬುಲಕ್ಷ್ಮಿ ಅವರು ಕೇವಲ ಗಾಯಕಿಯಾಗಿ ಅಷ್ಟೇ ಅಲ್ಲದೆ, ‘ಸೇವಾಸದನಂ’, ‘ಶಕುಂತಲೈ’, ‘ಸಾವಿತ್ರಿ’ ಹಾಗೂ ‘ಮೀರಾ’ ಮುಂತಾದ ಸಿನಿಮಾಗಳಲ್ಲೂ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular