HomeKarnatakaBIG NEWS: ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ ಜಿ.ಎಂ. ಸಿದ್ದೇಶ್ವರ್

BIG NEWS: ಪತ್ನಿ ಮತವನ್ನೂ ತಾವೇ ಹಾಕಿದ ಸಂಸದ ಜಿ.ಎಂ. ಸಿದ್ದೇಶ್ವರ್

ದಾವಣಗೆರೆ: ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಮತದಾನದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪತ್ನಿಯ ಮತವನ್ನೂ ತಾವೇ ಹಾಕಿದ ಘಟನೆ ನಡೆದಿದೆ.

ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ, ಪತ್ನಿ ಗಾಯತ್ರಿ ಸಿದ್ದೇಶ್ವರ್ ಬದಲಿಗೆ ಅವರ ಮತವನ್ನೂ ತಾವೇ ಹಾಕುವ ಮೂಲಕ ಚುನಾವಣೆ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದರೆ.

ಪತ್ನಿ ಗಾಯತ್ರಿ ಜೊತೆ ದಾವಣಗೆರೆ ಮಾಗನೂರು ಬಸಪ್ಪ ಶಾಲೆಗೆ ಮತದಾನಕ್ಕೆ ಆಗಮಿಸಿದ ಸಂಸದ ಸಿದ್ದೇಶ್ವರ್, ಪತ್ನಿ ವೋಟ್ ನ್ನು ತಾವೇ ಹಾಕಿದ್ದಾರೆ. ಮತ ಚಲಾಯಿಸುವಾಗ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಗೊಂದಲಕ್ಕೊಳಗಾಗಿದ್ದಾರೆ. ಈ ವೇಳೆ ಪತ್ನಿಗೆ ಸಹಾಯ ಮಾಡಲು ಹೋಗಿ ಪತ್ನಿಬದಲು ತಾವೇ ಮತ ಹಾಕಿ ಬಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತಮ್ಮ ಮತವನ್ನು ತಾವೇ ಹಾಕಿಕೊಳ್ಳಲು ಸಾಧ್ಯವಗದವರು ಇನ್ನು ಆಡಳಿತ ಹೇಗೆ ನಡೆಸುತ್ತಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular